27.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನಾಳೆ(ನ.22): ಉಜಿರೆ-ಪೆರಿಯಶಾಂತಿ ಸ್ಪರ್ ರಸ್ತೆ ಕಾಮಗಾರಿಗೆ ಶಿಲಾನ್ಯಾಸ: ಧರ್ಮಸ್ಥಳದಲ್ಲಿ ಬೆಂಗಳೂರು ಮಾದರಿಯ ಅಂಡರ್ ಪಾಸ್ ನಿರ್ಮಾಣ

ಧರ್ಮಸ್ಥಳ: ಉಜಿರೆ- ಪೆರಿಯಶಾಂತಿ ಸ್ಪರ್ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ನ.22 ರಂದು ಬೆಳಗ್ಗೆ 9:30ಕ್ಕೆ ಧರ್ಮಸ್ಥಳ ದ್ವಾರದ ಬಳಿ ಶಿಲಾನ್ಯಾಸ ನಡೆಯಲಿದೆ.

614 ಕೋಟಿ ರೂ. ವೆಚ್ಚದ ಕೇಂದ್ರ ಸರಕಾರದ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಇಲಾಖೆಯ ಹೆದ್ದಾರಿಗಳ ನಿರ್ವಹಣೆ ಯೋಜನೆಯಲ್ಲಿ 30 ಕಿ.ಮೀ. ವ್ಯಾಪ್ತಿಯ ಈ ಸ್ಪರ್ ರಸ್ತೆ ಅಭಿವೃದ್ಧಿ ಹೊಂದಲಿದೆ. ಕಾಮಗಾರಿಯಲ್ಲಿ ರಸ್ತೆ ವಿಸ್ತರಣೆಗೊಳ್ಳಲಿದ್ದು, ಸುಸಜ್ಜಿತ ಚರಂಡಿಗಳು, ಅಗತ್ಯ ಸ್ಥಳಗಳಲ್ಲಿ ಕಿರು ಸೇತುವೆ, ಸೇತುವೆಗಳು, ಧರ್ಮಸ್ಥಳದ ಮುಖ್ಯದ್ವಾರದ ಬಳಿ ಬೆಂಗಳೂರು ಮೆಜೆಸ್ಟಿಕ್ ಮಾದರಿಯ ಅಂಡರ್ ಪಾಸ್, ರಾತ್ರಿಯ ಸಂಚಾರ ಸುರಕ್ಷತೆಗೆ ಪೇಟೆ ಪ್ರದೇಶಗಳಲ್ಲಿ ವಿಶೇಷ ವಿದ್ಯುತ್ ದೀಪಗಳ ಅಳವಡಿಕೆಯಾಗಲಿದೆ. ಈ ರಸ್ತೆಯು 4 ವರ್ಷಗಳ ಹಿಂದೆ ರಾಜ್ಯ ಹೆದ್ದಾರಿ ಇಲಾಖೆಯಿಂದ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಹಸ್ತಾಂತರಗೊಂಡಿದೆ. ಬಳಿಕ ಸಾಕಷ್ಟು ಸಮೀಕ್ಷೆಗಳು ನಡೆದಿವೆ. ಉಜಿರೆ- ಪೆರಿಯಶಾಂತಿ ವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ಧಿಗಾಗಿ ಮರಗಳು ತೆರವುಗೊಳ್ಳಬೇಕಾಗಿದ್ದು ಅವುಗಳ ಲೆಕ್ಕಾಚಾರ ಪೂರ್ಣಗೊಂಡಿದೆ.

