25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬುರುಡೆ ಷಡ್ಯಂತ್ರ ಪ್ರಕರಣದಲ್ಲಿ ಕೋರ್ಟ್ ಗೆ ವರದಿ ಸಲ್ಲಿಕೆ: ಆರು ಮಂದಿ ಷಡ್ಯಂತ್ರ ಪ್ರಕರಣದಲ್ಲಿ ಭಾಗಿಯಾಗಿರುವುದು ಧೃಡ

ಬೆಳ್ತಂಗಡಿ : ಬುರುಡೆ ಷಡ್ಯಂತ್ರ ಪ್ರಕರಣ ಸಂಬಂಧ ಬೆಳ್ತಂಗಡಿ ನ್ಯಾಯಾಲಯಕ್ಕೆ ಆರು ಮಂದಿ ಆರೋಪಿಗಳ ವಿರುದ್ಧ ಎಸ್.ಐ.ಟಿ ಅಧಿಕಾರಿಗಳು ನ.20 ರಂದು ‘ಸುಳ್ಳು ಸಾಕ್ಷಿ’ ವರದಿಯನ್ನು (Perjury Report) ಅಂಡರ್ ಸೆಕ್ಷನ್(u/s) 215 ಅಡಿಯಲ್ಲಿ ಸಲ್ಲಿಕೆ ಮಾಡಿದ್ದಾರೆ.

ಬೆಳ್ತಂಗಡಿ ಎಸ್.ಐ.ಟಿ ಅಧಿಕಾರಿಗಳು ಬುರುಡೆ ಷಡ್ಯಂತ್ರ ಪ್ರಕರಣದಲ್ಲಿ ಜೈಲಿನಲ್ಲಿರುವ ಚಿನ್ನಯ್ಯ ಸೇರಿದಂತೆ ಗಿರೀಶ್ ಮಟ್ಟಣ್ಣವರ್, ಮಹೇಶ್ ಶೆಟ್ಟಿ ತಿಮರೋಡಿ, ಜಯಂತ್ ಟಿ, ಸೌಜನ್ಯ ಮಾವ ವಿಠಲ್ ಗೌಡ, ಸುಜಾತ ಭಟ್ ಸೇರಿ ಒಟ್ಟು ಆರು ಮಂದಿ ಷಡ್ಯಂತ್ರ ಪ್ರಕರಣದಲ್ಲಿ ಭಾಗಿಯಾದವರನ್ನು ಆರೋಪಿಗಳನ್ನಾಗಿ ಮಾಡಿ ‘ಸುಳ್ಳು ಸಾಕ್ಷಿ’ ವರದಿಯನ್ನು (Perjury Report) ಅಂಡರ್ ಸೆಕ್ಷನ್(u/s) 215 ಅಡಿಯಲ್ಲಿ ಬೆಳ್ತಂಗಡಿ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ವಿಜಯೇಂದ್ರ.ಹೆಚ್.ಟಿ ಮುಂದೆ ನ.20 ರಂದು ಸಂಜೆ 3:15 ಕ್ಕೆ ಗಂಟೆಗೆ ಎಸ್.ಐ.ಟಿ ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಮತ್ತು ತಂಡದವರು ಸಲ್ಲಿಕೆ ಮಾಡಿದ್ದಾರೆ.

ಎಸ್‌ಐಟಿ ವರದಿಯಲ್ಲಿ ಸುಮಾರು 3,923 ಪುಟಗಳನ್ನು ನಮೂದಿಸಿದ್ದಾರೆ. ಐದು ಮಂದಿ ಆರೋಪಿಗಳು ತನಿಖೆಗೆ ಸಹಕರಿಸುತ್ತಿಲ್ಲ ಎಂಬುವುದಾಗಿ ವರದಿಯ ಆಧಾರದಲ್ಲಿ ಮುಂದಿನ ತನಿಖೆ ಬಗ್ಗೆ ನ್ಯಾಯಾಲಯ ಸೂಚನೆ ನೀಡುವಂತೆ ವರದಿಯಲ್ಲಿ ತಿಳಿಸಲಾಗಿದೆ‌.ಒಟ್ಟು ಪ್ರಕರಣದ ತನಿಖೆ ಮುಗಿಸಿದ ಬಳಿಕ ಮುಂದಿನ ದಿನಗಳಲ್ಲಿ ಚಾರ್ಜ್ ಶೀಟ್ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಿದ್ದಾರೆ.

Related posts

ಕೊಕ್ಕಡ ಹಳ್ಳಿಗೇರಿ ಕಾಮಧೇನು ಗೋಶಾಲೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ | ಡಿ. ವೀರೇಂದ್ರ ಹೆಗ್ಗಡೆ ಹಾಗೂ ಇಸ್ಕಾನ್ ನ ಹರೀಶ್ ಭೇಟಿ

Suddi Udaya

ತೆಂಕಕಾರಂದೂರು: ತೆಂಗಿನ ಮರ ಬಿದ್ದು ಮನೆಗೆ ಹಾನಿ: ಪ್ರಾಣಾಪಾಯದಿಂದ ಪಾರು

Suddi Udaya

ಪೆರಿಂಜೆ ಸ. ಹಿ. ಪ್ರಾ. ಶಾಲೆಯ ನಿವೃತ್ತ ಶಿಕ್ಷಕಿ ವಸಂತಿ ಕೆ. ರವರಿಗೆ ಬೀಳ್ಕೊಡುಗೆ

Suddi Udaya

ಧರ್ಮಸ್ಥಳ: ವೈದ್ಯಕೀಯ ವಿದ್ಯಾರ್ಥಿನಿ ಅನನ್ಯ ಭಟ್ ನಾಪತ್ತೆ ಪ್ರಕರಣಕ್ಕೆ ಮರು ಜೀವ ಎಸ್ಪಿಗೆ ದೂರು ನೀಡಿದ ಆಕೆಯ ತಾಯಿ

Suddi Udaya

ದಿ. ಕೆ.ವಸಂತ ಬಂಗೇರ ಮತ್ತು ಎಚ್ ಶೇಖರ ಬಂಗೇರರವರಿಗೆ ಗೆಜ್ಜೆ ಗಿರಿಯಲ್ಲಿ ಶ್ರದ್ಧಾಂಜಲಿ

Suddi Udaya

ಗಾಳಿ ಮಳೆಗೆ ಮನೆ ಹಾನಿ: ಚಾರ್ಮಾಡಿ ಮುಡಿಪು ಅರ್ಕನ ಮಸೀದಿಯ ಧರ್ಮಗುರುಸಮೀರ್ ಮುಸ್ಲಿಯರ್,ದಿನೇಶ್ ವಲಸಾರಿ ರವರಿಗೆ ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ನಿಂದ ಆರ್ಥಿಕ ನೆರವು

Suddi Udaya
error: Content is protected !!