27.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಪರೀಕ ಸೌಖ್ಯವನ ಶ್ರೀ ಧ.ಮಂ. ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಸೌಖ್ಯವನ ಪರೀಕ ಆಸ್ಪತ್ರೆಯಲ್ಲಿ ನ.18 ರಂದು 8ನೇ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆಯನ್ನು ವಿಜೃಂಭಣೆಯಿಂದ ಕ್ಷೇಮ ಹಾಲ್‌ನಲ್ಲಿ ಆಚರಿಸಲಾಯಿತು.

ಅಧ್ಯಕ್ಷತೆಯನ್ನು ವಹಿಸಿದ್ದ ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಅಭಿದ್ ಗಡ್‌ಯಾಲ್ ಅವರು ಪ್ರಸ್ತುತ ಸಮಾಜವು ಎದುರಿಸುತ್ತಿರುವ ಕಲುಷಿತ ವಾತಾವರಣವು ಮನುಷ್ಯನ ದೇಹವನ್ನು ಹೆಚ್ಚು ಘಾಸಿಗೊಳಿಸುವುದರಿಂದಾಗಿ ಪ್ರಕೃತಿ ಚಿಕಿತ್ಸೆಯು ಹೆಚ್ಚು ಫಲಕಾರಿಯಾಗುವುದಲ್ಲದೆ ಉತ್ತಮ ಜೀವನ ಶೈಲಿಗೆ ಅಗತ್ಯ ಎಂದು ತಮ್ಮ ಶುಭನುಡಿಗಳಲ್ಲಿ ತಿಳಿಸಿದರು.

ಗೌರವ ಉಪಸ್ಥಿತಿಯಾಗಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ದಕ್ಷಿಣ ವಲಯ ಶಾಸಕ ವೇದವ್ಯಾಸ ಕಾಮತ್‌ರವರು ಶುಭಾಶಂಸನೆಗೈದು “ ಪ್ರಕೃತಿ ಚಿಕಿತ್ಸೆಯ ಮೂಲಕ ಸಾಮಾಜಿಕ ಸ್ವಾಸ್ಥ ರಕ್ಷಣೆ ಮಾಡುತ್ತಿರುವ ಡಾ| ಡಿ ವೀರೇಂದ್ರ ಹೆಗ್ಗಡೆಯವರ ಸಾಮಾಜಿಕ ಕಳಕಳಿ, ಸಮಾಜಮುಖೀ ಚಿಂತನೆಗಳು ಅತ್ಯಂತ ಶ್ಲಾಘನೀಯ, ದೇಹ ಮನಸ್ಸು ಆತ್ಮಗಳನ್ನು ಪುನರ್‌ಚೇತನಗೊಳಿಸುವ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಸಂಪೂರ್ಣ ಸ್ವಾಸ್ಥಭರಿತ ಜೀವನವನ್ನು ನಾವು ಹೊಂದಬಹುದು ಎಂದು ಸಂಸ್ಥೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ಶುಭ ಹಾರೈಸಿದರು.

ಅತಿಥಿಗಳಾಗಿ ಆಗಮಿಸಿದ್ದ ಇನ್ನ ನಿಸರ್ಗಧಾಮದ ನಿರ್ದೇಶಕಿ ಡಾ|| ಸವಿತಾ ಹರೀಶ್‌ರವರು ಪ್ರಕೃತಿ ಚಿಕಿತ್ಸೆ ಹಾಗೂ ಪಂಚಭೂತ ತತ್ವದ ಕುರಿತು ಸಂಪೂರ್ಣ ಮಾಹಿತಿಗಳನ್ನು ನೀಡಿದರು.
2025ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸೌಖ್ಯವನದ ಮುಖ್ಯವೈದ್ಯಾಧಿಕಾರಿ ಡಾ|| ಗೋಪಾಲ ಪೂಜಾರಿಯವರು ಪ್ರಕೃತಿ ಚಿಕಿತ್ಸೆಯಲ್ಲಿ ಯೋಗವು ಯಾವ ರೀತಿ ಪರಿಣಾಮ ಬೀರುತ್ತದೆ ಹಾಗೂ ಸೌಖ್ಯವನದಲ್ಲಿ ಯಾವುದೆಲ್ಲಾ ಖಾಯಿಲೆಗಳಿಗೆ ಪ್ರಕೃತಿ ದತ್ತವಾದ ಚಿಕಿತ್ಸೆಗಳನ್ನು ನೀಡಲಾಗುವುದು ಎಂಬುದನ್ನು ವಿವರಿಸಿದರು.
ಶಾಂತಿವನ ಟ್ರಸ್ಟ್ ನ ಕಾರ್ಯದರ್ಶಿ ಬಿ ಸೀತಾರಾಮ ತೋಳ್ಪಾಡಿತ್ತಾಯರವರು ವೀರೇಂದ್ರ ಹೆಗ್ಗಡೆಯವರ ದೂರದರ್ಶಿತ್ವದ ಫಲವಾಗಿ ರೂಪುಗೊಂಡ ಶಾಂತಿವನ, ಸೌಖ್ಯವನ, ಕ್ಷೇಮವನಗಳ ಕಾರ್ಯ ಚಟುವಟಿಕೆ, ಸೌಖ್ಯವನ ನಡೆದು ಬಂದ ದಾರಿಯ ಬಗ್ಗೆ ಮಾತನಾಡಿ ಹೆಗ್ಗಡೆಯವರ ಕನಸುಗಳು ಸಾಕಾರಗೊಂಡು ಪ್ರಕೃತಿ ಚಿಕಿತ್ಸಾ ಕೇಂದ್ರಗಳ ಮೂಲಕ ಸಮಾಜ ಸೇವೆಗೈಯ್ಯುತ್ತಿರುವುದನ್ನು ಶ್ಲಾಘಿಸಿದರು.


