ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕುವೆಟ್ಟು ಮತ್ತು ಓಡಿಲ್ನಾಳ ಬಿಜೆಪಿ ಶಕ್ತಿ ಕೇಂದ್ರಗಳ ಅಭ್ಯಾಸ ವರ್ಗ

ಕುವೆಟ್ಟು : ಕುವೆಟ್ಟು ಮತ್ತು ಓಡಿಲ್ನಾಳ ಬಿಜೆಪಿ ಶಕ್ತಿ ಕೇಂದ್ರಗಳ ಅಭ್ಯಾಸವರ್ಗ ಕಾರ್ಯಕ್ರಮ ನ. 16 ರಂದು ಕುವೆಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಣೇಶ್ ಕುಲಾಲ್ ಅವರ ಮನೆಯಲ್ಲಿ ನಡೆಯಿತು.

ಬಿಜೆಪಿಯ ಹಿರಿಯ ಕಾರ್ಯಕರ್ತ ಗಂಗಯ್ಯ ಮೂಲ್ಯ ಮತ್ತು ಮಾಜಿ ಕುವೆಟ್ಟು ಪಂಚಾಯತ್ ಅಧ್ಯಕ್ಷ ಅಧ್ಯಕ್ಷ ಪೂವಪ್ಪ ಭಂಡಾರಿಯವರು ದೀಪ ಬೆಳಗಿಸಿ, ಭಾರತ ಮಾತೆಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಮಂಡಲ ಉಪಾಧ್ಯಕ್ಷ ಕೊರಗಪ್ಪ ಗೌಡ ಉದ್ಘಾಟನಾ ಭಾಷಣ ಮಾಡಿ ಶುಭ ಹಾರೈಸಿದರು.

ನಮ್ಮ ವೈಚಾರಿಕತೆ ಮತ್ತು ಪಂಚ ಪರಿವರ್ತನೆ ವಿಷಯವನ್ನು ಉಮೇಶ್ ನರ್ತಿಕಲ್ಲು ಮಂಡನೆ ಮಾಡಿದರು. ಬೂತ್ ಸಂಘಟನೆ ಮತ್ತು ಸ್ಥಳೀಯ ಆಡಳಿತದೊಂದಿಗೆ ನಮ್ಮ ಪಾತ್ರ ಈ ವಿಷಯವನ್ನು ಸುದೀರ್ ಸುವರ್ಣ ಅಳದಂಗಡಿಯವರು ಮಂಡಿಸಿದರು. ವಿಕಸಿತ ಭಾರತದ ಅಮೃತ ಕಾಲದಲ್ಲಿ ನಮ್ಮ ಸಕ್ರಿಯತೆ ವಿಷಯವನ್ನು ಸೀತಾ ರಾಮ್ ಬೆಲಾಲ್ ಮಂಡಿಸಿದರು.ಬೂತ್ ಷ ಬೈಠಕ್ ಧರ್ಮಸ್ಥಳ ಮಹಾಶಕ್ತಿಕೇಂದ್ರ ಅಧ್ಯಕ್ಷ ಚಂದ್ರಕಾಂತ್ ನಿಡ್ಡಾಜೆಯವರು ತೆಗೆದುಕೊಂಡು ವರದಿ ಪಡೆದುಕೊಂಡರು.
ಶಾಸಕ ಹರೀಶ್ ಪೂಂಜ ಸಮಾರೋಪ ಭಾಷಣ ಮಾಡಿದರು.

ಕುವೆಟ್ಟು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಚಂದ್ರಕಾಂತ್ ನಿಡ್ಡಾಜೆ, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಶೆಟ್ಟಿ ಶಕ್ತಿನಗರ, ಪಕ್ಷದ ಪ್ರಮುಖರಾದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಮಮತಾ ಶೆಟ್ಟಿ ದೇವಸ್ಯ,ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಉಮೇಶ್ ಕುಲಾಲ್, ಹಿಂದುಳಿದ ಮೋರ್ಚಾದ ತಾಲೂಕು ಕಾರ್ಯದರ್ಶಿ ವಿಠಲ ಆಚಾರ್ಯ, ಮಾಜಿ ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕರಾದ ಪ್ರಭಾಕರ್ ಶೆಟ್ಟಿ ಉಪ್ಪಡ್ಕ, ತಿಲಕ್ ಕಂಚಿಂಜ, ಕುವೆಟ್ಟು ಶಕ್ತಿ ಕೇಂದ್ರದ ಅಧ್ಯಕ್ಷರಾದ ಚಂದ್ರಹಾಸ ದಾಸ್,ಓಡಿಲ್ನಾಳ ಶಕ್ತಿ ಕೇಂದ್ರದ ಅಧ್ಯಕ್ಷರಾದ ರಾಜಪ್ರಕಾಶ್ ಪಡ್ಡೈಲು ಹಾಗು ಕುವೆಟ್ಟು ಮತ್ತು ಓಡಿಲ್ನಾಲ ಭಾಗದ ಪಂಚಾಯತ್ ಸದಸ್ಯರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ಪಂಚಾಯತ್ ಅಧ್ಯಕ್ಷೆ ಭಾರತಿ ಶೆಟ್ಟಿಯವರು ಬಿಜೆಪಿ ಗೀತೆ ಯೊಂದಿಗೆ ಸಂಪದ ಆರಂಭ ಆಗಿ, ಕುಮಾರಿ ರಮ್ಯಾ ಅವರು ವಂದೇಮಾತರಂ ಗೀತೆ ಹಾಡಿದರು. ಬೆಳ್ತಂಗಡಿ ಯುವಮೋರ್ಚಾ ಅಧ್ಯಕ್ಷರಾದ ಶಶಿರಾಜ್ ಶೆಟ್ಟಿ ಗುರುವಾಯನಕೆರೆ ಸ್ವಾಗತಿಸಿದರು, ಕುವೆಟ್ಟು ಗ್ರಾಮ ಪಂಚಾಯತ್ ಸದಸ್ಯ ನಿತಿನ್ ಬರಾಯ ಧನ್ಯವಾದವಿತ್ತರು.

Related posts

ಬೆಳ್ತಂಗಡಿ:ಮಹಿಳಾ ವೃಂದದ ನೂತನ ಕಟ್ಟಡ ಉದ್ಘಾಟನೆ

Suddi Udaya

ಕಳೆಂಜ: ಸ.ನಂ 309 ರಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಹಕ್ಕು ಪತ್ರನೀಡುವ ಸಲುವಾಗಿ ಜಮೀನಿನ ಜಂಟಿ ಸರ್ವೆ ಕಾರ್ಯವನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಕೆ.ಎಸ್.ಎಂ.ಸಿ.ಎ ನೇತೃತ್ವದಲ್ಲಿ ವಿ.ಪ. ಸದಸ್ಯ ಐವನ್ ಡಿಸೋಜ ರವರಿಗೆ ಮನವಿ

Suddi Udaya

ಪುಂಜಾಲಕಟ್ಟೆ ಕೆಪಿಎಸ್ ಪ.ಪೂ. ವಿಭಾಗದಲ್ಲಿ ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರುದ್ಧದ ಅಂತರಾಷ್ಟ್ರೀಯ ದಿನ

Suddi Udaya

ಕುಡ್ಲ ನನ್ನ ಹೃದಯದಲ್ಲಿದೆ: ಮುಲ್ಲೈ ಮುಹಿಲನ್

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ “ಬಹುಮಾನ ವಿತರಣಾ ದಿನ”

Suddi Udaya

ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವದ ಚಪ್ಪರ ಮೂಹೂರ್ತ

Suddi Udaya
error: Content is protected !!