30 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಶಿಕ್ಷಣ ಸಂಸ್ಥೆ

ಕುಪೆಟ್ಟಿ, ಕಲ್ಲೇರಿ, ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಗುಂಡಿಗಳಿಗೆ ತಾತ್ಕಲಿಕ ಪರಿಹಾರ: ಪ್ರಯಾಣಿಕರಿಗೆ ಧೂಳಿನ ಗೋಳು

ಬೆಳ್ತಂಗಡಿ: ಕುಪೆಟ್ಟಿ. ಕಲ್ಲೇರಿ, ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಅವ್ಯವಸ್ಥೆ ಕುರಿತು ಸುದ್ದಿ ಉದಯ ವಾರಪತ್ರಿಕೆಯಲ್ಲಿ ವರದಿ ಪ್ರಕಟಗೊಂಡ ಬೆನ್ನಲ್ಲೇ ಗುಂಡಿಗಳ ದರ್ಬಾರ್ ರಸ್ತೆಗೆ ತಾತ್ಕಲಿಕ ಪರಿಹಾರವಾಗಿ ಜಲ್ಲಿ ಹುಡಿ ಮಿಶ್ರಣದಿಂದ ದೊಡ್ಡ ಗುಂಡಿಗಳನ್ನು ಮುಚ್ಚುವ ಕಾರ್ಯ ನಡೆಯುತ್ತಿದೆ.

ನ.13 ರಂದು “ವರ್ಷ ಕಳೆದರೂ ಅಭಿವೃದ್ಧಿ ಕಾಣದ ಕುಪ್ಪೆಟ್ಟಿ-ಕಲ್ಲೇರಿ-ಉಪ್ಪಿನಂಗಡಿ ರಾಜ್ಯ ಹೆದ್ದಾರಿ ಹದಗೆಟ್ಟ ರಸ್ತೆಯಲ್ಲಿ ಸಂಚಾರಕ್ಕೆ ಸಂಚಕಾರ! ಈ ಬಾರಿ ರಸ್ತೆ ಅಭಿವೃದ್ಧಿಯ ಗ್ರಹಣ ಬಿಡುತ್ತಾ ? ಎಂಬ ಶೀರ್ಷಿಕೆಯಡಿ ಸುದ್ದಿ ಉದಯ ವರದಿ ಪ್ರಕಟಿಸಿತ್ತು.” ಪಿಡಬ್ಲೂಡಿ ಇಲಾಖೆ ಗುಂಡಿಗಳನ್ನು ಮುಚ್ಚುವ ಕಾರ್ಯ ನಡೆಸುತ್ತಿದ್ದು ಮುಂದಿನ ದಿನಗಳಲ್ಲಿ ತೇಪೆ ಕಾರ್ಯವು ನಡೆಯಲಿದೆ ಎಂದು ತಿಳಿದು ಬಂದಿದೆ.

ಇದೀಗ ಮತ್ತೆ ಜಲ್ಲಿ ಹುಡಿಗಳಿಂದ ಹೊಂಡ ಮುಚ್ಚತ್ತಿರುವುದರಿಂದ ಧೂಳಿನಿಂದ ಆವೃತ್ತವಾಗಿರುವ ರಸ್ತೆ ಇಕ್ಕೆಲ್ಲೆಗಳು ಸವಾರಿಗೆ ಸಂಕಷ್ಟವಾಗಿ ಕಾಡುತ್ತಿದೆ. ಇನ್ನೂ ಈ ರಸ್ತೆಗೆ ತಾತ್ಕಲಿಕ ಪರಿಹಾರ ಕಂಡುಕೊಳ್ಳವ ಬದಲು ಹೊಸದಾಗಿಯೇ ರಸ್ತೆ ಮಾಡಬೇಕಿದೆ ಎಂಬುವುದು ಪ್ರಯಾಣಿಕರ ಅಭಿಪ್ರಾಯವಾಗಿದೆ. ಉಪ್ಪಿನಂಗಡಿ-ಗುರುವಾಯನಕೆರೆ ರಾಜ್ಯ ಹೆದ್ದಾರಿಯಲ್ಲಿ ಉಪ್ಪಿನಂಗಡಿವರೆಗೆ ನಡೆದಾಡಲು ಹಿಂಜರಿಯುವಷ್ಟು ಹದಗೆಟ್ಟಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಕಲ್ಲೇರಿ ಸಮೀಪದ ಶಿವಗಿರಿ ಎಂಬಲ್ಲಿ ರಸ್ತೆ ಮಧ್ಯೆ ಬಾಳೆ ಹಾಗೂ ತೆಂಗಿನ ಗಿಡ, ಕೇಸು ಮತ್ತು ಪಪ್ಪಾಯ ಗಿಡವನ್ನು ನೆಟ್ಟು ನಾಗರಿಕರು ಪ್ರತಿಭಟಿಸಿದ್ದಾರೆ. ನೆಟ್ಟ ಗಿಡಗಳನ್ನು ನ.14 ರಂದು ತೆರವುಗೊಳಿಸಲಾಯಿತು.

Related posts

ಕೆ. ಹರೀಶ್ ಕುಮಾರ್ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ ನೀಡಿ ಸರಕಾರ ಆದೇಶ

Suddi Udaya

ವೇಣೂರು: ನಡ್ತಿಕಲ್ಲು ನಿವಾಸಿ ಶೇಕಬ್ಬ ನಿಧನ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಧಾರವಾಡ ಎಸ್.ಡಿ.ಎಂ ಮೆಡಿಕಲ್ ಯೂನಿರ್ವಸಿಟಿ ಉಪಕುಲಪತಿ ಭೇಟಿ

Suddi Udaya

ತಣ್ಣೀರುಪಂತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷರಾಗಿ ಜಯಾನಂದ ಕಲ್ಲಾಪು, ಉಪಾಧ್ಯಕ್ಷರಾಗಿ ಸುನಿಲ್ ಅಣವು

Suddi Udaya

ಬೆಳ್ತಂಗಡಿ : ಆಡಳಿತ ಸೌಧದಲ್ಲಿ ಸರ್ವಜ್ಞ ಜಯಂತಿ ಆಚರಣೆ

Suddi Udaya

ಬೈಕ್ ಡಿವೈಡರ್ ಗೆ ಡಿಕ್ಕಿ ಹೊಡೆದ ಪ್ರಕರಣ: ಚಿಕಿತ್ಸೆ ಫಲಿಸದೆ ಕಾಲೇಜು ವಿದ್ಯಾರ್ಥಿ ಸಾವು

Suddi Udaya
error: Content is protected !!