September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ನೆರಿಯದಲ್ಲಿ ಅಟಲ್ ವಿರಾಸತ್ ಜನ್ಮ ಶತಾಬ್ದಿ ಪ್ರಯುಕ್ತ ಕಿರಣ್ ಚಂದ್ರ ಡಿ. ಪುಷ್ಪಗಿರಿಯವರಿಂದ ಕಿಟ್ ವಿತರಣೆ

ಬೆಳ್ತಂಗಡಿ: ಅಟಲ್ ಜನ್ಮ ಶತಾಬ್ದಿ, ಬಿರ್ಸಾ ಮುಂಡಾ 150ನೇ ಜನ್ಮ ವರ್ಷಾಚರಣೆ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಗುಮಂತ್ ಗತಿವಿಧಿ ಇಂದ ನೆರಿಯ ಗ್ರಾಮದ ಕೋಲೋಡಿ ಪರಿಸರದ ಮಲೆಕುಡಿಯ ಸಮುದಾಯದ ಬಂಧುಗಳ ಸುಮಾರು 75 ಮನೆಗಳಿಗೆ ಕಿಟ್ ನೀಡುವುದರ ಮೂಲಕ ಧಾರ್ಮಿಕ ಮುಖಂಡರು ಯುವ ನಾಯಕರಾದ ಕಿರಣ್ ಚಂದ್ರ ಡಿ. ಪುಷ್ಪಗಿರಿಯವರು ಬಹಳ ವಿಶಿಷ್ಟವಾಗಿ ಆಚರಿಸಿದರು.

ಊರಿನ ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವಿಗೆ ಪ್ರಾರ್ಥನೆ ಮಾಡಿ ಆಶೀರ್ವಾದ ಪಡೆಯಲಾಯಿತು.
ಈ ಸಂದರ್ಭದಲ್ಲಿ ಕಾಲೋನಿಯ ಹಿರಿಯ ಮುಖಂಡರು ಮಂಜಪ್ಪ ಎಮ್ ಕೆ, ಬಿಜೆಪಿ ಗ್ರಾಮ ಪಂಚಾಯತ್ ಸದಸ್ಯ ಬಾಬು ಗೌಡ ಪರ್ಪಳ, ಬಿ. ಎಮ್. ಎಸ್ ಜಿಲ್ಲಾ ಅಧ್ಯಕ್ಷರು, ವಕೀಲರಾದ ಅನಿಲ್ ಕುಮಾರ್, ರಾಷ್ಟ್ರೀಯ ಸ್ವಯ ಸೇವಕ ಸಂಘದ ಗುಮಂತ್ ಕಾರ್ಯದ ಮಂಗಳೂರು ವಿಭಾಗ ಸಹ ಸಾಯೋಜಕ್ ಪ್ರಮುಖರಾದ ಸುದರ್ಶನ್ ವಿ ಕನ್ಯಾಡಿ, ಬಿ ಎಮ್ ಎಸ್ ಮಂಗಳೂರು ಜಿಲ್ಲಾ ಸಂಘಟನೆ ಕಾರ್ಯದಸ್ ಕುಮಾರನಾಥ್ ಶೆಟ್ಟಿ, ಸಂಫದ ಪ್ರಮುಖ ಅಕ್ಷಯ್ ಲೋಕಯ್ಯ ಗೌಡ ನೆರಿಯ, ನಿತ್ಯಾನಂದ ಗೌಡ ನೆರಿಯ, ಯುವ ವಕೀಲ ನರೇಂದ್ರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಮೋದ್ ದಿಡುಪೆ, ನಾವೂರು ಶಕ್ತಿ ಕೇಂದ್ರ ಅಧ್ಯಕ್ಷ ಪ್ರದೀಪ್ ನಾಗಜೆ, ಪೆರ್ಲ ಬಜಾಪ ಮುಖಂಡ ಬಾಲಚಂದ್ರ,ಭರತ್ ಗೌಡ ಕುಪ್ಪೆಟ್ಟಿ, ಪ್ರಜಿತ್ ಕೊಯ್ಯುರು, ಹಾಗೂ ಹಲವಾರು ಮುಖಂಡರು ಉಪಸ್ಥಿತರಿದ್ದರು.

Related posts

ಈದ್ ಹಬ್ಬದ ಪ್ರಯುಕ್ತ ಅಪ್ಸರಾ ಫ್ಯಾಶನ್ ಸೆಂಟರ್ ಹಾಗೂ ಮಿಷ್‌ಮಷ್ ಫ್ಯಾನ್ಸಿ & ಗಿಫ್ಟ್ ಸೆಂಟರಿನಲ್ಲಿ ಶೇ.20 ಡಿಸ್ಕೌಂಟ್ ಸೇಲ್: ಶಾಲಾ ಮಕ್ಕಳ ಬುಕ್ಸ್, ಬ್ಯಾಗ್‌ಗಳು, ಕೊಡೆ, ಸ್ಟೇಷನರಿ ವಸ್ತುಗಳು ರಿಯಾಯಿತಿ ದರದಲ್ಲಿ ಲಭ್ಯ

Suddi Udaya

ಬಿಲ್ಡ‌ರ್ ಜಿತೇಂದ್ರ ಕೊಟ್ಟಾರಿಯವರ ಮನೆಗೆ ನುಗ್ಗಿ ಹಲ್ಲೆಗೆ ಯತ್ನ: ಎನ್.ಎಸ್.ಯು.ಐ ಕಾರ್ಯಕರ್ತ ಉಜಿರೆ ನಿವಾಸಿ ತನುಷ್ ಶೆಟ್ಟಿ ಮತ್ತು ಕದ್ರಿ ನಿವಾಸಿ ಅಂಕಿತ್ ಶೆಟ್ಟಿ ಬಂಧನ

Suddi Udaya

ತಾಲೂಕು ಮಟ್ಟದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಕ್ಕೆ ಚಾಲನೆ

Suddi Udaya

ದಿಡುಪೆ ಜಲಪಾತ ವೀಕ್ಷಣೆಗೆ ಬಂದಿದ್ದವರನ್ನು ತಡೆದು ಜೀವಬೆದರಿಕೆ: ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಶಿರ್ಲಾಲಿನಲ್ಲಿ 25ನೇ ವರ್ಷದ ಗುರುಪೂಜಾ ಕಾರ್ಯಕ್ರಮ

Suddi Udaya

ಶಿರ್ಲಾಲು ನಿವಾಸಿ ತಾರನಾಥ ಪೂಜಾರಿ ನಿಧನ

Suddi Udaya
error: Content is protected !!