September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಶಿರ್ಲಾಲು :ಬೆಳ್ತಂಗಡಿ ಕೋಟಿ ಚೆನ್ನಯ ಕ್ರೀಡಾಕೂಟ 2025 ರ ಆಮಂತ್ರಣ ಪತ್ರಿಕೆ ಬಿಡುಗಡೆ

ಬೆಳ್ತಂಗಡಿ : ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ(ರಿ) ಬೆಳ್ತಂಗಡಿ ಆಶ್ರಯದಲ್ಲಿ ಬಿಲ್ಲವ ಮಹಿಳಾ ವೇದಿಕೆ ಯುವಬಿಲ್ಲವ ವೇದಿಕೆ ಬೆಳ್ತಂಗಡಿ ಇದರ ಸಹಕಾರದೊಂದಿಗೆ ಡಿ. 7 ರಂದು ಬೆಳ್ತಂಗಡಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಲಿರುವ ಕೋಟಿ ಚೆನ್ನಯ ಕ್ರೀಡಾಕೂಟ 2025 ಇದರ ಆಮಂತ್ರಣ ಪತ್ರಿಕೆಯನ್ನು ಶ್ರೀ ಬ್ರಹ್ಮ ಬೈದರ್ಕಳ ಗರಡಿ ಶಿರ್ಲಾಲು ವಠಾರದಲ್ಲಿ ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮ ಯಶಸ್ವಿಯಾಗುವಂತೆ ಕ್ಷೇತ್ರದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಮಾತನಾಡಿದ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ(ರಿ) ಬೆಳ್ತಂಗಡಿ ಇದರ ಅಧ್ಯಕ್ಷ ಜಯವಿಕ್ರಮ ಕಲ್ಲಾಪು ಯುವ ಸಮುದಾಯದ ಸಬಲೀಕರಣಕ್ಕಾಗಿ ಈ ಕ್ರೀಡಾಕೂಟ ಆಯೋಜಿಸಲಾಗಿದೆ. ಕ್ರೀಡಾಕೂಟ ಯಶಸ್ವಿಯಾಗಿ ಸಂಪನ್ನಗೊಳ್ಳಲು ಎಲ್ಲರ ಸಹಕಾರವನ್ನು ಕೋರಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಸುಂದರ ಪೂಜಾರಿ, ಮಾಜಿ ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ದಕ್ಕ, ಸಿಎ ಬ್ಯಾಂಕ್ ಶಿರ್ಲಾಲು ಅಧ್ಯಕ್ಷ ಸುಧೀರ್ ಆರ್ ಸುವರ್ಣ, ಗೆಜ್ಜೆಗಿರಿ ಕ್ಷೇತ್ರದ ತಾಲೂಕು ಪ್ರಧಾನ ಸಂಚಾಲಕರಾದ ನಿತ್ಯಾನಂದ ನಾವರ, ಗರಡಿ ಆಡಳಿತ ಸಮಿತಿಯ ಗೌರವಾಧ್ಯಕ್ಷ ರಮಾನಂದ ಗುಡ್ಡಾಜೆ, ಅಧ್ಯಕ್ಷ ವಿಶ್ವನಾಥ ಸಾಲಿಯಾನ್, ಉಪಾಧ್ಯಕ್ಷ ಕೃಷ್ಣಪ್ಪ ಪೂಜಾರಿ ಕಟ್ಟ,ಕೋಶಾಧಿಕಾರಿ ಚಿದಾನಂದ ಇಂಚರ, ಸದಸ್ಯರುಗಳಾದ ಯಶೋಧರ ಸುವರ್ಣ ರಮೇಶ್ ಪೂಜಾರಿ ಚಂದ್ರಶೇಖರ ಸೂರ್ಲೋಡಿ,ರಮೇಶ್ ಸಿಎ ಬ್ಯಾಂಕ್,ಪ್ರಶಾಂತ್ ಇಂದ್ರಪ್ರಸ್ಥ, ನಂದ ಕುಮಾರ್, ರಮೇಶ್ ಆಚಾರಿಬೆಟ್ಟು, ದಿವಾಕರ ಜಾರಿಗೆದಡಿ, ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಶಿರ್ಲಾಲು ಅಧ್ಯಕ್ಷ ಸದಾಶಿವ ಪೂಜಾರಿ ಊರ, ಯುವಬಿಲ್ಲವ ವೇದಿಕೆ ಅಧ್ಯಕ್ಷ ಜ್ಞಾನೇಶ್ ಕುಮಾರ್, ಮಹಿಳಾ ವೇದಿಕೆಯ ಅಧ್ಯಕ್ಷ ಶೋಭ ಗೋಣಗುರಿ, ಯುವವಾಹಿನಿ ಸಂಚಾಲನ ಸಮಿತಿ ಅಧ್ಯಕ್ಷ ಯತೀಶ್ ಕರಂಬಾರು, ಬ್ರಹ್ಮ ಬೈದರ್ಕಳ ಗರಡಿ ಜಾತ್ರಾ ಸಮಿತಿಯ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ಸುದಲಾಯಿ, ಕಾರ್ಯದರ್ಶಿ ಪ್ರದೀಪ್ ಪಿಜಕೊಡಂಗೆ, ಕೋಶಾಧಿಕಾರಿ ರಕ್ಷಿತ್ ಪಿಜಕೊಡಂಗೆ, ಗೆಜ್ಜೆಗಿರಿ ಗ್ರಾಮ ಸಮಿತಿಯ ಅಧ್ಯಕ್ಷರಾದ ಉಮೇಶ್ ಸುವರ್ಣ, ಕಾರ್ಯದರ್ಶಿ ಅಶೋಕ ಮಡೆಮಾರು, ಶಿವಾನಂದ ಮಜಲಪಲ್ಕೆ, ಹರೀಶ್ ನೇತ್ರಬೈಲು, ಆನಂದ ಪೂಜಾರಿ ಕರಂಬಾರು, ಹರೀಶ್ ಹೆಚ್.ಎಸ್ ಆಟೋ, ಗಿರೀಶ್ ನಿಸರ್ಗ, ಗಣೇಶ್ ಪೊಸಲಾಯಿ ಹಾಗೂ ಊರವರು ಉಪಸ್ಥಿತರಿದ್ದರು.

