37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬಳಂಜ ಶಾಲಾ ಕ್ರೀಡಾಂಗಣ ನವೀಕರಣ, ಎಲ್.ಕೆ.ಜಿ, ಯು.ಕೆ.ಜಿ, ರಂಗ ಮಂದಿರ ನಿರ್ಮಾಣ, ಶಾಲಾ ಕೊಠಡಿ ನವೀಕರಣ ಕಾಮಗಾರಿಗೆ ಶಿಲಾನ್ಯಾಸ

ಬಳಂಜ:ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಬಳಂಜ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಹಳೆ ವಿದ್ಯಾರ್ಥಿ ಸಂಘ,ಬಳಂಜ ಶಿಕ್ಷಣ ಟ್ರಸ್ಟ್ ಬಳಂಜ, ಅಮೃತ ಮಹೋತ್ಸವ ಸಮಿತಿ ಬಳಂಜ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್, ಗ್ರಾಮ ಪಂಚಾಯತ್ ಬಳಂಜ, ಶಿವಾಜಿ ಫ್ರೆಂಡ್ಸ್ ಕ್ಲಬ್ ನೇತಾಜಿ ನಗರ ಬಳಂಜ ಇವರ ಸಹಕಾರದೊಂದಿಗೆ ಬಳಂಜ ಶಾಲಾ ಕ್ರೀಡಾಂಗಣ ನವೀಕರಣ, ಬಯಲು ರಂಗ ಮಂದಿರ ನಿರ್ಮಾಣ ಮತ್ತು ಎಲ್.ಕೆ.ಜಿ., ಯು.ಕೆ.ಜಿ. ಶಾಲಾ ಕೊಠಡಿ ನವೀಕರಣ ಕಾಮಗಾರಿಗೆ ಶಿಲಾನ್ಯಾಸ ಕಾರ್ಯಕ್ರಮವು ನ. 24 ರಂದು ನಡೆಯಿತು.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಶಿಲಾನ್ಯಾಸ ನೆರವೇರಿಸಿ ಮಾತನಾಡಿ ಊರಿನ ಶಾಲೆ ಮತ್ತು ದೇವಸ್ಥಾನ ಜೀರ್ಣೋದ್ಧಾರಗೊಂಡು ಅಭಿವೃದ್ಧಿಯಾದಾಗ ಆ ಊರು ಸುಭಿಕ್ಷೆಯಾಗುತ್ತದೆ ಎಂಬ ನಂಬಿಕೆ ನಮ್ಮದು. ಹಾಗಾಗಿ ಬಳಂಜ‌ ಶಾಲೆ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯದಾನ ನೀಡಿದ ಪುಣ್ಯಕ್ಷೇತ್ರವಿದು. ಈ ಶಾಲೆಯ ಹಲವು ಕಾಮಗಾರಿಗಳಿಗೆ ಅನುದಾನ ನೀಡಿದ್ದೇನೆ. ಹೆಚ್ಚುವರಿಯಾಗಿ ರಂಗಮಂದಿರದ ಪ್ರಗತಿಯ ಕೆಲಸಕ್ಕೆ ರೂ 5ಲಕ್ಷ ನೀಡುವುದಾಗಿ ಭರವಸೆ ನೀಡಿದರು.

ಬಳಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶೋಭ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಪ್ರೌಢಶಾಲಾ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕೆ. ವಸಂತ ಸಾಲಿಯಾನ್ ಕಾಪಿನಡ್ಕ,ಬಳಂಜ‌ ಶಾಲಾ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಮನೋಹರ್ ಬಳಂಜ,ಶ್ರೀ.ಕ್ಷೇ.ಧ.ಗ್ರಾ.ಯೋಜನೆಯೋಜನಾಧಿಕಾರಿ ಅಶೋಕ್,ಅಳದಂಗಡಿ ಸೊಸೈಟಿ ಅಧ್ಯಕ್ಷ,ಶಿಕ್ಷಣ ಟ್ರಸ್ಟ್‌ ಸದಸ್ಯ ರಾಕೇಶ್ ಹೆಗ್ಡೆ,ಶಿವಾಜಿ ಫ್ರೆಂಡ್ಸ್ ಕ್ಲಬ್ ನೇತಾಜಿ ನಗರ ಇದರ ಮಾಜಿ ಅಧ್ಯಕ್ಷ ಜಗದೀಶ್ ರೈ ಹಾನಿಂಜ,ಬಳಂಜ ಶಾಲಾ ಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ರತ್ನರಾಜ್ ಜೈನ್, ಶಿಕ್ಷಣ ಟ್ರಸ್ಟ್ ಸದಸ್ಯರಾದ ಸಂತೋಷ್ ಕುಮಾರ್ ಕಾಪಿನಡ್ಕ,ಪ್ರಮೋದ್ ಕುಮಾರ್ ಜೈನ್, ಬಳಂಜ ಶಾಲಾ ಹಳೆ ವಿದ್ಯಾರ್ಥಿ ಸಂಘದ ನಿಕಟಪೂರ್ವಾಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ಬಳಂಜ, ಬಳಂಜ ಶಾಲಾ ಮುಖ್ಯೋಪಾಧ್ಯಾಯರಾದ ರಂಗಸ್ವಾಮಿ, ಶ್ರೀ ಉಮಾಮಹೇಶ್ವರ ಯುವಕ ಮಂಡಲದ ಅಧ್ಯಕ್ಷ ಸುಕೇಶ್ ಕುಮಾರ್ ಹಾನಿಂಜ, ಬಳಂಜ ಗ್ರಾ.ಪಂ ಸದಸ್ಯರಾದ ರವೀಂದ್ರ ಬಿ ಅಮೀನ್, ಯಕ್ಷಿತಾ ದೇವಾಡಿಗ, ಯೋಜನೆಯ ಕೃಷಿ ವಿಭಾಗದ ಯೋಜನಾಧಿಕಾರಿ ಸಂತೋಷ್ ಹಾಕೋಟೆ, ಪ್ರಮುಖರಾದ ಗಣೇಶ್ ದೇವಾಡಿಗ ಸಂಭ್ರಮ,ಯತೀಶ್ ಕಪ್ರಾಜೆ ಸಿದ್ದವನ, ಯತೀಶ್ ದೇವಾಡಿಗ,ನಿತ್ಯಾನಂದ ಹೆಗ್ಡೆ,ಅಶೋಕ್ ತೋಟದಪಲ್ಕೆ ಹಳೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು, ಯೋಜನೆಯ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಶಾಲಾ ಶಿಕ್ಷಕ ಕಿರಣ್ ಕುಮಾರ್ ಸ್ವಾಗತಿಸಿದರು. ಬಳಂಜ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸುಲೋಚನಾ ವಂದಿಸಿದರು.

Related posts

“ಪುಣ್ಯ ಕೋಟಿಗೆ ಒಂದು ಕೋಟಿ” ವಿಶೇಷ ಪರಿಕಲ್ಪನೆಯಲ್ಲಿ ನಡೆಯಲಿದೆ ನಂದಗೋಕುಲ ದೀಪೋತ್ಸವ

Suddi Udaya

ಶ್ರದ್ಧಾಕೇಂದ್ರಗಳಲ್ಲಿ “ದೇವವೃಕ್ಷ” ನೆಡುವ ಅಭಿಯಾನಕ್ಕೆ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಂದ ಚಾಲನೆ

Suddi Udaya

ಅಂತರ್ ಕಾಲೇಜು ಚದುರಂಗ ಸ್ಪರ್ಧೆ: ಎಸ್ ಡಿಎಂ ಕಾಲೇಜಿನ ಪುರುಷರ ತಂಡ ಚಾಂಪಿಯನ್

Suddi Udaya

ಏ.23-24: ನಾಗ-ರಕ್ತೇಶ್ವರಿ, ಪಿಲಿಚಾಮುಂಡಿ, ಕಲ್ಕುಡ, ಕಲ್ಲುರ್ಟಿ, ಕಾಳಮ್ಮ, ಮಹಮ್ಮಾಯಿ-ಬೈರವ ಶಕ್ತಿಗಳ ಪ್ರತಿಷ್ಠಾ ಮಹೋತ್ಸವ ಮತ್ತು ನೇಮೋತ್ಸವ

Suddi Udaya

ಕಾಂಗ್ರೆಸ್ ಚುನಾವಣಾ ಪೂರ್ವ ತಯಾರಿ ಮತ್ತು ಕಾರ್ಯಕರ್ತರ ಸಭೆ

Suddi Udaya

ಯಕ್ಷಧ್ರುವ ಪಟ್ಲ ಘಟಕ ಬೆಳ್ತಂಗಡಿ ವತಿಯಿಂದ ಯಕ್ಷಸಂಭ್ರಮ ಉದ್ಘಾಟನೆ: ನಾಲ್ವರು ಯಕ್ಷಗಾನ ತರಬೇತಿ ಗುರುಗಳಿಗೆ ಗೌರವಾರ್ಪಣೆ: 8 ಶಾಲೆಗಳು 480 ಯಕ್ಷ ವಿದ್ಯಾರ್ಥಿಗಳಿಂದ ಯಕ್ಷಗಾನ ರಂಗಪ್ರವೇಶ

Suddi Udaya
error: Content is protected !!