September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಹುಟ್ಟು ಹಬ್ಬದ ಪ್ರಯುಕ್ತ ಉಜಿರೆ ವಿದ್ಯುತ್ ಕಂಬಗಳ ಸ್ವಚ್ಚತಾ ಶ್ರಮದಾನ

ಬೆಳ್ತಂಗಡಿ: ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಹುಟ್ಟು ಹಬ್ಬದ ಪ್ರಯುಕ್ತ ರಾಜ್ಯದಾದ್ಯಂತ ನ.25 ರಂದು ವಿವಿಧ ರೀತಿಯ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದು ಇಂದು ಉಜಿರೆ ಮುಖ್ಯ ರಸ್ತೆಯಲ್ಲಿರುವ ವಿದ್ಯುತ್ ಕಂಬಗಳ ಸ್ವಚ್ಚತಾ ಶ್ರಮದಾನಕ್ಕೆ ಚಾಲನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರಾದ ಅನಿಲ್ ಕುಮಾರ್ ಎಸ್.ಎಸ್ ರವರು ನೀಡಿದರು.

ಉಜಿರೆ ಗ್ರಾಮ ಪಂಚಾಯತಿ, ವಿದ್ಯುತ್ ಪ್ರಸರಣ ನಿಗಮ, ಸ್ಥಳೀಯರ‌ ಸಹಕಾರ ದಲ್ಲಿ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಕಂಬಗಳ ಸ್ವಚ್ಚತೆ ನಡೆಸಿದರು.

ಕಳೆದ ಎರಡು ವರ್ಷಗಳ ಹಿಂದೆ ಅಳವಡಿಸಿದ್ದ 160 ಕಂಬಗಳು ಮಳೆಯ ನೀರಿನಿಂದ ಪಾಚಿಗಟ್ಟಿದ್ದು ಕಪ್ಪಾಗಿದ್ದವು. ಇದನ್ನು ಶುಚಿಗೊಳಿಸಬೇಕೆಂದು ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರಾದ ಅನಿಲ್ ಕುಮಾರ್ ರವರು ಶೌರ್ಯ ತಂಡಕ್ಕೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸ್ವಚ್ಚತಾ ಶ್ರಮದಾನ ನಡೆಸಿದರು.

ನೀರು ಸಿಂಪಡಣೆ ಮಾಡಿ ಸೋಪ್ ಆಯಿಲ್ ಬಳಸಿ, ಕ್ರೇನ್ ಬಳಕೆ ಮಾಡಿಕೊಂಡು ಎತ್ತರದ ಕಂಬಗಳ ಸ್ವಚ್ಚತೆ ಮಾಡಲಾಯಿತು.

ಜನಜಾಗೃತಿ ಪ್ರಾದೇಶಿಕ ನಿರ್ದೇಶಕ ರಾದ ವಿವೇಕ್ ವಿ. ಪಾಯ್ಸ ರವರು ಉಪಸ್ಥಿತರಿದ್ದು ರಾಜ್ಯದ 91 ತಾಲ್ಲೂಕು ಗಳಲ್ಲಿ ಶೌರ್ಯ ತಂಡದಿಂದ ದೇವಸ್ಥಾನ ಸ್ವಚ್ಚತೆ, ಬಡ ಕುಟುಂಬದ ಮನೆ ರಿಪೇರಿ, ರಸ್ತೆ ರಿಪೇರಿ ಮುಂತಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಪೂಜ್ಯರ ಹುಟ್ಟು ಹಬ್ಬದ ಪ್ರಯುಕ್ತ ಕಳೆದ 5 ವರ್ಷಗಳಿಂದ ಈ ರೀತಿಯ ಚಟುವಟಿಕೆಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ ಎಂದರು.

