ಗ್ರಾಮಾಂತರ ಸುದ್ದಿಧಾರ್ಮಿಕವರದಿ

ನಾಡಿನ ಪುಣ್ಯಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ಮೂಲಕ ಸಾಗಿ ಬಂದ ಸಾವಿರ ಸಾವಿರ ಭಕ್ತರು ಶ್ರೀ ಕ್ಷೇತ್ರದ ಮುಖ್ಯ ದ್ವಾರದಲ್ಲಿ ಡಿ.ಹರ್ಷೆಂದ್ರ ಕುಮಾರ್ ರವರಿಂದ ಭಕ್ತರಿಗೆ ಭವ್ಯ ಸ್ವಾಗತ

ಧರ್ಮಸ್ಥಳ: ಲಕ್ಷ ದೀಪೋತ್ಸವದ ಸಂಭ್ರಮದಲ್ಲಿರುವ ನಾಡಿನ ಪವಿತ್ರ ಪುಣ್ಯಕ್ಷೇತ್ರ ಶ್ರೀ ಧರ್ಮಸ್ಥಳಕ್ಕೆ ಸಾವಿರ ಸಾವಿರ ಸಂಖ್ಯೆಯಲ್ಲಿ ಭಕ್ತರು ಪಾದಯಾತ್ರೆಯ ಮೂಲಕ ನ.15 ರಂದು ಆಗಮಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ಮುಖ್ಯದ್ವಾರದಲ್ಲಿ ಕ್ಷೇತ್ರದ ವತಿಯಿಂದ ಡಿ.ಹರ್ಷೇಂದ್ರ ಕುಮಾರ್ ಭಕ್ತರನ್ನು ಆತ್ಮೀಯವಾಗಿ ಬರಮಾಡಿಕೊಂಡು ಸ್ವಾಗತಿಸಿದರು.

ಪಾದಯಾತ್ರೆಯುದ್ದಕ್ಕೂ ಎಸ್.ಡಿ.ಎಂ ಕಾಲೇಜು,ಓಷಿಯನ್ ಪರ್ಲ್,ಸಿದ್ದವನ,ಸೇವಾ ಭಾರತಿ,ಕನ್ಯಾಡಿ,ನೇತ್ರಾವತಿ ಹಾಗೂ ವಿವಿಧ ಕಡೆಗಳಲ್ಲಿ ಭಕ್ತಾದಿಗಳಿಗೆ ಬೆಲ್ಲ ನೀರು, ಮಚ್ಚಿಗೆ,ಶರಬತ್ತು,ಪಾನಕಾ ನೀಡಿ ಈ ಭಾಗದವರು ಸಹಕರಿಸಿದರು. ಕುಣಿತಾ ಭಜನೆ, ಚೆಂಡೆ,ವಾಲಕ,ಆನೆ,ಶಿವನ ಮೂರ್ತಿ,ಟ್ಯಾಬ್ಲೋಗಳು ಪಾದಯಾತ್ರೆಗೆ ಮೆರಗು ನೀಡಿತು.

ಪಾದಯಾತ್ರೆಯಲ್ಲಿ ಶಾಸಕ ಹರೀಶ್ ಪೂಂಜ,ಉಜಿರೆ ಜನಾರ್ಧನ ಸ್ವಾಮಿ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೆಸರ ಶರತ್ ಕೃಷ್ಣ ಪಡ್ವಟ್ನಾಯ, ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್,ಬರೋಡ ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ,ಉದ್ಯಮಿ ಮೋಹನ್ ಕುಮಾರ್ ಲಕ್ಷ್ಮೀ ಇಂಡಸ್ಟ್ರೀಸ್ ಉಜಿರೆ,ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ,ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್,ಪ್ರಮುಖರಾದ ಪೂರನ್ ವರ್ಮ, ಎಸ್.ಕೆ.ಡಿ.ಆರ್.ಡಿ.ಪಿ ಮುಖ್ಯ ನಿರ್ವಾಹಕ ಅಧಿಕಾರಿ ಅನಿಲ್ ಕುಮಾರ್ ಎಸ್.ಎಸ್,ಕೆ.ವಸಂತ ಸಾಲಿಯಾನ್ ಹಾಗೂ ಸಾವಿರಾರು ಭಕ್ತರು ಇದ್ದರು.

Related posts

ಉಜಿರೆಯ ಮಾನಸ ಜಿ ಶೆಟ್ಟಿ ರವರಿಗೆ ಪಿಎಚ್‌ಡಿ ಪದವಿ ಪ್ರಧಾನ

Suddi Udaya

ಕೋರಂ ಕೊರತೆ ಹಾಗೂ ಅಧಿಕಾರಿಗಳು ಭಾಗವಹಿಸದ್ದರಿಂದ ಕೊಕ್ಕಡ ಗ್ರಾಮಸಭೆ ಮುಂದೂಡಿಕೆ

Suddi Udaya

ಬೆಳಾಲು ಪ್ರೌಢಶಾಲೆ ಪೋಷಕರ ಸಮಾವೇಶ

Suddi Udaya

ಸುರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನದಲ್ಲಿ ಶಿವರಾತ್ರಿ ಪ್ರಯುಕ್ತ ಸಾಮೂಹಿಕ ಯೋಗ ಶಿವ ನಮಸ್ಕಾರ

Suddi Udaya

ಹಾಸನ ಜಿಲ್ಲಾ ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯಪಾಲಕ ಅಭಿಯಂತರರಾಗಿ ಶಿವಪ್ರಸಾದ್ ಅಜಿಲರಿಗೆ ಹೆಚ್ಚುವರಿ ಜವಾಬ್ದಾರಿ: ಇಂದು ಅಧಿಕಾರ ಸ್ವೀಕಾರ

Suddi Udaya

ಉಜಿರೆ: ಅನುಗ್ರಹದಲ್ಲಿ ಯು.ಕೆ.ಜಿ ಮಕ್ಕಳ ಪದವಿ ಪ್ರದಾನ ಸಮಾರಂಭ

Suddi Udaya
error: Content is protected !!