ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ದ.ಕ ಜಿಲ್ಲಾ ಮಟ್ಟದ ಅಖಿಲ ಭಾರತ ಸಹಕಾರ ಸಪ್ತಾಹ ಅಂಗವಾಗಿ ಸ್ವಚ್ಚತಾ ಆಂದೋಲನ

ಧರ್ಮಸ್ಥಳ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಧರ್ಮಸ್ಥಳ ಇದರ ನೇತೃತ್ವದಲ್ಲಿ ದ.ಕ ಜಿಲ್ಲಾ ಮಟ್ಟದ ಅಖಿಲ ಭಾರತ ಸಹಕಾರ ಸಪ್ತಾಹ ಅಂಗವಾಗಿ, ಸಹಕಾರ ಸಂಸ್ಥೆಗಳ ಅಭಿವೃದ್ಧಿಯ ಬಲವರ್ಧನೆ ಎಂಬ ತತ್ವದೊಂದಿಗೆ ಧರ್ಮಸ್ಥಳ ಹಾಗೂ ಪುದುವೆಟ್ಟಿನ ಎಲ್ಲಾ ಬೂತ್ ಮಟ್ಟದಲ್ಲಿ ಸಹಕಾರಿ ಸಪ್ತಾಹ ಸ್ವಚ್ಛತಾ ಆಂದೋಲನ ಸಹಕಾರಿಗಳ ಸಹಕಾರದೊಂದಿಗೆ ನಡೆಯಿತು.

ಕಾರ್ಯಕ್ರಮವನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರು ಉದ್ಘಾಟಿಸಿ ಧರ್ಮಸ್ಥಳ ಸೊಸೈಟಿ ಹಲವಾರು ಸತ್ ಚಿಂತನೆಯಿರುವ ಕಾರ್ಯಕ್ರಮಗಳನ್ನು ಆಯೋಜಿಸಿ ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ. ಸ್ವಚ್ಚ ದೇಶ, ಸ್ಚಚ್ವ ಪರಿಸರ ಪರಿಕಲ್ಪನೆಯೊಂದಿಗೆ ಇಂದು ಹತ್ತಾರು ಕಿ.ಮೀ ರಸ್ತೆ ಬದಿಯನ್ನು ಸ್ವಚ್ಚ ಮಾಡುವ ಕೆಲಸ ಶ್ಲಾಘನೀಯವಾದುದು ಎಂದರು.

ಈ ಸಂದರ್ಭದಲ್ಲಿ ಧರ್ಮಸ್ಥಳ ಸೊಸೈಟಿ ಅಧ್ಯಕ್ಷ ಪ್ರೀತಮ್ ಡಿ, ಉಪಾಧ್ಯಕ್ಷ ಅಜಿತ್ ಕುಮಾರ್, ಸಿಇಓ ಶಶಿಧರ, ಪುದುವೆಟ್ಟು ಗ್ರಾ.ಪಂ ಅಧ್ಯಕ್ಷ ಪೂರ್ಣೇಶ್, ಧರ್ಮಸ್ಥಳ ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ್ ರಾವ್, ಸೊಸೈಟಿ ನಿರ್ದೇಶಕರಾದ ಶಾಂಭವಿ ರೈ,ಉಮಾನಾಥ, ಶೀನ, ಧನಲಕ್ಷ್ಮಿ ಜನಾರ್ಧನ್, ಪ್ರಭಾಕರ ಗೌಡ ಬೊಳ್ಮ, ನೀಲಾಧರ ಶೆಟ್ಟಿ, ಪ್ರಸನ್ನ ಹೆಬ್ಬಾರ್, ಚಂದ್ರಶೇಖರ, ವಿಕ್ರಂ ಗೌಡ, ತಂಗಚ್ಚನ್ ಹಾಗೂ ಸೊಸೈಟಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಹಲವಾರು ಸಹಕಾರಿ ಬಂಧುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ವಚ್ಛತೆಯಲ್ಲಿ ಪಾಲ್ಗೊಂಡರು.ಇದರ ಜೊತೆಗೆ ಧರ್ಮಸ್ಥಳ ಹಾಗೂ ಪುದುವೆಟ್ಟಿನ ಹಲವು ರಸ್ತೆ ಬದಿಯ ಹುಲ್ಲು ತೆಗೆಯುವ ಕೆಲಸಕ್ಕೆ ಚಾಲನೆ ನೀಡಲಾಯಿತು.

Related posts

ದ್ವಿತೀಯ ಪಿಯುಸಿ ಮರು ಮೌಲ್ಯಮಾಪನ: ಚಿನ್ಮಯ್ ಜಿ.ಕೆ. 597, ನೇಹಾ ಭಟ್ 592 ಅಂಕದೊಂದಿಗೆ ಹೊಸ ದಾಖಲೆ

Suddi Udaya

ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ: ಮಹಾರಥೋತ್ಸವ: ಅರುಣ್ ಕುಮಾರ್ ಪುತ್ತಿಲ ಭಾಗಿ

Suddi Udaya

ಪೆರಿಂಜೆಯಿಂದ ನಡ್ತಿಕಲ್ಲುವರೆಗೆ ರಸ್ತೆ ಬದಿಯ ಸ್ವಚ್ಚತಾ ಕಾರ್ಯಕ್ರಮ

Suddi Udaya

ಶಿಬಾಜೆ: ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ಯುವತಿಯ ಮನೆಗೆ ಶಾಸಕ ಹರೀಶ್ ಪೂಂಜ ಹಾಗೂ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಭೇಟಿ

Suddi Udaya

ಡಾ. ಹೆಗ್ಗಡೆಯವರ ಬಗ್ಗೆ ಅಪಪ್ರಚಾರಕ್ಕೆ ಎಸ್‌.ಡಿ.ಎಂ ಶಿಕ್ಷಣ ಸಂಸ್ಥೆಗಳಿಂದ ಖಂಡನೆ; ಹೆಗ್ಗಡೆಯವರ ಮತ್ತು ಅವರ ಕುಟುಂಬವರ್ಗದವರ ಬಗ್ಗೆಅವಮಾನಕರ ಮಾತುಗಳನ್ನಾಡುವವರ ಅನಪೇಕ್ಷಿತ‌ ಚಟುವಟಿಕೆಗಳನ್ನು ನಾವು ಬಲವಾಗಿ ವಿರೋಧಿಸುತ್ತೇವೆ; ಉಜಿರೆಯ ಎಸ್ ಡಿ ಎಮ್ ಶಿಕ್ಷಣ ಸಂಸ್ಥೆಗಳಕಾರ್ಯದರ್ಶಿಗಳು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಎಸ್‌ಡಿಎಂ ಶಾಲಾ ಕಾಲೇಜುಗಳ ಪ್ರಾಂಶುಪಾಲರು ಮತ್ತು ಸಿಬ್ಬಂದಿಗಳು ಪತ್ರಿಕಾ ಹೇಳಿಕೆ ಬಿಡುಗಡೆ

Suddi Udaya

ಪೆರಿಯಡ್ಕ ಸ.ಕಿ. ಪ್ರಾ. ಶಾಲಾ ರಜತ ಮಹೋತ್ಸವ ಸಮಿತಿಯಿಂದ ಉಜಿರೆ ಲಕ್ಷ್ಮಿ ಗ್ರೂಪ್ಸ್ ಮಾಲಕ ಮೋಹನ್ ಕುಮಾರ್ ರಿಗೆ ಸನ್ಮಾನ

Suddi Udaya
error: Content is protected !!