22.9 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ನಿಟ್ಟಡೆ ಕುಂಭಶ್ರೀ ಆಂ.ಮಾ. ಶಾಲಾ ಮತ್ತು ಕಾಲೇಜಿನಲ್ಲಿ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ

ವೇಣೂರು: ನಿಟ್ಟಡೆ ಕುಂಭಶ್ರೀ ಆಂ.ಮಾ. ಶಾಲಾ ಮತ್ತು ಕಾಲೇಜಿನಲ್ಲಿ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ನಡೆಯಿತು.

ಕಾರ್ಯಕ್ರಮವನ್ನು ಜೈನ್ ಕಾಲೇಜಿನ ಉಪನ್ಯಾಸಕ ಮಹಾವೀರ ಜೈನ್ ಉದ್ಘಾಟಿಸಿ, “ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುವತ್ತ ಈ ವಿದ್ಯಾಸಂಸ್ಥೆ ಸದಾ ಮುಂದಾಗಿದೆ” ಎಂದು ಶ್ಲಾಘಿಸಿದರು.

ಬೆಳ್ತಂಗಡಿ ತಾಲೂಕಿನ ಶಿಕ್ಷಣಾಧಿಕಾರಿಯಾದ ಶ್ರೀಮತಿ ತಾರಾ ಕೇಸರಿ ಅವರು ಹಾಗೂ ನಿಟ್ಟಡೆ ಕ್ಲಸ್ಟರ್‌ ಸಿಆರ್ ಪಿ ಶ್ರೀಮತಿ ಆರತಿ ಶುಭ ಹಾರೈಸಿದರು. ಅದೇ ರೀತಿ ವೇಣೂರು ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಮತಿ ಮಲ್ಲಿಕಾ ಕಾಶಿನಾಥ್ ಅವರು, “ಸಂಸ್ಥೆಯು ಶಿಸ್ತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ಉತ್ತಮ ಮಟ್ಟಕ್ಕೆ ಬೆಳೆಯುತ್ತಿದೆ” ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಶಾಲಾ ಸಂಸ್ಥಾಪಕ ಗಿರೀಶ್ ಕೆ ಹೆಚ್ ಈ ಕಾರ್ಯಕ್ರಮವು ಪೋಷಕರ, ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಪರಿಶ್ರಮದಿಂದ ತಿಳಿಸಿದರು.

ಕುಕ್ಕೆಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಅನಿತಾ ಕೆ, ಶಿಕ್ಷಕ–ರಕ್ಷಕ ಸಂಘದ ಅಧ್ಯಕ್ಷ ಚಂದ್ರಶೇಖರ್, ಕಾಲೇಜಿನ ಶಿಕ್ಷಕ–ರಕ್ಷಕ ಸಂಘದ ಅಧ್ಯಕ್ಷ ಗೋಪಾಲ ಶೆಟ್ಟಿ ಕಾರ್ಯಕ್ರಮಕ್ಕೆ ಶುಭಾಶಯಗಳನ್ನು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷರಾಗಿದ್ದ ಶಾಲಾ ಸಂಚಾಲಕ ಅಶ್ವಿತ್ ಕುಲಾಲ್ ಅವರು, “ಸಂಸ್ಥಾಪಕರ ಮಾರ್ಗದರ್ಶನ ಮತ್ತು ಪೋಷಕರ ಬೆಂಬಲದಿಂದ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಸಾಧ್ಯವಾಯಿತು” ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಕುಂಭಶ್ರೀ ವೈಭವ ಸಮಿತಿಯ ಪ್ರಧಾನ ಅಧ್ಯಕ್ಷರಾದ ಶ್ರೀ ಹರೀಶ್ ಪೊಕ್ಕಿ, ಸಮಿತಿಯ ಅಧ್ಯಕ್ಷ ಅಶ್ವಿತ್ ಕುಲಾಲ್, ಶಿಕ್ಷಕ–ರಕ್ಷಕ ಸಂಘದ ಉಪಾಧ್ಯಕ್ಷ ವಸಂತ್ ಪಡೀಲ್, ಸಂಘದ ಎಲ್ಲಾ ಸದಸ್ಯರು, ಕಾಲೇಜಿನ ಪ್ರಾಂಶುಪಾಲರಾದ ಓಮನ, ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ ಮಮತಾ ಶಾಂತಿ, ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ ಶೋಭಾ ಎಲ್.ಎನ್ ಹಾಗೂ ಶಿಕ್ಷಕ–ಶಿಕ್ಷಕೇತರ ವೃಂದ ಉಪಸ್ಥಿತರಿದ್ದರು.