ಯುವಬಿಲ್ಲವ ವೇದಿಕೆ ಬೆಳ್ತಂಗಡಿ ಅಧ್ಯಕ್ಷರಾದ ಎಮ್ ಕೆ ಪ್ರಸಾದ್ ಸ್ವಾಗತಿಸಿ ಮಾಜಿ ಅಧ್ಯಕ್ಷರಾದ ಹರೀಶ್ ಕಲ್ಲಾಜೆ ಧನ್ಯವಾದವಿತ್ತರು.

Related posts

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನೀರುಮಾರ್ಗ ಶಾಖೆಯ ಚತುರ್ಥ ವಾರ್ಷಿಕೋತ್ಸವದ ಪ್ರಯುಕ್ತ ಉಚಿತ ವೈದ್ಯಕೀಯ, ನೇತ್ರ ತಪಾಸಣೆ ಹಾಗೂ ದಂತ ಚಿಕಿತ್ಸಾ ಶಿಬಿರ

Suddi Udaya

ನಿಟ್ಟಡೆ ಕುಂಭಶ್ರೀ ಆಂ.ಮಾ. ಶಾಲಾ – ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ

Suddi Udaya

ಅನುಗ್ರಹ ಟ್ರೈನಿಂಗ್ ಕಾಲೇಜು ಡಿಪ್ಲೋಮಾ ಫ್ಯಾಶನ್ ಡಿಸೈನಿಂಗ್ ವಿದ್ಯಾರ್ಥಿಗಳಿಂದ ಬೆಳ್ತಂಗಡಿಯ ನೂರಾ ಗೋಲ್ಡ್‌ಗೆ ಭೇಟಿ

Suddi Udaya

ಲಾಯಿಲ ಮೊಸರು ಕುಡಿಕೆ ಉತ್ಸವದ ಅಧ್ಯಕ್ಷರಾಗಿ ಶ್ರದ್ದೇಶ್ ಗಾಣಿಗ, ಕಾರ್ಯದರ್ಶಿಯಾಗಿ ಅಜಯ್

Suddi Udaya

ಮೊಗ್ರು : ಕಲ್ಲಮಾಡ ಗುತ್ತಿಲಾರು ದಿ.ಭಾರತಿಯಮ್ಮ ಸ್ಮರಣಾರ್ಥ ನೂತನ ಬಸ್ ತಂಗುದಾಣ ಲೋಕಾರ್ಪಣೆ

Suddi Udaya

ಶ್ರೀ ಕ್ಷೇ.ಧ.ಗ್ರಾ.ಯೋ. ಬಿಸಿ ಟ್ರಸ್ಟ್ ಗುರುವಾಯನಕೆರೆ-ಕಣಿಯೂರು ವಲಯ ಒಕ್ಕೂಟದ ಪದಗ್ರಹಣ ಸಮಾರಂಭ

Suddi Udaya
error: Content is protected !!