25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ರಾಷ್ಟ್ರಮಟ್ಟದ ಉರ್ದು ಭಾಷಣ ಸ್ಪರ್ಧೆ: ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆಯ ಹಳೆ ವಿದ್ಯಾರ್ಥಿ ಸೈಯ್ಯದ್ ಮಹಮ್ಮದ್ ಉವೈಸ್ ಪ್ರಥಮ ಸ್ಥಾನ

ಬೆಳ್ತಂಗಡಿ: ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ ಇದರ ಪ್ರಾಯೋಜಕತ್ವದಲ್ಲಿ ನ.15ರಂದು ಗುಲ್ಬರ್ಗ ಜಿಲ್ಲೆಯ ಬಂದೇನವಾಝ್ ನಲ್ಲಿ ನಡೆದ ರಾಷ್ಟ್ರಮಟ್ಟದ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಜೂನಿಯರ್ ವಿಭಾಗದ ಉರ್ದು ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಬಂಟ್ವಾಳ ತಾಲೂಕಿನ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾದ ಅಲ್ ಖಾದಿಸ ಕಾವಳಕಟ್ಟೆ ಇಲ್ಲಿ ಹಿಫ್ಲ್, ಓದುತ್ತಿರುವ ಸೈಯ್ಯದ್ ಮಹಮ್ಮದ್ ಉವೈಸ್ ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆ ರಝಾ ಗಾರ್ಡನ್ ಮಂಜೊಟ್ಟಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿಯಾದ ಸೈಯ್ಯದ್ ಅಯ್ಯುಬ್ ಹಾಗೂ ಶ್ರೀಮತಿ ನೂರುಶಬ ಇವರ ಪುತ್ರನಾಗಿದ್ದಾರೆ .

ಸುನ್ನಿ ಸ್ಟುಡೆಂಟ್ಸ್ ಫೆಡರೇಷನ್ ಇದರ ಬೆಳ್ತಂಗಡಿ ಲ್ಯಾಲ ಘಟಕದ ವಿದ್ಯಾರ್ಥಿಯಾಗಿದ್ದು,ಬೆಳ್ತಂಗಡಿ ಸೆಕ್ಟರ್ ಮಟ್ಟದಲ್ಲಿ ಪ್ರಥಮ ಸ್ಥಾನ, ವಿಭಾಗ ಮಟ್ಟದಲ್ಲಿ ಪ್ರಥಮ ಸ್ಥಾನ, ಜಿಲ್ಲಾಮಟ್ಟ ಹಾಗೂ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಸತತ ಮೂರನೇ ಬಾರಿ ರಾಷ್ಟ್ರಮಟ್ಟದ ಸಾಹಿತ್ಯೋತ್ಸವ ಕಾರ್ಯಕ್ರಮದ ಉರ್ದು ಭಾಷಣ ಸ್ಪರ್ಧೆಯಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಭಾಗವಹಿಸಿ ಜಮ್ಮು ಕಾಶ್ಮೀರ ಮುಂತಾದ ರಾಜ್ಯದ ವಿದ್ಯಾರ್ಥಿಗಳ ಪ್ರಬಲ ಪೈಪೋಟಿಯ ನಡುವೆಯೂ ತನ್ನ ಮಾತಿನ ವಿಶೇಷ ಕೌಶಲ್ಯದಿಂದ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.

Related posts

ಮಚ್ಚಿನ ಸರಕಾರಿ ಪ್ರೌಢಶಾಲೆಯು ‘ಹಸಿರು ನೈರ್ಮಲ್ಯ ಅಭ್ಯುದಯ ರಾಜ್ಯಮಟ್ಟದ ಶಾಲಾ ಪ್ರಶಸ್ತಿ’ಗೆ ಆಯ್ಕೆ

Suddi Udaya

ಪದ್ಮುಂಜ: ಆಟೋ ರಿಕ್ಷಾ ಪಲ್ಟಿ, ಗಂಭೀರ ಗಾಯಗೊಂಡ ಚಾಲಕ ಮೃತ್ಯು

Suddi Udaya

ಬಿಜೆಪಿ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣ; ಜಿಲ್ಲಾ ಬಂದ್‌ಗೆ ತಾಲೂಕಿನಲ್ಲಿ ಬೆಂಬಲ: ಅಂಗಡಿ-ಮುಂಗಟ್ಟುಗಳು ಬಂದ್; ಸಂಚಾರ ಸ್ಥಗಿತಗೊಳಿಸಿದ ಕೆಎಸ್ಸಾರ್ಟಿಸಿ, ಖಾಸಗಿ ಬಸ್‌ಗಳು

Suddi Udaya

ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ : ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಬಿಲ್ಲವ ಸಂಘಟನೆಗಳ ಆಗ್ರಹ

Suddi Udaya

ಡಿ.7: ಬೆಳ್ತಂಗಡಿಯಲ್ಲಿ ಜೇಸಿ ಉತ್ಸವ, ವಿವಿಧ ಸ್ಪರ್ದೆಗಳು, ಸಾಂಸ್ಕೃತಿಕ ಕಾರ್ಯಕ್ರಮ, ಸಾಧನಾಶ್ರೀ ಪ್ರಶಸ್ತಿ

Suddi Udaya

ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿ ಪಬ್ಲೀಕ್ ಪರೀಕ್ಷೆ ಯಶಸ್ವಿ ಆರಂಭ: ಪರೀಕ್ಷೆ ಬರೆಯುತ್ತಿದ್ದಾರೆ 70 ಪ್ರೌಢಗಳ 4215 ವಿದ್ಯಾರ್ಥಿಗಳು

Suddi Udaya
error: Content is protected !!