25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕಾರಿಂಜ ಸ. ಕಿ. ಪ್ರಾ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಹಾಗೂ ಪೋಷಕ-ಶಿಕ್ಷಕರ ಸಭೆ

ಉರುವಾಲು: ಕಾರಿಂಜ ಸ. ಕಿ. ಪ್ರಾ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಹಾಗೂ ಪೋಷಕ-ಶಿಕ್ಷಕರ ಸಭೆಯನ್ನು ಶಾಲಾ ಅಧ್ಯಕ್ಷ ಜಗನ್ನಾಥ ರೈ ಇವರ ಉಪಸ್ಥಿತಿಯಲ್ಲಿ ನಡೆಸಲಾಯಿತು.

ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಆಟೋಟ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಮಾಡಲಾಯಿತು. ಶಾಲೆಯ ದಾನಿಯಾದ ವಿನಯಕುಮಾರ್ ಇವರನ್ನು ಶಾಲೆಯ ವತಿಯಿಂದ ಗೌರವಿಸಲಾಯಿತು. ಮಕ್ಕಳ ಹಕ್ಕುಗಳು, ಅದರ ರಕ್ಷಣೆ ಬಗ್ಗೆ ಮಾಹಿತಿ ನೀಡಲಾಯಿತು.


ನಿವೃತ್ತ ಯೋಧರಾದ ಜೆ.ಕೆ ಪೂಜಾರಿ ಇಳಂತಿಲ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ‌ ಸಂದರ್ಭದಲ್ಲಿ ಶಾಲಾ ಉಪಾಧ್ಯಕ್ಷ ನುಸೈಬ, ಮಾಜಿ ಅಧ್ಯಕ್ಷ ಓಬಯ್ಯ ಪೂಜಾರಿ ಕಾರಿಂಜ , ಅಂಗನವಾಡಿ ಕಾರ್ಯಕರ್ತೆ ಶಶಿಪ್ರಭಾ, ಮಕ್ಕಳ ಪೋಷಕರು, ಶಾಲಾಭಿವೃದ್ಧಿ ಸಮಿತಿಯ‌ ಸದಸ್ಯರು ಹಾಗೂ ಊರವರು ಉಪಸ್ಥಿತರಿದ್ದರು.

ಮುಖ್ಯಗುರುಗಳಾದ ಗಿರಿಜಾ ಎನ್ ಸ್ವಾಗತಿಸಿ, ಸಹಶಿಕ್ಷಕರಾದ ಪರಮೇಶ್ವರ ಎಸ್ ನಿರೂಪಿಸಿದರು.

Related posts

ಇಂದು(ಜ.11) ಪೆರ್ಲ -ಬೈಪಾಡಿ ಬ್ರಹ್ಮಕಲಶೋತ್ಸವಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಭೇಟಿ

Suddi Udaya

ಧರ್ಮಸ್ಥಳ ಬೊಳ್ಮನಾರು ಜನನಿ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ

Suddi Udaya

ಉಜಿರೆ ಎಸ್.ಡಿ.ಎಮ್ ಆಂ.ಮಾ. (ಸಿ.ಬಿ.ಎಸ್.ಇ) ಶಾಲೆಗೆ ಇಂಗ್ಲೇಂಡಿನ ಟೀಮ್ ಮಲ್ಟಿ ಅಕಾಡೆಮಿ ಸಂಸ್ಥೆಯ ಸಿ.ಇ.ಒ ಭೇಟಿ

Suddi Udaya

ಡಿ:7ರಂದು ಬೆಳ್ತಂಗಡಿಯಲ್ಲಿ 12ನೇ ವರ್ಷದ ಕೋಟಿ- ಚೆನ್ನಯ ಕ್ರೀಡಾಕೂಟ

Suddi Udaya

ಇಂದಿನಿಂದ ದ.ಕ ಜಿಲ್ಲೆಯಲ್ಲಿ ವಿಧಾನಸಭೆ ಚುನಾವಣೆಗೆ ನಾಮಪತ್ರಗಳ ಸ್ವೀಕಾರ ಆರಂಭ: ಜಿಲ್ಲಾಧಿಕಾರಿ

Suddi Udaya

ಮಲೆಂಗಲ್ಲು ಉಮಾಮಹೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ: ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಂದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!