ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಸರಕಾರಿ ಜಾಗದಲ್ಲಿ ಅಕ್ರಮವಾಗಿ ಮರ ಕಡಿದು ದಾಸ್ತಾನು: ಅರಣ್ಯ ಸಂಚಾರಿ ದಳದಿಂದ ದಾಳಿ

ಬೆಳ್ತಂಗಡಿ : ಅಕ್ರಮವಾಗಿ ಯಾವುದೇ ಅನುಮತಿ ಪಡೆಯದೆ ಸರಕಾರಿ ಜಾಗದಲ್ಲಿ ಮರಗಳನ್ನು ಕಡಿದು ದಾಸ್ತಾನು ಮಾಡಿರುವ ಬಗ್ಗೆ ಮಂಗಳೂರು ಅರಣ್ಯ ಸಂಚಾರಿ ದಳದ ಅಧಿಕಾರಿಗಳಿಗೆ ಬಂದ ಮಾಹಿತಿ ಮೇರೆಗೆ ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಂದಾರು ಗ್ರಾಮದ ಪುನರಡ್ಕ ಎಂಬಲ್ಲಿ ಸರಕಾರಿ ಜಾಗದಲ್ಲಿ ಅಕ್ರಮವಾಗಿ ಹಲಸು ಮತ್ತು ಸಾಗುವಾನಿ ಮರಗಳನ್ನು ಕಡಿದು 14 ದಿಮ್ಮಿ ಮತ್ತು ಕಟ್ಟಿಗೆಯನ್ನಾಗಿ ಪರಿವರ್ತಿಸಿ ದಾಸ್ತಾನು ಮಾಡಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಮಂಗಳೂರು ಸಂಚಾರಿ ಅರಣ್ಯ ದಳದ ಅಧಿಕಾರಿಗಳು ನ.21 ರಂದು ದಾಳಿ ಮಾಡಿ ಪತ್ತೆ ಹಚ್ಚಿ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣದ ಆರೋಪಿ ಕೊಯ್ಯೂರು ಗ್ರಾಮದ ಗುರ್ಬೊಟ್ಟು ನಿವಾಸಿ ದೂಜ ಎಂಬವರ ಮಗ ಪ್ರವೀಣ್ ವಿರುದ್ಧ ಮಂಗಳೂರು ಅರಣ್ಯ ಸಂಚಾರಿ ದಳದ ವಲಯ ಅರಣ್ಯ ಅಧಿಕಾರಿ ಬೆಳ್ತಂಗಡಿ ನ್ಯಾಯಾಲಯದ ಅನುಮತಿ ಪಡೆದುಕೊಂಡು ಪ್ರಕರಣ ದಾಖಲಾಯಿಸಿಕೊಂಡಿದ್ದಾರೆ.

ಮಂಗಳೂರು ಸಂಚಾರಿ ಅರಣ್ಯ ದಳದ ವಲಯ ಅರಣ್ಯ ಅಧಿಕಾರಿ ಸಂತೋಷ್, ಉಪ ವಲಯ ಅರಣ್ಯ ಅಧಿಕಾರಿ ಪ್ರಶಾಂತ್,ಉಪ ವಲಯ ಅರಣ್ಯ ಅಧಿಕಾರಿ ಶಿವಾನಂದ ಸದೇಪ ಮಾದರ,ಉಪ ವಲಯ ಅರಣ್ಯ ಅಧಿಕಾರಿ ಸೋಮನಾಥ್, ವಾಹನ ಚಾಲಕ ಜಯಪ್ರಕಾಶ್ ಕೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

Related posts

ಗುರುವಾಯನಕೆರೆ: ಶ್ರೀ ದುರ್ಗಾ ಬ್ಯಾಟರಿ ಸೋಲಾರ್, ಆಟೋ ಎಲೆಕ್ಟ್ರಿಕಲ್ ವರ್ಕ್ಸ್ ಶುಭಾರಂಭ

Suddi Udaya

ಬೆಳಾಲು : ನಿವೃತ್ತ ಶಿಕ್ಷಕ ಬಾಲಕೃಷ್ಣ ಭಟ್ ಕೊಲೆ ಪ್ರಕರಣ: ಆರೋಪಿಗಳ ಮನೆಯಿಂದ ಬೈಕ್, ಬಟ್ಟೆ ಕತ್ತಿ ವಶಕ್ಕೆ

Suddi Udaya

ಪೆರ್ಲ ಬೈಪಾಡಿ ಸ.ಪ್ರೌ. ಶಾಲೆ ಯಕ್ಷಗಾನ ನಾಟ್ಯ ತರಗತಿ ಉದ್ಘಾಟನೆ

Suddi Udaya

ಬೆಳ್ತಂಗಡಿ: ಸ.ಪ್ರ. ದರ್ಜೆ ಕಾಲೇಜಿನಲ್ಲಿ ಮತದಾರರ ಜಾಗೃತಿ ಅರಿವು ಕಾರ್ಯಕ್ರಮ

Suddi Udaya

ಕಡಿತಗೊಂಡಿದ್ದ ಅಂಬಡಬೆಟ್ಟು ತಾತ್ಕಾಲಿಕ ರಸ್ತೆಗೆ ಶಾಸಕ ಹರೀಶ್ ಪೂಂಜರ ಸ್ಪಂದನೆ

Suddi Udaya

ಕಲ್ಮಂಜ ದ.ಕ.ಜಿ.ಪಂ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶತ ಸಂಭ್ರಮ: ಜ್ಞಾನದೀಪ ಸಭಾಂಗಣ ಲೋಕಾರ್ಪಣೆ

Suddi Udaya
error: Content is protected !!