ಸಂಸ್ಥೆಯ ವತಿಯಿಂದ ಅಪರ ಜಿಲ್ಲಾಧಿಕಾರಿ ಮತ್ತು ಶಾಸಕರನ್ನು ಗೌರವಿಸಲಾಯಿತು. ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿಯವರಾದ ಡಾ|| ಶೋಭಿತ್ ಶೆಟ್ಟಿಯವರು ಪ್ರಸ್ತಾವನೆಗೈದು ಸ್ವಾಗತಿಸಿದರು. ಡಾ|| ಅಜಿತ್ ಮತ್ತು ಕಿರಿಯ ವೈದ್ಯರ ತಂಡದಿಂದ ಯೋಗ ಪ್ರಾತ್ಯಕ್ಷಿಕೆಯು ಪ್ರದರ್ಶನಗೊಂಡಿತು. ವ್ಯವಸ್ಥಾಪಕ ಪ್ರವೀಣ್ ಕುಮಾರ್ ಕಾರ್ಯಕ್ರಮವನ್ನು ಸಂಯೋಜಿಸಿ ನಿರೂಪಿಸಿದರು. ಪಿಆರ್‌ಓ ಶ್ರೀಮತಿ ಸುಷ್ಮಾ ಪುತ್ರನ್ ವಂದಿಸಿದರು.

Related posts

ಮೇ 12-16 ಉಜಿರೆ ಎಸ್ ಡಿ ಎಂ ನ್ಯಾಚುರೋಪತಿ ಕಾಲೇಜಿನಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವಿಜ್ಞಾನದ ಮಹಾಸಮ್ಮೇಳನ

Suddi Udaya

ಮೊಗ್ರು: ಜೈ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್ ಅಲೆಕ್ಕಿ–ಮುಗೇರಡ್ಕ ಇದರ 25 ನೇ ವರ್ಷದ ರಜತ ಪಥ ಪ್ರಯುಕ್ತ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ಶ್ರೀ ದೇವಿ ಮಹಾತ್ಮೆ

Suddi Udaya

ನಾರಾವಿ ವಲಯದ ಭಜನಾ ಪರಿಷತ್ತಿನ ಪದಾಧಿಕಾರಿಗಳ ಆಯ್ಕೆ

Suddi Udaya

ನಿವೃತ್ತರಾದ ಪಿಲಾತಬೆಟ್ಟು ಸಂತ ಜೋಸೆಫರ ಅ.ಹಿ.ಪ್ರಾ. ಶಾಲಾ ಮುಖ್ಯಶಿಕ್ಷಕಿ ಸಿ| ಮೋಂತಿ ಡಿ’ಸೋಜಾ ರವರ ವಿದಾಯ ಸಮಾರಂಭ

Suddi Udaya

ಧರ್ಮಸ್ಥಳ ಪಾಂಗಳ ಕ್ರಾಸ್ ನಲ್ಲಿ ಗುಂಪುಗಳ ನಡುವೆ ಅಹಿತಕರ ಘಟನೆ: ಧರ್ಮಸ್ಥಳ ಠಾಣೆಯಲ್ಲಿ 4 ಪ್ರಕರಣ ಹಾಗೂ ಬೆಳ್ತಂಗಡಿ ಠಾಣೆಯಲ್ಲಿ 3 ಪ್ರಕರಣ ದಾಖಲು

Suddi Udaya

ವೇಣೂರು ಭಗವಾನ್ ಶ್ರೀ ಬಾಹಬಲಿಯ ಮಹಾ ಮಜ್ಜನ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಹೆಗ್ಗಡೆ ಭೇಟಿ, ಅಟ್ಟಳಿಗೆ ಹಾಗೂ ಇತರ ಕಾಮಗಾರಿ ವೀಕ್ಷಣೆ

Suddi Udaya
error: Content is protected !!