July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಹೊರ ರಾಜ್ಯ ಹಾಗೂ ಅಂತರ್ ಜಿಲ್ಲೆಗಳಲ್ಲಿ ಸುಮಾರು 40 ಕ್ಕೂ ಅಧಿಕ ಕಳವು ಪ್ರಕರಣದ ಕುಖ್ಯಾತ ಆರೋಪಿ “ಇತ್ತೆ ಬರ್ಪೆ ಅಬುಬಕ್ಕರ್” ಬಂಧನ: ಆರೋಪಿತನಿಂದ ರೂ 5‌.65 ಲಕ್ಷ ಮೌಲ್ಯದ 56.850 ಗ್ರಾಂ ತೂಕದ ಚಿನ್ನಾಭರಣಗಳು ಹಾಗೂ ದ್ವಿಚಕ್ರ ವಾಹನ ವಶ

ಬೆಳ್ತಂಗಡಿ: ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಕುತ್ತೂರು ಎಂಬಲ್ಲಿ ದಿನಾಂಕ ಅ.2 ರಿಂದ ಅ. 6ರ ಮಧ್ಯದ ಅವಧಿಯಲ್ಲಿ ಬೀಗ ಹಾಕಿದ್ದ ಮನೆಯೊಂದರಲ್ಲಿ ನಡೆದ ಸುಮಾರು 149 ಗ್ರಾಂ ತೂಕದ ಒಟ್ಟು 9,50,000/- ರೂ. ಮೌಲ್ಯದ ಚಿನ್ನಾಭರಣಗಳ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ, ವೇಣೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ 85/2025 ಕಲಂ 331(1), 331(4), 305 ಬಿ.ಎನ್. ಎಸ್. 2023 ರಂತೆ ಪ್ರಕರಣ ದಾಖಲಾಗಿರುತ್ತು.

ಪ್ರಕರಣದ ತನಿಖೆ ನಡೆಸಲಾಗಿ, ಹೊರ ರಾಜ್ಯಗಳಲ್ಲಿ ಹಾಗೂ ಹಲವು ಜಿಲ್ಲೆಗಳಲ್ಲಿ ಸುಮಾರು 40 ಕ್ಕೂ ಅಧಿಕ ಕಳವು ಪ್ರಕರಣದ ಕುಖ್ಯಾತ ಆರೋಪಿತ, ಮಂಗಳೂರು, ಜೋಕಟ್ಟೆ ನಿವಾಸಿ ಅಬುಬಕ್ಕರ್ @ ಅಬ್ದುಲ್ ಖಾದರ್ @ ಇತ್ತೆ ಬರ್ಪೆ ಅಬುಬಕ್ಕರ್ (70) ಎಂಬಾತನನ್ನು ದಸ್ತಗಿರಿ ಮಾಡಿ, ಆರೋಪಿತನಿಂದ ಸುಮಾರು 5,65,000 ರೂ. ಬೆಲೆಬಾಳುವ ಒಟ್ಟು 56.850 ಗ್ರಾಂ ತೂಕದ ಚಿನ್ನಾಭರಣಗಳನ್ನು ಹಾಗೂ ಮಂಗಳೂರು ಕೊಣಾಜೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳವು ಮಾಡಿದ 60,000/-ರೂ. ಮೌಲ್ಯದ ದ್ವಿಚಕ್ರ ವಾಹನವನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದ್ದು, ಆರೋಪಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ. ಸದ್ರಿ ಪ್ರಕರಣದಲ್ಲಿ ಆರೋಪಿತರ ಪತ್ತೆಕಾರ್ಯದಲ್ಲಿ, ಬೆಳ್ತಂಗಡಿ ಡಿ.ವೈ.ಎಸ್. ಪಿ. ಶ್ರೀಮತಿ ರೋಹಿಣಿ ಸಿ.ಕೆ. ರವರ ಮಾರ್ಗದರ್ಶನದಂತೆ, ಬೆಳ್ತಂಗಡಿ ವೃತ್ತ ನಿರೀಕ್ಷಕರಾದ ಬಿ.ಜಿ. ಸುಬ್ಬಾಪೂರ ಮಠ ರವರ ತಂಡ, ವೇಣೂರು ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಅಕ್ಷಯ್ ಡವಗಿ, ಶ್ರೀಮತಿ ಓಮನ ಎನ್. ಹಾಗೂ ಎ.ಎಸ್. ಐ. ಗಳಾದ ವೆಂಕಟೇಶ್ ನಾಯ್ಕ, ಬೆನ್ನಿಚ್ಚನ್, ಹಚ್.ಸಿ. ಕೃಷ್ಣ, ಧರ್ಮಸ್ಥಳ ಠಾಣಾ ಹಚ್.ಸಿ. ಪ್ರಶಾಂತ್, ಪಿ.ಸಿ. ಚರಣ್, ವೇಣೂರು ಪೊಲೀಸ್ ಠಾಣಾ ಪಿ.ಸಿ. ಬಸವರಾಜ್, ಪಿ.ಸಿ. ಮೋಹನ್, ಮಪಿಸಿ. ಶ್ರೀಮತಿ ಜಯಶ್ರೀ ಪೂಂಜಾಲಕಟ್ಟೆ ಪೊಲೀಸ್ ಠಾಣಾ ಪಿ.ಸಿ. ರಜಿತ್ ಮಂಗಳೂರು ಜಿಲ್ಲಾ ಗಣಕ ಯಂತ್ರದ ಸಿಬ್ಬಂದಿಗಳಾದ ಸಂಪತ್ ಮತ್ತು ದಿವಾಕರ ರವರುಗಳನ್ನು ಒಳಗೊಂಡ ತಂಡ ಕರ್ತವ್ಯ ನಿರ್ವಹಿಸಿರುತ್ತದೆ.

Related posts

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ವಿಶ್ವ ಸಂಗೀತ ದಿನ ಆಚರಣೆ

Suddi Udaya

ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ: ಧರ್ಮಸ್ಥಳ ಶ್ರೀ ಮಂ.ಅ.ಪ್ರೌ. ಶಾಲೆಯ ವಿದ್ಯಾರ್ಥಿ ಗಗನ್ಯ ದ್ವಿತೀಯ ಸ್ಥಾನ

Suddi Udaya

ಜೂ.16: ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷ ಎರಡನೇ ಅವಧಿಗೆ ಮೀಸಲಾತಿ ನಿಗದಿ

Suddi Udaya

ಉಜಿರೆ: ಯೋಗೀಶ್ ಪೂಜಾರಿ ನಿಧನ

Suddi Udaya

ಸೆಂಟ್ ಅಲ್ಫೋನ್ಸ ಪುಣ್ಯ ಕ್ಷೇತ್ರ ನೆಲ್ಯಾಡಿಯಲ್ಲಿ ನೂತನ ಟ್ರಸ್ಟಿಗಳ ಪದಗ್ರಹಣ

Suddi Udaya

ಕನ್ಯಾಡಿ: ಎಸ್.ವೈ. ಎಸ್ ಕನ್ಯಾಡಿ ಯುನಿಟ್ ಕೋಶಾಧಿಕಾರಿ ಇದ್ರೀಸ್ ನಿಧನ

Suddi Udaya
error: Content is protected !!