ಒಟ್ಟು 9 ಶಾಲೆಗಳ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದರು.

ಫಲಿತಾಂಶ: ಕಿರಿಯ ವಿಭಾಗ: ಪ್ರಥಮ ಸಮಗ್ರ ಚಾಂಪಿಯನ್: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಿಟ್ಟಡೆ,
ದ್ವಿತೀಯ ಸಮಗ್ರ ಚಾಂಪಿಯನ್: ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲೆ, ನಿಟ್ಟಡೆ ವೇಣೂರು

ಹಿರಿಯ ವಿಭಾಗ: • ಪ್ರಥಮ ಸಮಗ್ರ ಚಾಂಪಿಯನ್: ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲೆ, ನಿಟ್ಟಡೆ ವೇಣೂರು
• ದ್ವಿತೀಯ ಸಮಗ್ರ ಚಾಂಪಿಯನ್: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕುಕ್ಕೆ ಡಿ

ಕಾರ್ಯಕ್ರಮವನ್ನು ಪ್ರೌಢಶಾಲಾ ವಿಭಾಗದ ಕನ್ನಡ ಶಿಕ್ಷಕ ಸುಮನ್ ಮತ್ತು ಆಂಗ್ಲ ಭಾಷಾ ಶಿಕ್ಷಕರಾದ ಶ್ರೀಮತಿ ರಶ್ಮಿ ನಿರೂಪಿಸಿದರು. ಕಾಲೇಜಿನ ಉಪನ್ಯಾಸಕ ಮನೋಜ್ ಸ್ವಾಗತಿಸಿ, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ ಶುಭ ವಂದನೆ ಸಲ್ಲಿಸಿದರು.

Related posts

ನಾರಾವಿ ಗ್ರಾ.ಪಂ. ನಲ್ಲಿ ಸಂವಿಧಾನ ಜಾಗೃತಿ ಜಾಥಾ

Suddi Udaya

ಕನ್ನಡದಲ್ಲಿ ಬರಲಿದೆ ದಸ್ಕತ್ ತುಳು ಚಿತ್ರ

Suddi Udaya

ಭಾರತೀಯ ಜೈನ್ ಮಿಲನ್ ಬೆಳ್ತಂಗಡಿ ವತಿಯಿಂದ ಶ್ರವಣಬೆಳಗೊಳ ಶ್ರೀ ಗಳಿಗೆ ವಿನಯಾಂಜಲಿ ಕಾರ್ಯಕ್ರಮ

Suddi Udaya

ಆ 17: ತಾಲೂಕಿನಲ್ಲಿ ಮೊಟ್ಟ ಮೊದಲ ಬಾರಿಗೆ ರಮ್ಯ 1 ಗ್ರಾಂ ಗೋಲ್ಡ್ & ಫ್ಯಾನ್ಸಿ ಉಜಿರೆಯಲ್ಲಿ ಲಾಕ್ಮಿ ಕಂಪೆನಿಯ ಕಾಸ್ಮೆಟಿಕ್ಸ್ ಹೊಸ ಕೌಂಟರ್ ಶುಭಾರಂಭ

Suddi Udaya

ಶ್ರೀ ದುರ್ಗಾ ಟೆಕ್ಸ್ ಟೈಲ್ಸ್ ನಲ್ಲಿ ಸ್ಪೆಷಲ್ ಡಿಸ್ಕೌಂಟ್ ಸೇಲ್, ಸಾರಿ ಮೇಳ : ನೇರವಾಗಿ ಫ್ಯಾಕ್ಟರಿಯಿಂದ ಖರೀದಿ, ಗ್ರಾಹಕರಿಗೆ ಶೇ.20 ರಿಯಾಯಿತಿ ದರದಲ್ಲಿ ಮಾರಾಟ

Suddi Udaya

ಚಾರ್ಮಾಡಿ ಘಾಟಿಯಲ್ಲಿ ಕಾಡಾನೆ ಪ್ರತ್ಯಕ್ಷ: ವಾಹನ ಸವಾರರಲ್ಲಿ ಆತಂಕ

Suddi Udaya
error: Content is protected !!