ಉಜಿರೆ:ನ15. ಎಸ್.ಡಿ.ಎಂ (ಸಿ.ಬಿ.ಎಸ್.ಇ) ಶಾಲೆಯ ಶಿಕ್ಷಕರಿಗೆ “ಒತ್ತಡ ನಿರ್ವಹಣೆ” ಕಾರ್ಯಾಗಾರ ಆಯೋಜಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರಿನ ಶ್ರೀ ಶ್ರೀ ರವಿಶಂಕರ್ ವಿದ್ಯಾಮಂದಿರದ ಪ್ರಾಂಶುಪಾಲ ಸುರೇಶ್ ಮಹಲಿಂಗಾಪುರ್ ಹಾಗೂ ಮಂಗಳೂರಿನ ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ಶ್ರೀಮತಿ ಬಬಿತ ಸೂರಜ್ ವಿಷಯದ ಕುರಿತಾಗಿ ಚಟುವಟಿಕೆಗಳೊಂದಿಗೆ ಮಾಹಿತಿ ಹಂಚಿಕೊಂಡರು.
ಕಾರ್ಯಾಗಾರದ ಅಧ್ಯಕ್ಷತೆ ಶಾಲಾ ಪ್ರಾಂಶುಪಾಲ ಮನ್ಮೋಹನ್ ನಾಯ್ಕ್ ಕೆ.ಜಿ ವಹಿಸಿದ್ದರು.
ಶಿಕ್ಷಕಿ ಶಾಂಟಿ ಜಾರ್ಜ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲ ಮನ್ಮೋಹನ್ ನಾಯ್ಕ್ ಕೆ.ಜಿ ಸ್ವಾಗತಿಸಿದರು.











