ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕಲ್ಲೇರಿಯಲ್ಲಿ ಸೀರೆ ಗೊಂಡೆ ಹಾಕುವ ಕೌಶಲ್ಯ ಅಭಿವೃದ್ಧಿ ಉಚಿತ ಸ್ವ ಉದ್ಯೋಗ ತರಬೇತಿಯ ಸಮಾರೋಪ

ಕಲ್ಲೇರಿ: ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ (ರಿ) ಮಂಗಳೂರು ಇವರ ಪ್ರಾಯೋಜಕತ್ವದಲ್ಲಿ, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಹಾಗೂ ಬ್ಯಾಂಕ್ ಒಫ್ ಬರೋಡ ಉಪ್ಪಿನಂಗಡಿ ಶಾಖೆ ಇವರ ನೇತೃತ್ವದಲ್ಲಿ, 3 ದಿನಗಳ ಉಚಿತ ಸೀರೆ ಗೊಂಡೆ ಹಾಕುವ ತರಬೇತಿಯ ಸಮಾರೋಪ ಸಮಾರಂಭ ತಣ್ಣೀರುಪಂಥ ಹಾಲು ಉತ್ಪಾದಕರ ಸೊಸೈಟಿ ಸಭಾಂಗಣ ಕಲ್ಲೇರಿ ಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾದ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ, ಮಂಗಳೂರು ಇಲ್ಲಿಯ ಮುಖ್ಯ ಕಾರ್ಯನಿರ್ವಹನಾಧಿಕಾರಿ ಜ್ಯೋತಿ ರಾಜ್ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ ಮಹಿಳೆಯರಿಗೆ ಸ್ವ ಉದ್ಯೋಗ ಕೈಗೊಳ್ಳಲು ಕರೆ ನೀಡಿದರು. ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಇದರ ಕಾರ್ಯಕ್ರಮ ವ್ಯವಸ್ಥಾಪಕಾರದ ಜೀವನ್ ಕೊಲ್ಯ ಸೀರೆ ಗೊಂಡೆ ಹಾಕಿ ಸ್ವ ಉದ್ಯೋಗ ಮಾಡಲು ಇರುವ ಅವಕಾಶ ಗಳ ಬಗ್ಗೆ ತಿಳಿಸಿ ತರಬೇತಿ ನಂತರ ಎಲ್ಲಾ ಅವಕಾಶ ಸದುಪಯೋಗ ಪಡಿಸಿಕೊಳ್ಳಲು ಸಲಹೆ ನೀಡಿ, ಬ್ಯಾಂಕ್ ನಲ್ಲಿ ಸ್ವ ಉದ್ಯೋಗ ಕ್ಕೆ ಸಿಗುವ ಸೌಲಭ್ಯ ಗಳ ಬಗ್ಗೆ ವಿವರಿಸಿದರು. ಬ್ಯಾಂಕ ಬರೋಡ ಝೋನಲ್ ಆಫೀಸ್ ಮಂಗಳೂರು ಇಲ್ಲಿಯ ಹಿಂದಿ ರಾಜ್ಯ ಭಾಷಾ ವಿಭಾಗದ ಮುಖ್ಯ ವ್ಯವಸ್ಥಾಪಕರಾದ ಡಾ. ಬಾಲ ಮುರುಗನ್ ತರಬೇತಿ ಪಡೆದ ಮಹಿಳೆಯರ ಕೌಶಲ್ಯ ದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಇಲ್ಲಿಯ ವಿಜ್ಞಾನಿ ಡಾ. ಕೇದಾರ್ನಾಥ್ ಕೃಷಿ ವಿಜ್ಞಾನ ಕೇಂದ್ರ ದಲ್ಲಿ ಮಹಿಳೆಯರಿಗೆ ಸಿಗುವ ಕೃಷಿ ಆಧಾರಿತ ತರಬೇತಿಗಳ ಬಗ್ಗೆ ಮಾಹಿತಿ ನೀಡಿದರು.ತರಬೇತಿ ಪೂರೈಸಿದ ಮಹಿಳೆಯರು ತರಬೇತಿ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಕೃಷಿ ವಿಜ್ಞಾನ ಕೇಂದ್ರದ ಸಿಬ್ಬಂದಿ ಸತೀಶ್ ನಾಯಕ್, ವರಲಕ್ಷ್ಮಿ ಪೂಜಾ ಸಂಘದ ಅಧ್ಯಕ್ಷರಾದ ಪ್ರಮೀಳಾ, ತರಬೇತುದಾರರಾದ ಮೀನಾಕ್ಷಿ ಉಪಸ್ಥಿತರಿದ್ದರು

ವಿದ್ಯಾ ಶ್ರೀ ಕಾರ್ಯಕ್ರಮ ನಿರೂಪಿಸಿ,ಸೌಜನ್ಯ ಸ್ವಾಗತಿಸಿ, ರತ್ನವತಿ ಧನ್ಯವಾದ ಗೈದರು. 3 ತಿಂಗಳ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ ಮಹಿಳೆಯರಿಗೆ ಪ್ರಮಾಣಪತ್ರ ವಿತರಿಸಲಾಯಿತು.

Related posts

ಕನ್ಯಾಡಿ: ಶ್ರೀರಾಮ ತಾರಕ ಮಂತ್ರ‌ ಸಪ್ತಾಹದಲ್ಲಿ ಭಾಗವಹಿಸಿದ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ

Suddi Udaya

ಉಪ್ಪಾರಪಳಿಕೆ ಸ.ಹಿ.ಪ್ರಾ. ಶಾಲೆಗೆ ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಮತ್ತು ಸೌತಡ್ಕ ಸೇವಾ ಸಮಿತಿಯ ವತಿಯಿಂದ ಪುಸ್ತಕ ವಿತರಣೆ

Suddi Udaya

ಡಿ.17: ಕರಾಯ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ

Suddi Udaya

ಸುವರ್ಣ ನ್ಯೂಸ್ ಮತ್ತು ಕನ್ನಡ ಪ್ರಭ ವತಿಯಿಂದ ಖ್ಯಾತ ಮೂತ್ರರೋಗ ತಜ್ಞ ಡಾ| ಸದಾನಂದ ಪೂಜಾರಿರವರಿಗೆ ಆರೋಗ್ಯ ಸೇವಾ ಶ್ರೇಷ್ಠತೆ ಪ್ರಶಸ್ತಿ

Suddi Udaya

ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶ ಕರಡು ಅಧಿಸೂಚನೆಗೆ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಿ – ರಾಜ್ಯ ಸರ್ಕಾರ ಜನರ ಪರವಾಗಿ ದೃಢ ನಿಲುವು ತಾಳಬೇಕು: ಶಾಸಕ ಹರೀಶ್ ಪೂಂಜ

Suddi Udaya

ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟ ಶ್ರೀ ಕೊಡಮಣಿತ್ತಾಯ ದೈವದ ವರ್ಷಾವಧಿ ಜಾತ್ರೋತ್ಸವ: ಧ್ವಜಾರೋಹಣ

Suddi Udaya
error: Content is protected !!