September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಗೆ ಹಲವು ಬಹುಮಾನ

ಉಜಿರೆ: ಮಂಗಳೂರಿನ ತಲಪಾಡಿ ಶಾರದಾ ವಿದ್ಯಾಲಯ ಶಾಲೆಯಲ್ಲಿ ನ.21 ರಂದು ಅಂತರ ಶಾಲಾ ಜಿಲ್ಲಾ ಮಟ್ಟದ ಐಕ್ಸ್ (AICS) “ಕ್ರೀಡಾ ಕೂಟ 2025” ಆಯೋಜಿಸಿದ್ದು, ಇಲ್ಲಿ ನಡೆದ ವಿವಿಧ ಸ್ಪರ್ಧೆಯಲ್ಲಿ ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆ, (ಸಿ.ಬಿ.ಎಸ್.ಇ) ಇಲ್ಲಿನ ವಿದ್ಯಾರ್ಥಿಗಳು ಭಾಗವಹಿಸಿ, 17ರ ವಯೋಮಾನದ ಬಾಲಕರ ವಿಭಾಗದಲ್ಲಿ ಉದ್ದ ಜಿಗಿತ ಸ್ಪರ್ಧೆಯಲ್ಲಿ ವಿದ್ಯಾರ್ಥಿ ಸಿಯೋನ್ ದ್ವಿತೀಯ ಸ್ಥಾನ ಹಾಗೂ 400ಮೀ ಓಟ ತೃತೀಯ ಸ್ಥಾನ, ಗುಂಡೆಸೆತ ಸ್ಪರ್ಧೆಯಲ್ಲಿ ವಿದ್ಯಾರ್ಥಿ ಸನ್ವಿತ್ ದ್ವಿತೀಯ ಸ್ಥಾನ, 17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ 400ಮೀ ಓಟ ಸ್ಪರ್ಧೆಯಲ್ಲಿ ವಿದ್ಯಾರ್ಥಿನಿ ನಿಶಾ ತೃತೀಯ ಸ್ಥಾನ ಮತ್ತು 14ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ 600ಮೀ ಓಟ ವಿದ್ಯಾರ್ಥಿನಿ ತೃಷ ತೃತೀಯ ಸ್ಥಾನ, 14ರ ವಯೋಮಾನದ ಬಾಲಕರ ವಿಭಾಗದಲ್ಲಿ ಗುಂಡೆಸೆತ ಸ್ಪರ್ಧೆಯಲ್ಲಿ ವಿದ್ಯಾರ್ಥಿ ಪ್ರಥಮ್ ದ್ವಿತೀಯ ಸ್ಥಾನ ಪಡೆದು ವಿಜೇತರಾಗಿರುತ್ತಾರೆ.

ಶಾಲಾ ದೈಹಿಕ ಶಿಕ್ಷಕರಾದ ಶ್ರೀಮತಿ ರಾಜಮ್ಮ ಹಾಗೂ ಶ್ರೀ ಗಣೇಶ್ ತರಬೇತಿ ನೀಡಿರುತ್ತಾರೆ. ವಿಜೇತರಾದ ವಿದ್ಯಾರ್ಥಿಗಳನ್ನು ಹಾಗೂ ಭಾಗವಹಿಸಿದ ವಿದ್ಯಾರ್ಥಿಗಳನ್ನು ಶಾಲಾ ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದದಿಂದ ಅಭಿನಂದಿಸಲಾಯಿತು.

Related posts

ಪುದುವೆಟ್ಟು ಗ್ರಾ.ಪಂ. ದ್ವಿತೀಯ ಸುತ್ತಿನ ಗ್ರಾಮಸಭೆ

Suddi Udaya

ಕಳಿಯ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ

Suddi Udaya

ಬೆಳ್ತಂಗಡಿ: ಹುಣ್ಸೆಕಟ್ಟೆ ನಿವಾಸಿ ಆಟೋ ಚಾಲಕ ಆನಂದ ಗೌಡ ಹೃದಯಾಘಾತದಿಂದ ನಿಧನ

Suddi Udaya

ಬೆಳ್ತಂಗಡಿ ಪಿ.ಎಂ. ಶ್ರೀ ಸರಕಾರಿ ಮಾ. ಹಿ.ಪ್ರಾ. ಶಾಲೆಯಲ್ಲಿ ವಿದ್ಯಾರ್ಥಿಗಳ ಮೆಟ್ರಿಕ್ ಮೇಳ – ವ್ಯವಹಾರಿಕ ಜ್ಞಾನಕ್ಕೆ ವೇದಿಕೆ

Suddi Udaya

ಉಜಿರೆ ಮಣಿಕೆಯಲ್ಲಿ ಉಜಿರೆ ಮಣಿಕೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆ ಬೆಳ್ತಂಗಡಿ ವಿಧಾನ ಸಭಾ ಅಭ್ಯರ್ಥಿ ರಕ್ಷಿತ್ ಶಿವರಾಂ ಹಾಗೂ ಬ್ಲಾಕ್ ಅಧ್ಯಕ್ಷರುಗಳು ಭಾಗಿ

Suddi Udaya

ಗೇರುಕಟ್ಟೆ : ಪರಪ್ಪು ಜಮಾಅತಿನ ಎರಡು ಬಡ ಕುಟುಂಬಗಳ ಹೆಣ್ಣು ಮಕ್ಕಳ ಮದುವೆಗೆ ಆಡಳಿತ ಸಮಿತಿ, ಕೆ.ಸಿ.ಎಫ್,ಕೆ.ಎಮ್.ಜೆ., ಎಸ್.ವೈ.ಎಸ್, ಎಸ್.ಎಸ್.ಎಫ್ ಹಾಗೂ ಜಮಾಅತರಿಂದ ಸಹಾಯಧನ ಹಸ್ತಾಂತರ

Suddi Udaya
error: Content is protected !!