25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿಧಾರ್ಮಿಕವರದಿ

ಧರ್ಮಸ್ಥಳ ಲಕ್ಷದೀಪೋತ್ಸವ: 13ನೇ ವರ್ಷದ ಪಾದಯಾತ್ರೆ ಸಂಪನ್ನ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಶೀಘ್ರದಲ್ಲೇ ನಸಿ೯ಂಗ್‌ ಕಾಲೇಜು ಹಾಗೂ ಕೃಷಿ ಕಾಲೇಜು ಆರಂಭಿಸಲು ಯೋಜನೆ: ಡಾ.ಹೆಗ್ಗಡೆ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ನಸಿ೯ಂಗ್‌ ಕಾಲೇಜು ಹಾಗೂ ಕೃಷಿ ಕಾಲೇಜನ್ನು‌ ಈ ವರ್ಷ ಆರಂಭಿಸಲಾಗುವುದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಅವರು ನ.15 ರಂದುಶ್ರೀ ಕ್ಷೇತ್ರ ಧರ್ಮಸ್ಥಳದ ಭಗವಾನ್ ಮಂಜುನಾಥ ಸ್ವಾಮಿಯ ಲಕ್ಷ ದೀಪೋತ್ಸವ ಕಾರ್ಯಕ್ರಮದ ಅಂಗವಾಗಿ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಿಂದ ಧರ್ಮಸ್ಥಳದವರೆಗೆ ನಡೆದ 13ನೇ ವರ್ಷದ ಪಾದಯಾತ್ರೆಯ ಸಮಾರೋಪದಲ್ಲಿ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು.

ಪಾದಯಾತ್ರೆ ಶ್ರೀ ಕ್ಷೇತ್ರ ಧರ್ಮಸ್ಥಳದ ಸಂಪ್ರಾದಾಯದ ಒಂದು ಭಾಗವಾಗಿದ್ದು, ನೀವೆಲ್ಲಾ ‌ಪಾದಯಾತ್ರೆಯಲ್ಲಿ ಬಂದು ಪ್ರೀತಿ, ವಿಶ್ವಾಸ ವ್ಯಕ್ತಪಡಿಸಿದ್ದೀರಿ. ನಾವು ನಿಮ್ಮೋಂದಿಗೆ ಇದ್ದೇವೆ ಎಂದು ಅನೇಕ ಮಂದಿ ಬಂದು ಹೇಳಿರುವುದು ಸಂತಸ ತಂದಿದೆ.ಕ್ಷೇತ್ರದ ಮೇಲೆ ಬಂದ ಅಪವಾದಗಳು ಸ್ವಾಮಿಯ ಅನುಗ್ರಹದಿಂದ ಮುಕ್ತವಾಗಿದೆ ಎಂದರು. ಕ್ಷೇತ್ರದ ವತಿಯಿಂದ ಉಜಿರೆಯಲ್ಲಿ ಈ ವರ್ಷ ನಸಿ೯ಂಗ್ ಕಾಲೇಜು ಆರಂಭಿಸುತ್ತೇವೆ. ಕೃಷಿ ಕಾಲೇಜನ್ನು‌ ಆರಂಭಿಸುವ ಯೋಜನೆ ಇದ್ದು, ಇದಕ್ಕೆ 50 ರಿಂದ 100 ಎಕ್ರೆ ಜಾಗಬೇಕು. ಇದು ಎಲ್ಲಿ ಎಂದು ಇನ್ನೂ ಆಗಿಲ್ಲ ಎಂದು ತಿಳಿಸಿದರು.

ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶೀಕ ಆಡಳಿತ ಮೊಕ್ತೇಸರರಾದ ಶರತ್‌ಕೃಷ್ಣ ಪಡ್ವೆಟ್ನಾಯ ಶುಭ ಹಾರೈಸಿದರು. ಶಾಸಕ ಹರೀಶ್ ಪೂಂಜ ಅವರು ಮಾತನಾಡಿ, ಧಾರ್ಮಿಕ ಕ್ಷೇತ್ರವೊಂದು ಯಾವ ರೀತಿಯಲ್ಲಿ ಕೆಲಸ ಮಾಡಬೇಕು ಎಂಬುದಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಜಗತ್ತಿಗೆ ಮಾದರಿಯಾಗಿದೆ. ಸಾಮಾಜಿಕ ಬದ್ಧತೆಯಲ್ಲಿ ಕೆಲಸ ಮಾಡುವವರು ವ್ಯಕ್ತಿ ಪೂಜ್ಯ ಖಾವಂದರು ಎಂದು ತಿಳಿಸಿದರು. ವಿಧಾನ ಪರಿಷತ್ ಶಾಸಕ ಕೆ.ಪ್ರತಾಪಸಿಂಹ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ವಷ೯ದಿಂದ ವಷ೯ಕ್ಕೆ ಪಾದಯಾತ್ರೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಕೋಟ್ಯಾಂತರ ಜನರ ಶ್ರದ್ಧಾ ಕೇಂದ್ರವಾಗಿರುವ ಧಮ೯ಸ್ಥಳದ ಕಾರ್ಯಕ್ರಮಗಳು ನಮ್ಮೆಲ್ಲರನ್ನೂ ಒಟ್ಟಾಗಿಸುತ್ತದೆ. ಭಜನೆ ಇಂದು ಆಧ್ಯಾತ್ಮಿಕತೆಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಡಿ.ಹಷೇ೯ಂದ್ರ ಕುಮಾರ್, ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ ಬರೋಡ, ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಕಾಯ೯ದಶಿ೯ ಡಾ.ಸತೀಶ್ಚಂದ್ರ,‌ ಕಾಲೇಜುನಪ್ರಾಚಾಯ೯ ವಿಶ್ವನಾಥ್,ಪೂರಣ್ ವಮ೯, ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್, ವೀರೂ ಶೆಟ್ಟಿ, ಸುಬ್ರಹ್ಮಣ್ಯ ಕುಮಾರ್ ಅಗತ೯, ಸೋನೀಯ ಯಶೋವಮ೯, ಅಖಿಲ ಕರ್ನಾಟಕ ಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷ ವಸಂತ ಸಾಲ್ಯಾನ್, ತಾಲೂಕು ಅಧ್ಯಕ್ಷೆ ಕಾಸಿಂ ಮಲ್ಲಿಗೆ ಮನೆ, ಸಿರಿ ಸಂಸ್ಥೆಯ ನಿರ್ದೇಶಕ ಕೆ.ಎನ್ ಜನಾರ್ದನ್, ಉದ್ಯಮಿ ಮೋಹನ ಶೆಟ್ಟಿಗಾರ್, ಉಜಿರೆ ಲಕ್ಷ್ಮೀ ಗ್ರೂಪ್ಸ್ ಮಾಲಕ ಮೋಹನ್ ಕುಮಾರ್, ಡಾ. ಎಲ್.ಹೆಚ್ ಮಂಜುನಾಥ್, ಭುಜಬಲಿ ಧಮ೯ಸ್ಥಳ, ಉದ್ಯಮಿ ಕಿರಣ್ ಚಂದ್ರ ಪುಷ್ಪಗಿರಿ, ಸಂಧ್ಯಾ ಟ್ರೆಡರ‍್ಸ್‌ನ ರಾಜೇಶ್ ಪೈ, ಪ್ರಶಾಂತ್ ಜೈನ್ ಅಮೃತ್ ಟೆಕ್ಸ್ಟೈಲ್ಸ್, ಪ್ರಭಾಕರ ಜೈನ್ ಮಹಾವೀರ ಸಿಲ್ಕ್, ವತ೯ಕರ ಸಂಘದ ಅಧ್ಯಕ್ಷ ಪ್ರಸಾದ್ ಬಿ.ಎಸ್, ರವೀಂದ್ರ ಶೆಟ್ಟಿ ಬಳಂಜ, ಉದ್ಯಮಿ ಅರವಿಂದ್ ಕಾರಂತ್, ರವಿ ಚಕ್ಕಿತ್ತಾಯ, ಗ್ರಾ.ಪಂ ಮಾಜಿ ಅಧ್ಯಕ್ಷೆ ಪುಷ್ಪಾವತಿ ಆರ್ ಶೆಟ್ಟಿ,ಶಾಂತ ಬಂಗೇರ, ಕಿರಣ್ ಶೆಟ್ಟಿ ಜೈನಪೇಟೆ, ಶೀತಲ್ ಜೈನ್ ಪೌರನ್, ಹರಿಯಂತ ಜೈನ್ ಬೆಳ್ತಂಗಡಿ ಅಜೇಯ್ ಶೆಟ್ಟಿ ಉಜಿರೆ, ಪದ್ಮಪ್ರಸಾದ್ ಜೈನ್ ಧಮ೯ಸ್ಥಳ,‌ಪ್ರಿಯಾಂಕ ಜೈನ್ ಧಮ೯ಸ್ಥಳ, ಮಮತಾ ಎಂ. ಶೆಟ್ಟಿ, ರಾಜಶೇಖರ ಅಜ್ರಿ, ಶ್ರಿಧರ ಕೆ.ವಿ ಉಜಿರೆ, ಶಶಿಧರ ಕಲ್ಮಂಜ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ| ಶ್ರೀನಾಥ್, ನ್ಯಾಯವಾದಿ ಧನಂಜಯ ರಾವ್, ಸೀತಾರಾಮ ಬಿ.ಎಸ್ ಬೆಳಾಲ್, ಜಯಂತ್ ಶೆಟ್ಟಿ ಕುಂಟಿನಿ, ತಿಮ್ಮಪ್ಪ ಗೌಡ ಬೆಳಾಲು, ಪುಷ್ಪರಾಜ ಹೆಗ್ಡೆ, ಉಜಿರೆ ಗ್ರಾ.ಪಂ ಅಧ್ಯಕ್ಷೆ ಉಷಾ ಕಿರಣ್ ಕಾರಂತ್, ಉಪಾಧ್ಯಕ್ಷ ರವಿ ಬರೇಮೇಲು, ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಚ, ಜಯಪ್ರಕಾಶ್ ಶೆಟ್ಟಿ ಉಜಿರೆ, ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷರುಗಳಾದ, ಡಿ.ಎ ರಹಿಮಾನ್, ತಿಮ್ಮಪ್ಪ ಗೌಡ, ಕಿಶೋರ್ ಹೆಗ್ಡೆ, ಯದುಪತಿ ಗೌಡ, ಸತೀಶ್ ಕಾಮತ್ ಕಡಿರುದ್ಯಾವರ, ಈಶ್ವರ ಬೈರಾ, ಹತ್ಯಡ್ಕ ಸಿ.ಎ ಬ್ಯಾಂಕ್ ಅಧ್ಯಕ್ಷ ರಾಘವೇಂದ್ರ ನಾಯಕ್, ಅವಿನಾಶ್ ಅಗ್ರೀಲಿಫ್, ಡಾ. ಪ್ರದೀಪ್ ನಾವೂರು, ತಾಲೂಕಿನ ಗಣ್ಯರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ಒಕ್ಕೂಟಗಳ ಪದಾಧಿಕಾರಿಗಳು, ಜ್ಞಾನವಿಕಾಸ ಕೇಂದ್ರದ ಸದಸ್ಯರು, ನಾಗರಿಕರು, ಹೆಗ್ಗಡೆ ಅಭಿಮಾನಿಗಳು ಉಪಸ್ಥಿತರಿದ್ದರು. ಗ್ರಾಮಾಭಿವೃದ್ಧಿ ಯೋಜನೆಯ ವಲಯಗಳಿಂದ ಬಂದ ಕಾರ್ಯಕರ್ತರು, ವಿಪತ್ತು ನಿರ್ವಹಣಾ ತಂಡ, ಉಜಿರೆಯ ಬದುಕು ಕಟ್ಟೋಣ ಬನ್ನಿ ತಂಡ, ವಿವಿಧ ಸಂಘ ಸಂಸ್ಥೆಯವರು ಭಾಗವಹಿಸಿದ್ದರು.

