23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆಯ ಶ್ರೀ ಧ.ಮ. ಕಾಲೇಜಿನಲ್ಲಿ ಆಕರ್ಷನೀಯ ವಸ್ತುಪ್ರದರ್ಶನ

ಉಜಿರೆ: ಶ್ರೀ ಧ.ಮ. ಶಿಕ್ಷಣ ಸಂಸ್ಥೆ (ರಿ), ರೋಟರಿ ಕ್ಲಬ್ ಬೆಳ್ತಂಗಡಿ ಮತ್ತು ಮಂಗಳೂರಿನ ಶಕ್ತಿ ನಗರದಲ್ಲಿರುವ ದಕ್ಷಿಣ ಕನ್ನಡ ಫಿಲೇಟೆಲಿ ಮತ್ತು ನ್ಯೂಮಿಸ್ಮ್ಯಾಟಿಕ್ ಅಸೋಸಿಯೇಷನ್ (DKPANA)ಇವರು ಜಂಟಿಯಾಗಿ ಉಜಿರೆಯ ಶ್ರೀ ಧ.ಮ. ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಏರ್ಪಡಿಸಿದ್ದ ವಸ್ತು ಪ್ರದರ್ಶನ ನಯನ ಮನೋಹರವಾಗಿತ್ತು.

ವಸ್ತು ಪ್ರದರ್ಶನದಲ್ಲಿ, ಹಳೇ ನಾಣ್ಯಗಳು, ಸ್ಟಾಂಪುಗಳು, ಅನೇಕ ಪುರಾತನ ವಸ್ತುಗಳು, ಅವುಗಳ ಜತೆಗೆ ವೀರೇಂದ್ರ ಹೆಗ್ಗಡೆಯವರ ಸಂಗ್ರಹದ ಕೆಲವು ವಸ್ತುಗಳ ಪ್ರದರ್ಶನ ನಡೆಯಿತು. ವಿದ್ಯಾರ್ಥಿಗಳಿಗೆ ಅತೀ ಉಪಯುಕ್ತ ಮಾಹಿತಿ ನೀಡಿತು.


ಶ್ರೀ ಧ.ಮ. ಎಜುಕೇಷನಲ್ ಸೊಸೈಟಿಯ ಐಟಿ ವಿಭಾಗದ ಸಿ. ಇ.ಓ ಪೂರಣ್ ವರ್ಮರವರು ವಸ್ತು ಪ್ರದರ್ಶನದ ಉದ್ಘಾಟನೆ ಮಾಡಿದರು. ಪುರಾತನ ವಸ್ತುಗಳ ಸಂಗ್ರಹದಲ್ಲಿ ವೀರೆಂದ್ರ ಹೆಗ್ಗಡೆಯವರ ಆಸಕ್ತಿಯನ್ನು ವಿವರಿಸಿ, ಭಾಗವಹಿಸಿದ ಎಲ್ಲಾ ತಂಡದವರನ್ನು ಅಭಿನಂದಿಸಿದರು. ಶ್ರೀ ಧ ಮ ಕಾಲೇಜಿನ ಪ್ರಾಚಾರ್ಯ ಡಾ. ವಿಶ್ವನಾಥರು ಕಾರ್ಯಕ್ರಮಕ್ಕೆ ಶುಭ ಕೋರಿದರು. DKPANA ಅಧ್ಯಕ್ಷ ಮರ್ಕಡ್ ಪ್ರಭಾಕರ ಕಾಮತ್, ರೋಟರಿ ಕ್ಲಬ್ ಅಧ್ಯಕ್ಷ ರೊ. ಪ್ರೊ. ಪ್ರಕಾಶ ಪ್ರಭು, ಧರ್ಮಸ್ಥಳ ವಸ್ತು ಸಂಗ್ರಹಾಲಯದ ಡೈರೆಕ್ಟರ್ ರಿತೇಶ್ ಮುಖ್ಯ ಅತಿಥಿಗಳಾಗಿದ್ದರು.

ವಸ್ತು ಪ್ರದರ್ಶನದಲ್ಲಿ ಭಾಗವಹಿಸಿದ ಪ್ರತಿ ಸದಸ್ಯರಿಗೂ ವೀರೇಂದ್ರ ಹೆಗ್ಗಡೆಯವರು ಸ್ವತಃ ಹಸ್ತಾಕ್ಷರ ಮಾಡಿದ ಸರ್ಟಿಫಿಕೇಟ್ ಗಳನ್ನು ನೀಡಲಾಯಿತು
ವಸ್ತು ಪ್ರದರ್ಶನ ಪ್ರಯೋಜನ ಪಡೆದ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳನ್ನು ಕಾರ್ಯಕ್ರಮದ ಸಂಚಾಲಕಿ ಡಾ. ವಿದ್ಯಾ ಶ್ರೀಹರಿಯವರು ಅಭಿನಂದಿಸಿದರು.

Related posts

ಪಾಂಗಳ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷರಾಗಿ ರಾಮಚಂದ್ರ ಭಟ್, ಕಾರ್ಯದರ್ಶಿಯಾಗಿ ಮುಖೇಶ್ ಆಯ್ಕೆ

Suddi Udaya

ಮರೋಡಿ ದೇವಸ್ಥಾನದ ವರ್ಷಾವಧಿ ಆಯನ ಮತ್ತು ಸಿರಿಗಳ ಜಾತ್ರೆ: ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

Suddi Udaya

ದೇಶದ ಸೈನ್ಯದಲ್ಲಿ ಅನನ್ಯ ಸೇವೆಗೈದು ನಿವೃತ್ತರಾಗಿ ಹುಟ್ಟೂರಿಗೆ ಆಗಮಿಸಿದ ಮುಗೇರಡ್ಕ ಅಶೋಕ್ ಪಿ.ಎಲ್ ರವರಿಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರಿಂದ ಗೌರವಾರ್ಪಣೆ

Suddi Udaya

ಎನ್ನೆಸ್ಸೆಸ್ ವತಿಯಿಂದ ರಾಷ್ಟ್ರೀಯ ಏಕತಾ ದಿನಾಚರಣೆ

Suddi Udaya

ಮೂಲ ಸೌಕರ್ಯದಿಂದ ವಂಚಿತವಾಗಿದೆ ಬಂಗಾಡಿ ಅಂಗನವಾಡಿ ಕೇಂದ್ರ: ಸಮಸ್ಯೆಯನ್ನು ಸರಿಪಡಿಸುವಂತೆ ಸಾರ್ವಜನಿಕರ ಆಗ್ರಹ

Suddi Udaya

ದಿ| ಪ್ರವೀಣ್ ಬೆಳಾಲು ರವರ ಮನೆಗೆ ಕಿರಣ್ ಚಂದ್ರ ಪುಷ್ಪಗಿರಿ ಭೇಟಿ

Suddi Udaya
error: Content is protected !!