ಐತಿಹಾಸಿಕ ಕ್ಷೇತ್ರಗಳನ್ನು ಸಂಪರ್ಕಿಸುವ, ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಅಥವಾ ಒಂದು ರಾಷ್ಟ್ರೀಯ ಹೆದ್ದಾರಿಯಿಂದ ಇನ್ನೊಂದು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವ ಅಥವಾ ಒಂದು ಪ್ರಮುಖ ರಸ್ತೆಯನ್ನು ಸಂಪರ್ಕಿಸುವ ಒಳದಾರಿಗಳನ್ನು ಮೇಲ್ದರ್ಜೆಗೇರಿಸುವ ಸ್ಪರ್ ಯೋಜನೆಯಡಿ ನಡೆಯಲಿರುವ ಈ ಕಾಮಗಾರಿಯಿಂದ ಮುಂದಿನ ದಿನಗಳಲ್ಲಿ ಧರ್ಮಸ್ಥಳ, ಸುಬ್ರಹ್ಮಣ್ಯ ಕ್ಷೇತ್ರಗಳನ್ನು ಸಂದರ್ಶಿಸುವವರಿಗೆ ಅನುಕೂಲವಾಗಲಿದೆ.

ಉಜಿರೆ ಪೇಟೆಯಿಂದ ಸಿದ್ಧವನ ತನಕ ಈಗಾಗಲೇ ರಸ್ತೆ ಅಭಿವೃದ್ಧಿ ಹೊಂದಿದೆ. ಆದರೆ ಇಲ್ಲಿ ಮತ್ತೆ ಕಾಮಗಾರಿ ನಡೆಯಲಿದೆಯೇ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ. 2 ಕಿ.ಮೀ. ವ್ಯಾಪ್ತಿಯ ಈ ರಸ್ತೆ ಅಭಿವೃದ್ಧಿ ಹೊಂದಿದ್ದರೂ, ಇಲ್ಲಿ ಸರಿಯಾದ ಫುಟ್ಬಾತ್, ಪಾರ್ಕಿಂಗ್ ವ್ಯವಸ್ಥೆಗಳು ಇರುವುದಿಲ್ಲ ರಸ್ತೆ ಅಭಿವೃದ್ಧಿ ಹೊಂದಿರುವ ಜಾಗಗಳಲ್ಲಿ ವಾಹನಗಳ ಬೇಕಾಬಿಟ್ಟಿ ಪಾರ್ಕಿಂಗ್‌ನಿಂದ ಇತರ ವಾಹನ ಸವಾರರು ಹೈರಾಣರಾಗುತ್ತಿದ್ದಾರೆ.

Related posts

ಖ್ಯಾತ ಕಲಾವಿದ ಗಣೇಶ್ ಗುಂಪಲಾಜೆರವರಿಗೆ ಗಣೇಶೋತ್ಸವದ ಗಣಪತಿ ರಚನೆಯಲ್ಲಿ ಪ್ರಥಮ ಸ್ಥಾನ

Suddi Udaya

ಕೊಕ್ಕಡ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ನಿಂದ ರೂ.2 ಲಕ್ಷ ದೇಣಿಗೆ

Suddi Udaya

ಮಾಲಾಡಿಯ ಜೆನಿನ್ ಡಿಸೋಜರವರಿಗೆ ಬಿ.ಎ.ಎಸ್.ಎಲ್.ಪಿ ಯಲ್ಲಿ ಮೂರನೇ ರ್‍ಯಾಂಕ್

Suddi Udaya

ನಿಡ್ಲೆ ಸರ್ಕಾರಿ ಪ್ರೌಢಶಾಲೆಗೆ ಶೇ. 88.2 ಫಲಿತಾಂಶ

Suddi Udaya

ಬೆಳ್ತಂಗಡಿ ಕೇಂದ್ರ ಜುಮ್ಮಾ ಮಸೀದಿಯಲ್ಲಿ ಈದುಲ್ ಫಿತ್ರ್ ಆಚರಣೆ

Suddi Udaya

ಮಚ್ಚಿನ ಸರಕಾರಿ ಪ್ರೌಢಶಾಲೆಯು ‘ಹಸಿರು ನೈರ್ಮಲ್ಯ ಅಭ್ಯುದಯ ರಾಜ್ಯಮಟ್ಟದ ಶಾಲಾ ಪ್ರಶಸ್ತಿ’ಗೆ ಆಯ್ಕೆ

Suddi Udaya
error: Content is protected !!