ಪುಂಜಾಲಕಟ್ಟೆ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪುಂಜಾಲಕಟ್ಟೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ ಕಾಲೇಜು ಪುರುಷರ ಹ್ಯಾಂಡ್ ಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಮಂಗಳೂರು ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಡಾ.ಜೆರಾಲ್ಡ್ ಸಂತೋಷ್ ಡಿಸೋಜಾರವರು ಉದ್ಘಾಟಿಸಿ ‘ಕ್ರೀಡೆ ಕೇವಲ ಮನರಂಜನೆಗಲ್ಲ ಸದೃಢ ಮನಸ್ಸು ಮತ್ತು ಸದೃಢ ದೇಹಕ್ಕಾಗಿ”ಎಂದು ತಿಳಿಸಿದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಮಾಧವರವರು ಕ್ರೀಡೆಯ ಆಯೋಜನೆಗೆ ಸಹಕರಿಸಿದ ಸರ್ವರನ್ನು ಸ್ಮರಿಸುತ್ತ “ಕ್ರೀಡೆ ಪ್ರತಿಯೊಬ್ಬರ ಬದುಕಿನ ಅವಿಭಾಜ್ಯ ಅಂಗ”ಎಂದು ತಿಳಿಸಿದರು.
ವೇದಿಕೆಯಲ್ಲಿ ಡಾ.ಜೆರಾಲ್ಡ್ ಸಂತೋಷ್ ಡಿಸೋಜಾ,ಪ್ರಾಂಶುಪಾಲರಾದ ಪ್ರೊ. ಮಾಧವ,ಕ್ರೀಡಾ ವೀಕ್ಷಕರಾದ ಡಾ. ಪ್ರಕಾಶ್ ಡಿಸೋಜ,ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಕುಮಾರ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಗಣೇಶ್ ಆಚಾರ್ಯ, ಮಡಂತ್ಯಾರು ಗ್ರಾಮ ಪಂಚಾಯಿತಿ ಸದಸ್ಯರಾದ ಹನೀಫ್, ಸ.ಪ್ರ.ದ. ಕಾಲೇಜು ಪುಂಜಾಲಕಟ್ಟೆಯ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ.ಶೈಲೇಶಕುಮಾರ್ ಡಿ. ಎಚ್., ವಿವಿಧ ಕಾಲೇಜಿನ ತಂಡದ ವ್ಯವಸ್ಥಾಪಕರು, ತರಬೇತಿದಾರರು, ಅಧ್ಯಾಪಕ ವೃಂದದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕು.ನಿಶಾ ಮತ್ತು ತಂಡದವರು ಪ್ರಾರ್ಥಿಸಿದರು. ಐಕ್ಯೂಎಸಿ ಸಂಚಾಲಕರಾದ ಡಾ.ಅವಿತ ಮರಿಯ ಕ್ವಾಡ್ರಸ್ ರವರು ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ ಡಾ.ವೈಶಾಲಿಯವರು ವಂದಿಸಿದರು.ಪ್ರೊ.ರೇಖಾ ಯು.ಎನ್. ರವರು ಕಾರ್ಯಕ್ರಮ ನಿರೂಪಿಸಿದರು.
ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪ್ರೊ.ಮಾಧವರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಂಗಳೂರು ವಿವಿ ದೈಹಿಕಶಿಕ್ಷಣ ನಿರ್ದೇಶಕರ ಸಂಘದ ಅಧ್ಯಕ್ಷರಾದ ಪ್ರೊ.ಸೇಷಪ್ಪನವರು ಕ್ರೀಡಾಕೂಟದ ಆಯೋಜನೆಯ ಬಗ್ಗೆ ಪ್ರಸಂಶನೀಯ ಮಾತುಗಳನ್ನಾಡಿ ವಿಜಯಿ ತಂಡಗಳಿಗೆ ಶುಭ ಹಾರೈಸಿದರು. ಪಂದ್ಯಾಟದ ವೀಕ್ಷಕರಾದ ಡಾ.ಪ್ರಕಾಶ ಡಿಸೋಜಾರವರು ಪಂದ್ಯಾಟದ ವರದಿ ಮಂಡಿಸಿದರು. ಸದ್ದಾಂ ಹುಸೇನ್, .ಝಾಕೀರ್ ಹುಸೇನ್,
ಕಿರಣ್ ಕುಮಾರ್ ಎ.ಎಸ್. , ಯಶವಂತ್, ರಾಜೇಶಕುಮಾರ್ ಮತ್ತು ದೀಕ್ಷಿತ್ ರವರು ಪಂದ್ಯಾಟದ ರೆಫರಿಗಳಾಗಿ ಕರ್ತವ್ಯ ನಿರ್ವಹಿಸಿದರು. ಮಂಗಳೂರು ವಿ.ವಿ. ವ್ಯಾಪ್ತಿಗೊಳಪಡುವ ಒಟ್ಟು ಹತ್ತು ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಎಸ್.ಡಿ.ಎಂ ಕಾಲೇಜು, ಉಜಿರೆ ಚಾಂಪಿಯನ್ ಆಗಿ ಹೊರಹೊಮ್ಮಿತು.ಆಳ್ವಾಸ್ ಕಾಲೇಜು ಮೂಡಬಿದ್ರೆ ಪ್ರಥಮ ರನ್ನರ್ ಅಪ್ , ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ ದ್ವಿತೀಯ ರನ್ನರ್ ಅಪ್ ಮತ್ತು ಎಂ.ಪಿ.ಎA. ಕಾಲೇಜು ಕಾರ್ಕಳ ತೃತೀಯ ರನ್ನರ್ ಅಪ್ ಸ್ಥಾನವನ್ನು ಪಡೆದವು. ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿದ್ದ ಸರ್ವರನ್ನು ಪ್ರೊ. ಸಂತೋಷ್ ಪ್ರಭು ಸ್ವಾಗತಿಸಿದರು. ಡಾ.ಶೈಲೇಶ್ ಕುಮಾರ್ ಡಿ.ಎಚ್ ಬಹುಮಾನ ವಿತರಣಾ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು. ಪ್ರೊ.ಪದ್ಮಶ್ರೀ ಅವರು ಕಾರ್ಯಕ್ರಮ ನಿರೂಪಿಸಿದರು.