ಸುಪ್ರತಾ ಮತ್ತು ಶ್ರೀ ವತ್ಸ ತಂಡದವರ ಪ್ರಾರ್ಥನೆ ಬಳಿಕ ಉಜಿರೆ ರಬ್ಬರ್ ಸೊಸೈಟಿ ಉಪಾಧ್ಯಕ್ಷ ಅನಂತ ಭಟ್ ಮಚ್ಚಿಮಲೆ ಸ್ವಾಗತಿಸಿದರು.ಧಮ೯ಸ್ಥಳ ಗ್ರಾ.ಪಂ ಉಪಾಧ್ಯಕ್ಷ ಶ್ರೀ ನಿವಾಸ ರಾವ್ ಕಾಯ೯ಕ್ರಮ ನಿರೂಪಿಸಿದರು. ಆನಂದ ಸುವರ್ಣ ಧನ್ಯವಾದ ಸಮರ್ಪಿಸಿದರು.

Related posts

ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಯನ್ನು ವಿರೋಧಿಸಿ ಕಳೆಂಜ ಗ್ರಾ. ಪಂ. ನಲ್ಲಿ ಪ್ರತಿಭಟನೆ

Suddi Udaya

ಧರ್ಮಸ್ಥಳ  ಶ್ರೀ ಮಂ.ಸ್ವಾ. ಅ.ಹಿ. ಪ್ರಾ. ಶಾಲೆಯಲ್ಲಿ ‘ಆಟಿಡೊಂಜಿ ದಿನ ‘

Suddi Udaya

ಮಂಗಳೂರಿನ ಎ.ಆರ್.ಎಂ ಕಿಯಾ ಶೋರೂಮ್‌ನಲ್ಲಿ ನೂತನ “ಕಿಯಾ ಸೆಲ್ಟೋಸ್” ಕಾರು ಅನಾವರಣ

Suddi Udaya

ಪದ್ಮುಂಜ: ನೀಲಯ ನಲ್ಕೆ ನಿಧನ

Suddi Udaya

ಉಜಿರೆ ಎಸ್.ಡಿ.ಎಮ್ ನಲ್ಲಿ “ಆಧುನಿಕ ಉದ್ಯೋಗ ಮಾರುಕಟ್ಟೆಯಲ್ಲಿ ಉದ್ಯೋಗಾರ್ಹತಾ ಕೌಶಲ್ಯ ಮತ್ತು ಅವಕಾಶಗಳ ವಾಸ್ತವತೆ” ವಿಚಾರದ ಕುರಿತು ಉಪನ್ಯಾಸ ಕಾರ್ಯಕ್ರಮ

Suddi Udaya

ನಾರಾವಿ ಭಾರತ್ ಪ್ರೆಂಡ್ಸ್ ವತಿಯಿಂದ ಕಬಡ್ಡಿ ಪಂದ್ಯಾಟ: ಸುಲ್ಕೇರಿ ಜೆಕೆ ಅಟ್ಯಾಕರ್ಸ್ ತಂಡ ಪ್ರಥಮ ಸ್ಥಾನ

Suddi Udaya
error: Content is protected !!