ತಾಲೂಕು ಸುದ್ದಿಪೊಲೀಸ್ಬೆಳ್ತಂಗಡಿರಾಜ್ಯ ಸುದ್ದಿವರದಿ

ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಪತ್ತೆಯಾದ ಬಂದೂಕು ಪ್ರಕರಣ ಮಧ್ಯಂತರ ತಡೆ ಮುಂದೂಡಿದ ಹೈಕೋರ್ಟ್

ಬೆಳ್ತಂಗಡಿ : ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಎಸ್.ಐ.ಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದ ಅಕ್ರಮ ಬಂದೂಕು ಪ್ರಕರಣ ಹೈಕೋರ್ಟ್ ನಲ್ಲಿ ‌ನ.24 ರಂದು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಮುಂದಿನ ಎರಡು ವಾರಗಳ ಕಾಲ ಮಧ್ಯಂತರ ತಡೆ ಮುಂದೂಡಿದೆ.

ಬುರುಡೆ ಪ್ರಕರಣದ ಸಂಬಂಧ ಉಜಿರೆ ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ಎಸ್.ಐ.ಟಿ ಅಧಿಕಾರಿಗಳು ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದು ಅಗಸ್ಟ್ 26 ರಂದು ಶೋಧ ನಡೆಸಿದಾಗ ಎರಡು ತಲವಾರು ಮತ್ತು ಒಂದು ಬಂದೂಕು ಸೇರಿ ಒಟ್ಟು 44 ವಸ್ತುಗಳನ್ನು ವಶಪಡಿಸಿಕೊಂಡಿದ್ದರು. ಬಳಿಕ ಎಸ್.ಐ.ಟಿ ಎಸ್ಪಿ ಸಿ.ಎ.ಸೈಮನ್ ಸೆಪ್ಟೆಂಬರ್‌ 16 ರಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅರ್ಮ್ಸ್ ಆಕ್ಟ್ ಅಡಿಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಎಸ್.ಐ.ಟಿ ಅಧಿಕಾರಿಗಳು ಎರಡು ತಲವಾರು ಮತ್ತು ಒಂದು ಬಂದೂಕು ಬೆಳ್ತಂಗಡಿ ಪೊಲೀಸರ ವಶಕ್ಕೆ ನೀಡಿದು ವಿಚಾರಣೆಗೆ ಹಾಜರಾಗಲು ನೋಟಿಸ್ ಜಾರಿ ಮಾಡಿದ್ದರು. ಬಳಿಕ ತಿಮರೋಡಿ ತಲೆಮರೆಸಿಕೊಂಡು ವಕೀಲರ ಮೂಲಕ ಜಿಲ್ಲಾ ಕೋರ್ಟ್ ನಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯನ್ನು ವಜಾ ಮಾಡಿತ್ತು.

ಈ ಬಗ್ಗೆ ಹೈಕೋರ್ಟ್ ಗೆ ತಿಮರೋಡಿ ಅರ್ಜಿ ಸಲ್ಲಿಸಿದ್ದು. ಈ ಅರ್ಜಿಗೆ ಹೈಕೋರ್ಟ್ ಪ್ರಕರಣ ತನಿಖೆ ತಡೆ ಕೋರಿತ್ತು. ನ.24 ರಂದು ಹೈಕೋರ್ಟ್ ಆಕ್ಷೇಪಣೆ ಸಲ್ಲಿಸಲು ಮತ್ತು ಮಧ್ಯಂತರ ತಡೆಯಾಜ್ಞೆ ತೆರವು ಅರ್ಜಿ ಸಲ್ಲಿಸಲು ಸಮಯಾವಕಾಶ ಸರಕಾರಿ ವಕೀಲರು ಕೋರಿದ್ದು ಅದರಂತೆ ನ್ಯಾಯಾಲಯ ಎರಡು ವಾರಗಳ ಕಾಲಾವಕಾಶ ನೀಡಿದ್ದು ಅಲ್ಲಿಯವರೆಗೆ ಮಧ್ಯಂತರ ತಡೆ ಮುಂದುವರಿಕೆ‌.

Related posts

ಲಾಯಿಲ: ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದ ವತಿಯಿಂದ ಸಾರ್ವಜನಿಕ ಸತ್ಯನಾರಾಯಣ ಪೂಜೆ

Suddi Udaya

ಗ್ಯಾರಂಟಿ ಫಲಾನುಭವಿಗಳ ಸಮಾವೇಶದ ಖರ್ಚಿನ ಬಿಲ್‌ಗಳಲ್ಲಿ ಅವ್ಯವಹಾರ: ಪತ್ರಿಕಾಗೋಷ್ಠಿಯಲ್ಲಿ ಸಾಮಾಜಿಕ ಹೋರಾಟಗಾರ ಮಂಜುನಾಥ್ ಸಾಲ್ಯಾನ್ ಆರೋಪ

Suddi Udaya

ಆನೆ ದಾಳಿಯಿಂದ ಮೃತಪಟ್ಟ ಬಾಲಕೃಷ್ಣ ಶೆಟ್ಟಿಯವರ ಮನೆಗೆ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ ಭೇಟಿ

Suddi Udaya

ಬೆಳ್ತಂಗಡಿ ‘ಶಾಂತಿಶ್ರೀ’ ಜೈನ ಮಹಿಳಾ ಸಮಾಜದಿಂದ ಮಹಿಳಾ ದಿನಾಚರಣೆ

Suddi Udaya

ಮುಂಡೂರು ದುರ್ಗಾನಗರ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ

Suddi Udaya

ಗುರಿಪಳ್ಳ: ವಿದ್ಯುತ್ ಶಾಕ್ ಹೊಡೆದು ವ್ಯಕ್ತಿ ಸಾವು

Suddi Udaya
error: Content is protected !!