22.9 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಲಾಯಿಲ : ದಯಾ ವಿಶೇಷ ಶಾಲೆಯಲ್ಲಿ ಮಕ್ಕಳ ದಿನಾಚರಣೆ

ಲಾಯಿಲ: ಕಪುಚಿನ್ ಕೃಷಿಕ್ ಸೇವಾ ಕೇಂದ್ರದ ಅಂಗ ಸಂಸ್ಥೆಯಾದ ದಯಾ ವಿಶೇಷ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಆಲಂಗಾರ್ ಲಯನ್ಸ್ ಕ್ಲಬ್ ಅಧ್ಯಕ್ಷ ಅಮಿತ್ ಡಿಸಿಲ್ವಾ ಮಾತನಾಡಿ ಈ ವಿಶೇಷ ಚೇತನ ಮಕ್ಕಳೊಂದಿಗೆ ಮಕ್ಕಳ ದಿನಾಚರಣೆಯ ಸಂಭ್ರಮವನ್ನು ಆಚರಿಸಿಕೊಳ್ಳಲು ದೊರಕಿರುವ ಈ ಅಮೂಲ್ಯ ಕ್ಷಣಕ್ಕಾಗಿ ನಾವು ಕೃತಜ್ಞರಾಗಿದ್ದೇವೆ. ಈ ಮಕ್ಕಳ ಸೇವೆ ಮಾಡುತ್ತಿರುವ ಸಂಸ್ಥೆಯು ಮುಂದೆ ಇನ್ನಷ್ಟು ಮಕ್ಕಳಿಗೆ ದಾರಿ ದೀಪವಾಗಲಿ ಎನ್ನುತ್ತಾ ಮಕ್ಕಳಿಗೆ ಶುಭಾಶಯವನ್ನು ಕೋರಿದರು.

ಕಾರ್ಯಕ್ರಮದ ಅತಿಥಿ ಮಿಸ್, ರುಬಿಯಾ ಎಫ್.ಎಸ್, ಮಾಲಕರು ಫ್ಯಾಶನ್ ಸ್ಟ್ರೀಟ್, ಬೆಳ್ತಂಗಡಿ, ಇವರು ಮಾತನಾಡಿ, ಮಕ್ಕಳನ್ನು ದೇವರ ಸ್ವರೂಪವೆಂದು ಭಾವಿಸಲಾಗುತ್ತದೆ. ಇಲ್ಲಿನ ಮಕ್ಕಳಂತು ಇನ್ನೂ ವಿಶೇಷ. ಸಂಸ್ಥೆಯು ಇನ್ನೂ ಇದೇ ರೀತಿ ಮುಂದುವರೆದು ಇನ್ನೂ ಮಕ್ಕಳಿಗೆ ಉಪಯೋಗವಾಗುವಂತಹ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜದಲ್ಲಿ ಉತ್ತುಂಗಕ್ಕೇರಲಿ ಎಂದು ಶುಭ ಹಾರೈಸಿದರು.

ಶಾಲೆಯ ನಿರ್ದೇಶಕರಾದ ವಂ.ಫಾ.ವಿನೋದ್ ಮಸ್ಕರೇನಸ್ ಮಾತನಾಡಿ, ಸಮಾಜದಲ್ಲಿ ನಾವು ಹಲವಾರು ಕೆಲಸಗಳನ್ನು ಮಾಡಬಹುದು. ಆದರೆ ಒಂದು ಸಮಾಜ ಮುಂದುವರೆಯಲು ಅಲ್ಲಿ ಜಾತಿ, ಮತ, ಭೇದ, ಅಂತಸ್ತುಗಳ ಹಂಗಿಲ್ಲದೇ ಜನರು ಒಗ್ಗೂಡಿ ಕೆಲಸ ಮಾಡಿದರೆ ಮಾತ್ರ ಅಂದು ಸ್ವಾತಂತ್ರ‍್ಯ ಪೂರ್ವದಲ್ಲಿ ನಮ್ಮ ದೇಶದ ಅನೇಕ ಮಹಾತ್ಮರು ಕಂಡಂತಹ ನವಭಾರತದ ಕನಸು ನನಸಾಗಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಆಲಂಗಾರ್ ಲಯನ್ಸ್ ಕ್ಲಬ್ ಖಜಾಂಜಿ ಲಯನ್ ರೋಕಿ ಮಸ್ಕರೇನಸ್, ಶ್ರೀಮತಿ ಲಿಲ್ಲಿ ಲೋಬೋ, ಮೂಡಬಿದ್ರೆ, ಮಿಸ್. ಮೆರಿನ್ ಎಂ.ಪಿ, ಆಪ್ತಸಮಾಲೋಚಕರು, ದಯಾ ವಿಶೇಷ ಶಾಲೆ, ಮಾಸ್ಟರ್. ಅಫ್ರಾಝ್ ವಿದ್ಯಾರ್ಥಿ ಪ್ರತಿನಿಧಿ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಕೋಮ್ ಸ್ಕೋಪ್ ರವರ ವತಿಯಿಂದ ಒದಗಿಸಿಕೊಡಲಾದ ಹೊಸ ಧ್ವನಿರ್ಧಕವನ್ನು ವಂ.ಫಾ.ವಿನೋದ್ ಮಸ್ಕರೇನಸ್ ರವರು ಉದ್ಘಾಟಿಸಿದರು. ಮಕ್ಕಳ ದಿನಾಚರಣೆಯ ಪ್ರಯುಕ್ತ, ಲಯನ್ಸ್ ಕ್ಲಬ್ ಆಲಂಗಾರ್ ರವರ ವತಿಯಿಂದ ಮಕ್ಕಳಿಗೆ ಬಾತ್ ಟವಲ್ ಹಾಗೂ ಹಣ್ಣು ಹಂಪಲುಗಳನ್ನು ನೀಡಿದರೆ, ಫ್ಯಾಶನ್ ಸ್ಟ್ರೀಟ್, ಬೆಳ್ತಂಗಡಿ, ಇವರ ವತಿಯಿಂದ ಎಲ್ಲಾ ಮಕ್ಕಳಿಗೆ ಉಡುಪುಗಳನ್ನು ವಿತರಿಸಲಾಯಿತು. ಶ್ರೀಮತಿ.ಲಿಲ್ಲಿ ಲೋಬೋ, ಮೂಡಬಿದ್ರೆ, ಇವರ ವತಿಯಿಂದ ಮಕ್ಕಳಿಗೆ ಇಂದಿನ ಊಟೋಪಚಾರದ ವ್ಯವಸ್ಥೆಯನ್ನು ಮಾಡಲಾಯಿತು.

