25.7 C
ಪುತ್ತೂರು, ಬೆಳ್ತಂಗಡಿ
March 7, 2026
ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿ

ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ: ಉಜಿರೆ ಎಸ್ ಡಿ ಎಂ ಆಂಗ್ಲ ಮಾಧ್ಯಮ ರಾಜ್ಯ ಪಠ್ಯಕ್ರಮ ಶಾಲೆಯ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿ

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸೆಕೆಂಡರಿ ಶಾಲೆಯಲ್ಲಿ ನಡೆದ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಉಜಿರೆ ಎಸ್ ಡಿ ಎಂ ಆಂಗ್ಲ ಮಾಧ್ಯಮ ರಾಜ್ಯ ಪಠ್ಯಕ್ರಮ ಶಾಲೆಯ ವಿದ್ಯಾರ್ಥಿಗಳು ಹಲವು ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿದ್ದಾರೆ.

ಪ್ರತಿಭಾ ಕಾರಂಜಿ – 2025-26 ಸ್ಪರ್ಧೆಯಲ್ಲಿ ವಿವಿಧ ವಿಭಾಗಗಳಲ್ಲಿ ತಮ್ಮ ಅತ್ಯುತ್ತಮ ಪ್ರತಿಭೆಯನ್ನು ಪ್ರದರ್ಶಿಸಿ ಸಾಧನೆ ಮಾಡಿದ್ದಾರೆ.

ಕಿರಿಯ ಪ್ರಾಥಮಿಕ ವಿಭಾಗ ಧಾರ್ಮಿಕ ಪಠಣ – ಧ್ರುವ (ಪ್ರಥಮ ಸ್ಥಾನ), ಚಿತ್ರಕಲೆ – ನಿಹಾಲ್ ಆಚಾರ್ಯ (ಪ್ರಥಮ ಸ್ಥಾನ), ದೇಶಭಕ್ತಿ ಗೀತೆ – ಚಾರ್ವಿ (ತೃತೀಯ ಸ್ಥಾನ), ಪಿಕ್ ಅಂಡ್ ಸ್ಪೀಚ್ – ಸಾನ್ವಿ (ತೃತೀಯ ಸ್ಥಾನ), ಇಂಗ್ಲಿಷ್ ಕಂಠಪಾಠ– ಶಮಂತ್ (ತೃತೀಯ ಸ್ಥಾನ),

ಹಿರಿಯ ಪ್ರಾಥಮಿಕ ವಿಭಾಗ ಧಾರ್ಮಿಕ ಪಠಣ (ಸಂಸ್ಕೃತ)– ಅದ್ವಿತಿ ರಾವ್ (ಪ್ರಥಮ ಸ್ಥಾನ), ಇಂಗ್ಲಿಷ್ ಕಂಠಪಾಠ – ವೇದಾಂಶ್ ಚಂದ್ರ ವರ್ಮಾ (ಪ್ರಥಮ ಸ್ಥಾನ), ಭಕ್ತಿಗೀತೆ – ಅಕ್ಷರ್ (ಪ್ರಥಮ ಸ್ಥಾನ), ಚಿತ್ರಕಲೆ – ತನುಷ್ (ಪ್ರಥಮ ಸ್ಥಾನ), ಅಭಿನಯ ಗೀತೆ – ಸಾನ್ವಿ ಎಂ.ಕೆ (ದ್ವಿತೀಯ ಸ್ಥಾನ) , ಪಿಕ್ ಅಂಡ್ ಸ್ಪೀಚ್ – ಅದಿತಿ (ದ್ವಿತೀಯ ಸ್ಥಾನ), ದೇಶಭಕ್ತಿ ಗೀತೆ – ನಿಶಿಕಾ (ದ್ವಿತೀಯ ಸ್ಥಾನ), ಹಿಂದಿ ಕಂಠಪಾಠ– ಅಚಲಾ (ತೃತೀಯ ಸ್ಥಾನ), ಅರೇಬಿಕ್ ಪಠಣ – ಸುಜಾ (ತೃತೀಯ ಸ್ಥಾನ)ಮಣ್ಣಿನ ಮಾಡೆಲ್ – ಕವಿನ್ (ತೃತೀಯ ಸ್ಥಾನ),

