25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಪುಂಜಾಲಕಟ್ಟೆ ಉಳಿ ಯುವಕ ಮಂಡಲದಿಂದ ಭಜನಾ ತರಬೇತಿ ಕಾರ್ಯಗಾರ

ಪುಂಜಾಲಕಟ್ಟೆ ವಲಯದ ಉಳಿ ಯುವಕ ಮಂಡಲ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಇದರ ಸಹಕಾರದಿಂದ ಪರ್ಯಾಯ ಶ್ರೀ ಪುತ್ತಿಗೆ ಮಠ ಉಡುಪಿ ಇಲ್ಲಿನ ವಿಶ್ವಗೀತಾ ಪರ್ಯಾಯ 2024-2026 ಇದರ ಗೀತೋತ್ಸವ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಕಮ್ಮಟದ ಹಿರಿಯ ಸಂಪನ್ಮೂಲ ವ್ಯಕ್ತಿ ಸಂಗೀತ ವಿದುಷಿ ಶ್ರೀಮತಿ ಉಷಾ ಹೆಬ್ಬಾರ್ ಮಣಿಪಾಲ ಇವರಿಂದ ಉಳಿ ಯುವಕ ಮಂಡಲದ ಸಭಾಂಗಣದಲ್ಲಿ ಭಜನಾ ತರಬೇತಿ ಕಾರ್ಯಗಾರ ನಡೆಯಿತು.

ತಾಲೂಕಿನ 7 ಭಜನಾ ಮಂಡಳಿಯ ಸುಮಾರು 250 ಭಜಕರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಭಜನೆ ಮಂಡಳಿಗಳಿಗೆ ಭಜನೆ ತರಬೇತಿ ನೀಡಲಾಯಿತು. ಈ ತರಬೇತಿ ಕಾರ್ಯಗಾರದಲ್ಲಿ ಶ್ರೀಮತಿ ಸಾವಿತ್ರಿ ಮೇಡಂ, ಭಜನಾ ತರಬೇತುದಾರರಾದ ಸಂದೇಶ್ ಮದ್ದಡ್ಕ, ಭಜನಾ ಪರಿಷತ್ ನ ಜಿಲ್ಲಾ ಸಮನ್ವಯಧಿಕಾರಿ ಸಂತೋಷ್ ಪಿ ಅಳಿಯೂರು, ಭಜನಾ ತರಬೇತುದಾರರು, ಉಳಿ ಯುವಕ ಮಂಡಲದ ಕಾರ್ಯದರ್ಶಿ ರಾಜ್ ಕುಮಾರ್, ಕೇಂದ್ರ ಒಕ್ಕೂಟದ ಅಧ್ಯಕ್ಷರು ಚಿದಾನಂದ ರೈ ಕಕ್ಯ,ವಲಯ ಮೇಲ್ವಿಚಾರಕಿ ಶ್ರೀಮತಿ ಸವಿತಾ, ಸೇವಾಪ್ರತಿನಿಧಿ ಶೇಖರ್ ಉಷಾ ಸುಧಾ ಕುಸುಮ ಹಾಗೂ ಭಜನೆ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.


ಸಂತೋಷ್ ಕಾರ್ಯಕ್ರಮದ ನಿರೂಪಿಸಿ, ರಾಜ್ ಕುಮಾರ್ ದನ್ಯವಾದವಿತ್ತರು.

Related posts

ನಾಲ್ಕೂರು ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾಗಿ ಪ್ರಣಾಮ್ ಶೆಟ್ಟಿ, ಕಾರ್ಯದರ್ಶಿಯಾಗಿ ದಿನೇಶ್ ಪೂಜಾರಿ

Suddi Udaya

ಬಳಂಜ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ, ಸಿಎ ಸಾಧಕಿ ನಿರೀಕ್ಷಾರವರಿಗೆ ಸನ್ಮಾನ

Suddi Udaya

ಸುಲ್ಕೇರಿಮೊಗ್ರು ಕಂಬಳದಡ್ಡ ನಿವಾಸಿ ಅಣ್ಣಿ ಮಡಿವಾಳ ನಿಧನ

Suddi Udaya

ಬಿಜೆಪಿ ಪಿಲ್ಯ ಬೂತ್ ಸಮಿತಿಯ ಅಧ್ಯಕ್ಷರಾಗಿ ಆನಂದ ಪಿ ., ಕಾರ್ಯದರ್ಶಿಯಾಗಿ ಉಮೇಶ್

Suddi Udaya

ಕುತ್ಲೂರು ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಧನಲಕ್ಷ್ಮೀ ಪೂಜೆ, ಗೋ ಪೂಜೆ, ವಾಹನ ಪೂಜೆ ,ಆಯುಧ ಪೂಜೆ ಹಾಗೂ ಹೆಣ್ಣು ಕರು ದಾನ ಕಾರ್ಯಕ್ರಮ

Suddi Udaya

ಕರ್ನಾಟಕ ಬ್ಯಾಂಕ್ ವತಿಯಿಂದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗೆ ಬಸ್ಸು ಕೊಡುಗೆ

Suddi Udaya
error: Content is protected !!