ವಿಪತ್ತು ನಿರ್ವಹಣಾ ಕಾರ್ಯಕ್ರಮದ ಯೋಜನಾಧಿಕಾರಿ ಜೈವಂತ ಪಟಗಾರ, ಕಿಶೋರ್ ಕುಮಾರ್, ಮಾಧವ ಗೌಡ, ಬೆಳ್ತಂಗಡಿ ತಾಲೂಕಿನ ಯೋಜನಾಧಿಕಾರಿ ಯಶೋಧರ ಉಪಸ್ಥಿತರಿದ್ದರು. ಸಂಯೋಜಕರಾದ ವಸಂತಿ, ಪ್ರೇಮಲತಾ, ಪ್ರಮೀಳಾ ಸಹಕಾರ ನೀಡಿದರು.

ಸ್ವಯಂಸೇವಕರಾದ ರವೀಂದ್ರ, ಉಜಿರೆ, ಸಂತೋಷ ಗೌಡ, ಉಜಿರೆ, ಸಂತೋಷ ಬೆಳಾಲು, ಅವಿನಾಶ್, ಅರಸಿನಮಕ್ಕಿ, ರಮೇಶ್, ಶಿಶಿಲ, ಸಂದೇಶ್, ಉಜಿರೆ, ರಾಘವೇಂದ್ರ, ಉಜಿರೆ, ಸುಧೀರ್ ಉಜಿರೆ, ಅನಿಲ್ ಉಜಿರೆ, ಸಚಿನ್ ಬಿಡೆ ಉಜಿರೆ, ಹರೀಶ್ ನಡ ಕನ್ಯಾಡಿ, ಮಂಜುನಾಥ ನಡ ಕನ್ಯಾಡಿ, ಒಲ್ವಿನ್, ನಡ ಕನ್ಯಾಡಿ, ಜಯರಾಮ ನಡ ಕನ್ಯಾಡಿ, ಅರ್ವಿನ್ ನಡ ಕನ್ಯಾಡಿ, ಸುರೇಶ್ ನಡ ಕನ್ಯಾಡಿ, ಸತೀಶ್ ನೆರಿಯ, ಲೋಕೇಶ್ ಮುಂಡಾಜೆ, ಸುರೇಶ ಮುಂಡಾಜೆ, ರವೀಂದ್ರ ಮುಂಡಾಜೆ, ವಿಶ್ವನಾಥ ಮುಂಡಾಜೆ, ರಾಜೇಶ್ ಮುಂಡಾಜೆ, ಮಂಜುನಾಥ ಉಜಿರೆ, ರತ್ನಾಕರ್ ಉಜಿರೆ ಭಾಗವಹಿಸಿದರು.

    Related posts

    ಕಲ್ಮಂಜ ಗ್ರಾಮ ಪಂಚಾಯತ್ ಕಾರ್ಯದರ್ಶಿ ಸರೋಜಿನಿ ರವರಿಗೆ ಬೀಳ್ಕೊಡುಗೆ ಸಮಾರಂಭ

    Suddi Udaya

    ಮಹಿಳೆಯ ಮೊಬೈಲನ್ನು ಕದ್ದು, ಫೋನ್ ಪೇ ಮೂಲಕ ಹಣ ವಂಚನೆ: ತನ್ನ ಸ್ನೇಹಿತರಿಗೆ ಹಣ ಕಳುಸಿದ್ದ ಆರೋಪಿ ವಿರುದ್ಧ ಕೇಸ್ ದಾಖಲು

    Suddi Udaya

    ಕೊಯ್ಯೂರು ಸ.ಹಿ.ಪ್ರಾ. ಶಾಲಾ ಅಮೃತ ಮಹೋತ್ಸವ; ಧ್ವಜಾರೋಹಣ-ಗ್ರಂಥಾಲಯ ಉದ್ಘಾಟನೆ- ಸಭಾ ಕಾರ್ಯಕ್ರಮ

    Suddi Udaya

    ಶಿಬಾಜೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದ್ವಿತೀಯ ಹಂತದ ಕಾಮಗಾರಿಗೆ ಚಾಲನೆ

    Suddi Udaya

    ಹೊಸಂಗಡಿ ಗ್ರಾ.ಪಂ ನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ

    Suddi Udaya

    ಪುಂಜಾಲಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ವಾರ್ಷಿಕ ವಿಶೇಷ ಶಿಬಿರ

    Suddi Udaya
    error: Content is protected !!