ಪ್ರೌಢ ವಿಭಾಗ ಕವ್ವಾಲಿ – ಕವನ ಮತ್ತು ತಂಡ (ಪ್ರಥಮ ಸ್ಥಾನ), ಜನಪದ ನೃತ್ಯ– ಅನ್ವಿತಾ ಮತ್ತು ತಂಡ (ದ್ವಿತೀಯ ಸ್ಥಾನ), ಧಾರ್ಮಿಕ ಪಠಣ (ಸಂಸ್ಕೃತ) – ರವೀಶ್ (ದ್ವಿತೀಯ ಸ್ಥಾನ), ಧಾರ್ಮಿಕ ಪಠಣ (ಅರೇಬಿಕ್) – ಹಲೀಮತ್ ಫಹೀಜಾ (ದ್ವಿತೀಯ ಸ್ಥಾನ), ಸಂಸ್ಕೃತ ಭಾಷಣ – ತನ್ಮಯ ಕೃಷ್ಣ (ದ್ವಿತೀಯ ಸ್ಥಾನ), ಕವನ ವಾಚನ – ಬಿ.ತಸ್ಮಯ್ (ತೃತೀಯ ಸ್ಥಾನ), ಕನ್ನಡ ಭಾಷಣ – ದಿಶಾನ್ (ತೃತೀಯ ಸ್ಥಾನ)

ಕಿರಿಯ ಪ್ರಾಥಮಿಕ ವಿಭಾಗದ 2 ವಿದ್ಯಾರ್ಥಿಗಳು, ಹಿರಿಯ ಪ್ರಾಥಮಿಕ ವಿಭಾಗದ 4 ವಿದ್ಯಾರ್ಥಿಗಳು ಹಾಗೂ ಪ್ರೌಢ ಶಾಲೆಯ 3 ವಿದ್ಯಾರ್ಥಿಗಳು, ಕವ್ವಾಲಿ ತಂಡದ 6 ವಿದ್ಯಾರ್ಥಿಗಳು ಹಾಗೂ ಜಾನಪದ ನೃತ್ಯದ 9 ವಿದ್ಯಾರ್ಥಿಗಳು
ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

Related posts

ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣ: ಆದೇಶ ಕಾಯ್ದಿರಿಸಿದ ಹೈಕೋರ್ಟ್‌

Suddi Udaya

ಚೆಸ್ ಪಂದ್ಯಾಟ: ವೈಬ್ರೆಂಟ್ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya

ಉಜಿರೆ ಎಸ್‌.ಡಿ.ಎಂ ಸಿ.ಬಿ.ಎಸ್.ಇ ಶಾಲೆಯ ಶಿಕ್ಷಕರಿಗೆ “ಆಕ್ಸ್ಫರ್ಡ್ ಅಡ್ವಾಂಟೇಜ್ ಪೆಡಗೋಜಿ” ಕಾರ್ಯಾಗಾರ

Suddi Udaya

ಶಿರ್ಲಾಲು ಗ್ರಾ.ಪಂ ನೂತನ ಅಧ್ಯಕ್ಷರಾಗಿ ಉಷಾ ಎಂ ಶೆಟ್ಟಿ, ಉಪಾಧ್ಯಕ್ಷರಾಗಿ ಸೋಮನಾಥ ಬಂಗೇರ ಅವಿರೋಧವಾಗಿ ಆಯ್ಕೆ

Suddi Udaya

ಸ್ವಚ್ಛ ಸರ್ವೇಕ್ಷಣ ಗ್ರಾಮೀಣ ಸಮೀಕ್ಷೆ: ಕಾಶಿಪಟ್ಣ ಗ್ರಾಮ ಪಂಚಾಯತು ರಾಜ್ಯ ಮಟ್ಟಕ್ಕೆ ಆಯ್ಕೆ

Suddi Udaya

ರಾಜ್ಯ ಸರಕಾರಿ ನೌಕರರ ಸಂಘದ ಚುನಾವಣೆ: ಅಧ್ಯಕ್ಷರಾಗಿ ಜಯರಾಜ ಜೈನ್, ಖಜಾಂಚಿಯಾಗಿ ನಾರಾಯಣ ಶೆಟ್ಟಿ, ರಾಜ್ಯ ಪರಿಷತ್‌ ಸದಸ್ಯರಾಗಿ ಪ್ರದೀಪ್ ಕುಮಾರ್ ಆಯ್ಕೆ

Suddi Udaya
error: Content is protected !!