
ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವದ ಅಂಗವಾಗಿ ಆಯೋಜಿಸಲಾದ ಸಾಹಿತ್ಯ ಸಮ್ಮೇಳನದ 93ನೇ ಅಧಿವೇಶನವನ್ನು ಹಿರಿಯ ಸಾಹಿತಿಗಳು ಮತ್ತು ಅಂಕಣಕಾರರಾದ ಪ್ರೊ. ಪ್ರೇಮಶೇಖರ ದೀಪ ಬೆಳಗಿಸಿ ಉದ್ಘಾಟಿಸಿದರು.
ನಂತರ ಮಾತನಾಡಿ,ಇಂದು ಕನ್ನಡ ಸಾಹಿತ್ಯ ಹುಲುಸಾಗಿ ಬೆಳೆದು ಬರುತ್ತಿದ್ದು, ಹೊಸ ಸಾಹಿತಿಗಳು ಹಣಕ್ಕಾಗಿ ಸಾಹಿತ್ಯ ಸೃಷ್ಟಿಸಬಾರದು, ಸಮಾಜ ಹೇಗಿದೆಯೋ ಹಾಗೆಯೇ ಸಾಹಿತ್ಯ ಬರಬೇಕು, ಸಾಹಿತ್ಯದಿಂದ ಸಮಾಜ ಕಲ್ಯಾಣವಾಗಬೇಕು ಎಂದು
ಹೇಳಿದರು.
ವಿಶ್ವವಾಣಿ ಪತ್ರಿಕೆಯ ಮುಖ್ಯ ಸಂಪಾದಕರಾದ ವಿಶ್ವೇಶ್ವರ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ,
ಸಾಹಿತ್ಯಕ್ಕೆ ಇಂದು ಭಾಷೆಯೇ ದೊಡ್ಡ ಸವಾಲಾಗಿದೆ. ಭಾಷೆ ಇಂದು ಸ್ವಚ್ಛತೆ, ಪರಿಶುದ್ಧ ತೆಯನ್ನು ಉಳಿಸಿಕೊಳ್ಳಲು ವಿಫುಲವಾಗಿರುವುದು ಆತಂಕದ ವಿಷಯವಾಗಿದೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಪ್ರಸ್ತಾವಿಕವಾಗಿ ಮಾತನಾಡಿ, ಕ್ಷೇತ್ರದಿಂದ
ಕನ್ನಡ ಭಾಷೆ,ಸಾಹಿತ್ಯ, ಸಂಸ್ಕೃತಿ ಉಳಿಸಿ ಬೆಳೆಸುವ ದೃಷ್ಟಿಯಿಂದ ವರ್ಷದುದ್ದಕ್ಕೂ ಅನೇಕ
ಕಾರ್ಯಕ್ರಮಗಳಿಗೆ ನಿರಂತರ ಪ್ರಾಧಾನ್ಯತೆ ನೀಡಲಾಗುತ್ತದೆ ಎಂದರು.
ಲೇಖಕಿ ಮತ್ತು ಗಮಕ ವ್ಯಾಖ್ಯಾತ್ರಿ ಶ್ರೀಮತಿ ಶಾಂತಾ ನಾಗಮಂಗಲ ಬೆಂಗಳೂರು, ಆರ್.ಎಮ್.ಎಸ್ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಆಡಳಿತಾಧಿಕಾರಿ ಡಾ. ರಘ ವಿ., ಸಾಹಿತಿಗಳು ಮತ್ತು ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ.ಬಿ.ಎಂ ಶರಭೇಂದ್ರಸ್ವಾಮಿ ಧಾರವಾಡ ಉಪನ್ಯಾಸ
ನೀಡಿದರು.
ಕಾಯ೯ಕ್ರಮದಲ್ಲಿ ಡಾ. ಹೇಮಾವತಿ ವೀ.ಹೆಗ್ಗಡೆ, ಡಿ.ಸುರೇಂದ್ರ ಕುಮಾರ್, ಡಿ. ಹರ್ಷೆಂದ್ರ ಕುಮಾರ್, ಡಿ. ರಾಜೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ನೀತಾ ರಾಜೇಂದ್ರ ಕುಮಾರ್, ಅಮಿತಾ ಕುಮಾರ್, ಶ್ರದ್ಧಾ ಅಮಿತ್ ಮೊದಲಾದವರು ಉಪಸ್ಥಿತರಿದ್ದರು.
ಶ್ರೀ ಧ.ಮಂ.ಶಿಕ್ಷಣ ಸಂಸ್ಥೆಗಳು ಉಜಿರೆಯ ವಿದ್ಯಾರ್ಥಿಗಳ ಪ್ರಾಥ೯ನೆ ಬಳಿಕ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಸ್ವಾಗತಿಸಿದರು. ಎಸ್.ಡಿ.ಎಂ ಸೊಸೈಟಿ ಉಜಿರೆ ನಿರ್ದೇಶಕ (ಯೋಜನೆ) ಡಿ.ಶ್ರೇಯಸ್ ಕುಮಾರ್, ಶ್ರೀ ಧ.ಮಂ.ಶಿಕ್ಷಣ ಸಂಸ್ಥೆಗಳು ಉಜಿರೆಯ ಕಾಯ೯ದಶಿ೯ ಡಾ.ಸತೀಶ್ಚಂದ್ರ ಎಸ್ ಸನ್ಮಾನ ಪತ್ರ ವಾಚಿಸಿದರು. ಸ್ವಾಗತ ಸಮಿತಿ ಖಜಾಂಚಿ ಡಿ. ಹಷೇಂದ್ರ ಕುಮಾರ್ ಉಪನ್ಯಾಸಕರನ್ನು ಸನ್ಮಾನಿಸಿದರು. ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಸದಸ್ಯೆ ರಾಜಶ್ರೀ ಎಸ್. ಹೆಗ್ಡೆ ಧನ್ಯವಾದವಿತ್ತರು .ಉಜಿರೆ ಎಸ್.ಡಿ.ಎಂ.ಕಾಲೇಜು ಉಪನ್ಯಾಸಕ ಡಾ.ದಿವಾ ಕೊಕ್ಕಡ ಕಾರ್ಯಕ್ರಮ ನಿರೂಪಿಸಿದರು. ರಾಹುಲ್ ವೆಲ್ಲಾಲ್ ಮತ್ತು ತಂಡ ಬೆಂಗಳೂರು ಇವರಿಂದ ‘ಸಂಗೀತ ಸಂಜೆ’ ಕಾರ್ಯಕ್ರಮ ನಡೆಯಿತು. ರಾತ್ರಿ ಗೌರಿಮಾರುಕಟ್ಟೆ ಉತ್ಸವ ನಡೆಯಿತು.
.











