ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ನ್ಯಾಯತರ್ಪು: ರಕ್ತೇಶ್ವರಿಪದವು ಸ.ಕಿ.ಪ್ರಾ. ಶಾಲೆಯಲ್ಲಿ ಪೋಷಕ-ಶಿಕ್ಷಕರ ಮಹಾಸಭೆ

ನ್ಯಾಯತರ್ಪು: ರಕ್ತೇಶ್ವರಿಪದವು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆಯ ಅಂಗವಾಗಿ ಪೋಷಕ-ಶಿಕ್ಷಕರ ಮಹಾಸಭೆ ಹಮ್ಮಿಕೊಳ್ಳಲಾಯಿತು.

ಎಸ್‌ಡಿಎಂಸಿ ಅಧ್ಯಕ್ಷ ಕೆ ಕುಶಾಲಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು.

ಮಕ್ಕಳಿಗೆ ಮತ್ತು ಪೋಷಕರಿಗೆ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ, ಲಕ್ಷ್ಮಣ ಗೌಡ ಇವರ ಪ್ರಾಯೋಜಕತ್ವದಲ್ಲಿ ಬಹುಮಾನ ವಿತರಿಸಲಾಯಿತು.

ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಶ್ರೀಮತಿ ಇಂದಿರಾ, ಮಾಜಿ ಅಧ್ಯಕ್ಷ ಯಾದವ ಗೌಡ, ರಕ್ತೇಶ್ವರಿಪದವು ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಸುನೀತಾ, ಆಶಾ ಕಾರ್ಯಕರ್ತೆ ಶ್ರೀಮತಿ ಶಶಿಕಲಾ, ಶಾಲಾ ನಾಯಕಿ ಆಧ್ಯಾ ಕೆ, ಉಪನಾಯಕಿ ಗೌತಮಿ, ಸದಸ್ಯರು, ಪೋಷಕರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಾಲೆಯ ಮುಖ್ಯಶಿಕ್ಷಕಿ ಚೈತ್ರಪ್ರಭಾ ಪ್ರಾಸ್ತಾವಿಸಿ, ಸ್ವಾಗತಿಸಿ, ಮಕ್ಕಳ ದಿನಾಚರಣೆ ಮಹತ್ವ ತಿಳಿಸಿದರು. ಸಹಶಿಕ್ಷಕಿ ಲಾವಣ್ಯ ನಿರೂಪಿಸಿ, ವಂದಿಸಿದರು.

Related posts

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ: ಕನ್ಯಾಡಿ ಸ.ಉ.ಹಿ.ಪ್ರಾ. ಶಾಲೆಗೆ ಸಮಗ್ರ ಪ್ರಶಸ್ತಿ

Suddi Udaya

ಉಜಿರೆಯಲ್ಲಿ ವಿಶೇಷ ಚೇತನರ ಗ್ರಾಮ ಸಭೆ

Suddi Udaya

ಲಾಯಿಲ: ರಬ್ಬರ್ ತೋಟಕ್ಕೆ ಬೆಂಕಿ: 75 ರಷ್ಟು ಮರಕ್ಕೆ ಹಾನಿ

Suddi Udaya

ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತ ಕಡಿರುದ್ಯಾವರ ಕಾನರ್ಪ ಕೌಡಂಗೆ ನಿವಾಸಿ ನೇಮಿರಾಜ ಗೌಡ ನಿಧನ

Suddi Udaya

ಹೊಸಂಗಡಿ ವಲಯದ ಒಕ್ಕೂಟದ ವತಿಯಿಂದ ಆರ್ಥಿಕ ಸಹಾಯಧನ

Suddi Udaya

ವಿಧಾನಪರಿಷತ್ತು ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಜು ಪೂಜಾರಿ

Suddi Udaya
error: Content is protected !!