23.5 C
ಪುತ್ತೂರು, ಬೆಳ್ತಂಗಡಿ
March 7, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ನವೀನ್ ನೆರಿಯ ವಿರುದ್ದ ದಾಖಲಾಗಿದ್ದ ದ್ವೇಷ ಭಾಷಣ ಪ್ರಕರಣ‌ ವಜಾಗೊಳಿಸಿದ ಹೈಕೋರ್ಟ್

ಬೆಳ್ತಂಗಡಿ: ಹಿಂದೂ ಮುಖಂಡರ ಮನೆಗಳಿಗೆ ತಡರಾತ್ರಿ ಪೋಲಿಸರು ತೆರಳಿ ಫೋಟೋ ತೆಗೆಯುತ್ತಿದ್ದ ಘಟನೆಗೆ ಸಂಬಂಧಿಸಿ, ಜೂ.4ರಂದು ಕಡಬ ಠಾಣೆಯ ಮುಂದೆ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವಿ.ಹಿಂ.ಪ. ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿ ದ್ವೇಷಭಾಷಣ ಮಾಡಿದ್ದಕ್ಕೆ ಕಡಬ ಠಾಣೆಯಲ್ಲಿ ದಾಖಲಾಗಿದ್ದ ಎಫ್.ಐ.ಆರ್.ನ್ನು ಹೈಕೋರ್ಟ್ ನ.12ರಂದು ವಜಾಗೊಳಿಸಿದೆ.

ತಡರಾತ್ರಿ ಸಂಘಟನೆಗಳ ಪ್ರಮುಖರ ಮನೆಗಳಿಗೆ ಪೊಲೀಸರು ತೆರಳಿ ಅವರ ಜತೆ ಫೋಟೋ ತೆಗೆದಿದ್ದರು. ಈ ಘಟನೆಯನ್ನು ಖಂಡಿಸಿ ಕಡಬ ಠಾಣೆಯ ಎದುರು ಜೂ.4ರಂದು ಸಂಜೆ ಪ್ರತಿಭಟನೆ ನಡೆಸಲಾಗಿದ್ದು, ನವೀನ್ ನೆರಿಯ ಅವರು ಭಾಷಣ ಮಾಡಿದ್ದರು. ಈ ಘಟನೆಯ ಬಗ್ಗೆ ದ್ವೇಷ ಭಾಷಣ ಮಾಡಿ ಕೋಮು ಸಾಮರಸ್ಯಕ್ಕೆ ಧಕ್ಕೆ ಮಾಡಲಾಗಿದೆ ಎಂದು ನವೀನ್ ನೆರಿಯ ವಿರುದ್ಧ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಇದನ್ನು ಪ್ರಶ್ನಿಸಿ ನವೀನ್ ನೆರಿಯ ಅವರು ಖ್ಯಾತ ವಕೀಲ ಅರುಣ್ ಶ್ಯಾಮ್ ಅವರ ಮೂಲಕ ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ಈ ಬಗ್ಗೆ ವಿಚಾರಣೆ ನಡೆದು, ನ.12ರಂದು ಹೈಕೋರ್ಟ್ ಅವರ ವಿರುದ್ದ ದಾಖಲಾಗಿದ್ದ ಎಫ್ ಐ ಆ‌ರ್ ನ್ನು ರದ್ದುಗೊಳಿಸಿ ಆದೇಶನೀಡಿದೆ.

Related posts

ಪಟ್ರಮೆ ಗ್ರಾ.ಪಂ. ಮಟ್ಟದ ಸ್ಪಂದನ ಸಂಜೀವಿನಿ ಮಹಿಳಾ ಒಕ್ಕೂಟದ ವಾರ್ಷಿಕ ಮಹಾಸಭೆ

Suddi Udaya

ಡಾ. ರೋಹನ್ ದೀಕ್ಷಿತ್ ರೋಟರೀ ಕ್ಲಬ್ ಸದಸ್ಯರಾಗಿ ಪದಗ್ರಹಣ

Suddi Udaya

ಧರ್ಮಸ್ಥಳ ಬೊಳ್ಮನಾರು ಜನನಿ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ

Suddi Udaya

ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವಿನೂತನ ‘ಸಿರಿ ಮಿಲ್ಲೆಟ್ ಕೆಫೆ’ ಧಾರವಾಡದಲ್ಲಿ ಶುಭಾರಂಭ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಭಾರತ್ ಸ್ಕೌಟ್ ಆಂಡ್ ಗೈಡ್ ವಿಭಾಗದ ‘ಬನ್ನಿ’ ಉದ್ಘಾಟನೆ

Suddi Udaya

ಧರ್ಮಸ್ಥಳ : ಶ್ರೀ ಮಂ.ಅ.ಪ್ರೌ. ಶಾಲೆಯಲ್ಲಿ ವಾರ್ಷಿಕ ಪ್ರತಿಭಾ ದಿನಾಚರಣೆ

Suddi Udaya
error: Content is protected !!