ಕಾರ್ಯಕ್ರಮದಲ್ಲಿ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಮಕ್ಕಳಿಂದ ಹಾಗೂ ಶಿಕ್ಷಕರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಾಯಿತು.
ಶಾಲಾ ಸಿಬ್ಬಂದಿ ಕಿರಣ್ ಮಿರಾಂದ ಸ್ವಾಗತಿಸಿ, ಶಿಕ್ಷಕಿ ಮಿಸ್. ಸುಮನಶ್ರೀ ವಂದಿಸಿ, ವಿಶೇಷ ಶಿಕ್ಷಕಿ ಶ್ರೀಮತಿ ಸುಜಾತ ಕಾರ್ಯಕ್ರಮವನ್ನು ನಿರೂಪಿಸಿದರು.

Related posts

ಎ.20: ಸಿಬಿಕೆ ಕಪ್-2025 ಹೊನಲು ಬೆಳಕಿನ ವಾಲಿಬಾಲ್ ಹಾಗೂ ಹಗ್ಗಜಗ್ಗಾಟ ಪಂದ್ಯಾಟ

Suddi Udaya

ಬಂದಾರು: ಪೆರ್ಲ ಬೈಪಾಡಿಯ ಕಾಡಂಡ ಬಳಿ ಗುಡ್ಡಕ್ಕೆ ಬೆಂಕಿ

Suddi Udaya

ಭಾರೀ ಮಳೆಗೆ ಉಜಿರೆ ಶಿವಾಜಿನಗರದಲ್ಲಿ ಗುಡ್ಡ ಕುಸಿತ: ಮನೆಯವರು ಅಪಾಯದಿಂದ ಪಾರು

Suddi Udaya

ಸುಲ್ಕೇರಿ ಶ್ರೀ ರಾಮ ಶಾಲೆಯಲ್ಲಿ ಯಕ್ಷಧ್ರುವ ಯಕ್ಷ ಶಿಕ್ಷಣ ನಾಟ್ಯಾಭ್ಯಾಸ ಉದ್ಘಾಟನೆ

Suddi Udaya

ನಾಳೆ (ಜ.14): ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ನಾರಾವಿ ಮಹಾಶಕ್ತಿ ಕೇಂದ್ರದ ವ್ಯಾಪ್ತಿಯ ಪ.ಜಾತಿಯ ಕಾಲೋನಿಗಳಲ್ಲಿ ಸಾಮರಸ್ಯದ ಸಂಕ್ರಾಂತಿ

Suddi Udaya

ಸರ್ವರಿಗೂ ಹೊಸ ವರ್ಷದ ಶುಭಾಶಯಗಳು: ಪರಸ್ಪರ ಪ್ರೀತಿ-ವಿಶ್ವಾಸ, ಗೌರವದೊಂದಿಗೆ, ಶಾಂತಿ ಸಾಮರಸ್ಯ ಮೂಡಿಬರಲಿ, ಮಾನವೀಯತೆ ಮೆರೆಯಲಿ: ಡಾ. ಡಿ ವೀರೇಂದ್ರ ಹೆಗ್ಗಡೆ

Suddi Udaya
error: Content is protected !!