25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮುಂಡಾಜೆ ಪದವಿ ಪೂರ್ವ ಕಾಲೇಜಿನಲ್ಲಿ ಸ್ವದೇಶಿ ಜಾಗೃತಿ ಮಾಹಿತಿ ಕಾರ್ಯಕ್ರಮ

ಮುಂಡಾಜೆ: “ಭಾರತೀಯರಾದ ನಾವು ಸ್ವದೇಶಿ ವಿಚಾರಧಾರೆಗಳನ್ನು ಅಳವಡಿಸಿಕೊಂಡು ಸ್ವದೇಶಿ ವಸ್ತುಗಳ ಬಳಕೆಯನ್ನು ಮಾಡುವುದರಿಂದ ಆತ್ಮ ನಿರ್ಭರ ಭಾರತದ ನಿರ್ಮಾಣ ಸಾಧ್ಯ” ಎಂದು ಮುಂಡಾಜೆ ಪದವಿ ಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ಸುಭಾಷ್ ಚಂದ್ರ ಜೈನ್ ಅಭಿಪ್ರಾಯ ಪಟ್ಟರು.

ಇವರು ಮುಂಡಾಜೆ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಮತ್ತು ರೋವರ್ಸ್ ರೇಂಜರ್ಸ್ ಘಟಕದ ವತಿಯಿಂದ ನಡೆಸಲ್ಪಟ್ಟ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಗೀತಾ ಮಾತನಾಡಿ ಸ್ವದೇಶಿ ವಸ್ತುಗಳ ಬಳಕೆಯ ಮಹತ್ವವನ್ನು ತಿಳಿಸಿದರು. ವೇದಿಕೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಕಾರ್ಯಕ್ರಮಾಧಿಕಾರಿ ಶ್ರೀಮತಿ ನಮಿತಾ ಕೆ ಆರ್, ರೇಂಜರ್ ಲೀಡರ್ ಶ್ರೀಮತಿ ವಸಂತಿ, ರೋವರ್ ಸ್ಕೌಟ್ ಲೀಡರ್ ಶ್ರೀಕೃಷ್ಣ ಕಿರಣ್ ಉಪಸ್ಥಿತರಿದ್ದರು. ಕುಮಾರಿ ಶ್ರಾವ್ಯ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ನಳಿನಿ ಸ್ವಾಗತಿಸಿ, ಗಿರೀಶ್ ಧನ್ಯವಾದಗೈದರು.

Related posts

ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ: ಮಹಾರಥೋತ್ಸವ: ಅರುಣ್ ಕುಮಾರ್ ಪುತ್ತಿಲ ಭಾಗಿ

Suddi Udaya

ಅರಸಿನಮಕ್ಕಿ ಬಂಟರ ಸಂಘದ ಕಛೇರಿ ಆವರಣದ ಗೇಟ್ ಉದ್ಘಾಟನೆ

Suddi Udaya

ಬಂದಾರು: ಹಣವನ್ನು ಪಣವಾಗಿಟ್ಟು ಕೋಳಿ ಅಂಕ ನಡೆಸುತ್ತಿದ್ದ ಸ್ಥಳಕ್ಕೆ ಧರ್ಮಸ್ಥಳ ಪೊಲೀಸರ ದಾಳಿ: ಆರೋಪಿಗಳ ಸಹಿತ ನಗದು ಹಾಗೂ ಇತರ ಸೊತ್ತುಗಳ ವಶ

Suddi Udaya

ವಾಣಿ ಕಾಲೇಜಿನ ಎನ್ಎಸ್ಎಸ್ ವಿದ್ಯಾರ್ಥಿಗಳಿಂದ ನೇಜಿ ನಾಟಿ

Suddi Udaya

ಸರಕಾರದಿಂದ 2024ರ ಸಾರ್ವತ್ರಿಕ ರಜೆ ದಿನ ಪ್ರಕಟ

Suddi Udaya

ಕೊಕ್ಕಡ: ಶ್ರೀರಾಮ ಸೇವಾ ಟ್ರಸ್ಟ್ ಸಭೆ: ಪದಾಧಿಕಾರಿಗಳ ಆಯ್ಕೆ

Suddi Udaya
error: Content is protected !!