September 6, 2026
ಅಭಿನಂದನೆಬೆಳ್ತಂಗಡಿವರದಿ

ಜೆಸಿಐ ಕೊಕ್ಕಡ ಕಪಿಲಾ 2026ನೇ ಸಾಲಿನ ನೂತನ ಅಧ್ಯಕ್ಷರಾಗಿ ರಿತೇಶ್ ಎಂ. ಸ್ಟ್ರೆಲ್ಲಾ, ಕಾರ್ಯದರ್ಶಿಯಾಗಿಜೋಯೆಲ್ ಪಿರೇರಾ ಆಯ್ಕೆ

ಕೊಕ್ಕಡ: ಜೆಸಿಐ ಕೊಕ್ಕಡ ಕಪಿಲಾ 2026ನೇ ಸಾಲಿನ ನೂತನ ಅಧ್ಯಕ್ಷರಾಗಿ ರಿತೇಶ್ ಎಂ. ಸ್ಟ್ರೆಲ್ಲಾ , ಕಾರ್ಯದರ್ಶಿಯಾಗಿ ಕೊಕ್ಕಡ ಗ್ರಾಮದ ಮರಿಯಾಕೃಪಾ ನಿವಾಸಿ ಜೋಯೆಲ್ ಪಿರೇರಾ ಆಯ್ಕೆಯಾಗಿರುತ್ತಾರೆ.

ರಿತೇಶ್ ಎಂ. ಸ್ಟ್ರೆಲ್ಲಾ ರವರು ಕಡಬ ತಾಲೂಕು ಕೌಕ್ರಾಡಿ ಗ್ರಾಮದ ಒಡ್ರಲ್ಕೆಯ ನಿವಾಸಿಯಾಗಿದ್ದು ಸಮಾಜ ಸೇವಾ ಕ್ಷೇತ್ರದಲ್ಲಿ ಪದವೀಧರರಾಗಿದ್ದು, ವಿವಿಧೆಡೆಯ ಸಂಘ ಸಂಸ್ಥೆಗಳಲ್ಲಿ ಸೇವೆಯನ್ನು ಸಲ್ಲಿಸಿರುತ್ತಾರೆ. ಪ್ರಸ್ತುತ ಊರಿನಲ್ಲಿ ಪ್ರಗತಿ ಪರ ಕೃಷಿಕರಾಗಿರುತ್ತಾರೆ.ಜೋಯೆಲ್ ಪಿರೇರಾ ರವರು ಸಿವಿಲ್ ಎಂಜಿನಿಯರ್ ಪದವೀಧರರಾಗಿದ್ದು ಬೆಂಗಳೂರಿನ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಾರೆ.

ಇತ್ತೀಚೆಗೆ ಶಿಬರಾಜೆಪಾದೆ ಗ್ರಾಮಾಭ್ಯುದಯಅನುಷ್ಠಾನ ಸಮಿತಿಯ ಕಚೇರಿಯಲ್ಲಿ ಜೆಸಿಐ ಸರ್ವ ಸದಸ್ಯರ ಸಭೆಯಲ್ಲಿ ಎಲ್ಲಾ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ಡಾ. ಶೋಭಾ ಪಿ. ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ನಾಮಿನೇಶನ್ ಕಮಿಟಿಯ ಮುಖ್ಯಸ್ಥರಾದ ನಿಕಟಪೂರ್ವ ಅಧ್ಯಕ್ಷ ಸಂತೋಷ್ ಜೈನ್ ಚುನಾವಣೆಗಳನ್ನು ನಡೆಸಿಕೊಟ್ಟರು. ಕಾರ್ಯದರ್ಶಿ, ಪೂರ್ವ ಅಧ್ಯಕ್ಷರು, ಸದಸ್ಯರು ಭಾಗವಹಿಸಿದರು.

Related posts

ಬಿಎಂಎಸ್ ರಿಕ್ಷಾ ಚಾಲಕ ಮಾಲಕರ ಸಂಘದ ಕ್ಷೇಮ ನಿಧಿಯ 12ನೇ ಸಹಾಯಧನ ಹಸ್ತಾಂತರ

Suddi Udaya

ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್ ಅಕ್ಕ ಕೆಫೆಗೆ ಭೇಟಿ : ಗುಣಮಟ್ಟದ ಊಟಕ್ಕೆ ಮೆಚ್ಚುಗೆ

Suddi Udaya

ಬಡಗಕಾರಂದೂರು ಸ.ಹಿ.ಪ್ರಾ, ಶಾಲೆಯಲ್ಲಿ ಗಿಡ ನಾಟಿ ಕಾರ್ಯಕ್ರಮ

Suddi Udaya

ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ದಿನಕರ ಪೂಜಾರಿ ಕಡ್ತಿಲರಿಗೆ ನುಡಿನಮನ ಕಾರ್ಯಕ್ರಮ

Suddi Udaya

ಬಳಂಜ ಶಾಲೆಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

Suddi Udaya

ಮೊಗ್ರು: ಮುಗೇರಡ್ಕ ದೈವಸ್ಥಾನದ ವತಿಯಿಂದ ಜೈ ಶ್ರೀರಾಮ್ ಫ್ರೆಂಡ್ಸ್ ಕ್ಲಬ್ ಅಲೆಕ್ಕಿ ಶಿಶುಮಂದಿರಕ್ಕೆ ಸ್ಮಾರ್ಟ್ ಎಲ್.ಇ.ಡಿ ಟಿವಿ ಕೊಡುಗೆ

Suddi Udaya
error: Content is protected !!