32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ರೂ. 7 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಯಾತ್ರಿ ನಿವಾಸಕ್ಕೆ ಶಿಲಾನ್ಯಾಸ

ಬೆಳ್ತಂಗಡಿ: ಶ್ರದ್ಧಾ ಕೇಂದ್ರಗಳು ಸಂರಕ್ಷಣೆ, ಸದ್ಭಾವನೆ, ಸೇವೆಯ ಪ್ರತೀಕ. ಧರ್ಮ ರಕ್ಷಣೆ ಮಾಡುವವನನ್ನು ಧರ್ಮವೇ ರಕ್ಷಿಸುತ್ತದೆ. ಬ್ರಹ್ಮಶ್ರೀ ನಾರಾಯಣ ಗುರುಗಳು ಪ್ರತಿಪಾದಿಸಿದ ಸಮಾನತೆ, ಸಂಸ್ಕಾರದ ಪರಂಪರೆ ಮುಂದಿನ ಜನಾಂಗಕ್ಕೂ ದಾಟಬೇಕು. ಆ ಕಾರ್ಯಕ್ಕೆ ಶ್ರದ್ಧಾಕೇಂದ್ರಗಳು ಪೂರಕವಾಗಿರಬೇಕು ಎಂದು ಕೇಂದ್ರ ವಿದ್ಯುತ್ ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ಇಲಾಖೆ ರಾಜ್ಯ ಸಚಿವ ಶ್ರೀಪಾದ ನಾಯ್ಕ ಹೇಳಿದರು.

ಅದಿ ಧೂಮಾವತಿ ಕ್ಷೇತ್ರ, ಸಾಯನ ಬೈದ್ಯರ ಗುರುಪೀಠ, ದೇಯಿ ಬೈದೈತಿ-ಕೋಟಿ ಚೆನ್ನಯ ಮೂಲ ಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ 7 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ‘ಯಾತ್ರಿ ನಿವಾಸದ ಶಿಲಾನ್ಯಾಸ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು. ಬೇರೆ ಬೇರೆ ಆಚರಣೆ, ಸಂಸ್ಕೃತಿ ಗಳನ್ನು ಹೊಂದಿರುವವರನ್ನು ಒಗ್ಗೂಡಿಸುವುದು ಸುಲಭದ ವಿಚಾರವಲ್ಲ, ಹಿಂದೂ ಧರ್ಮಕ್ಕೆ ಆ ಶಕ್ತಿ ಇದೆ. ಸಂಘಟನಾತ್ಮಕ ಪ್ರಯತ್ನ ಇದಕ್ಕೆ ಅಗತ್ಯ ಇದೆ ಎಂದರು. ಶ್ರದ್ದಾ ಕೇಂದ್ರದ ಮೂಲಕ ಪ್ರತಿಯೊಬ್ಬರಿಗೂ ಶಾಂತಿ, ಸಮೃದ್ಧಿ ಸಿಗುತ್ತದೆ. ಇಂತಹ ಉತ್ತಮ ಕೆಲಸ ಗೆಜ್ಜೆಗಿರಿ ಕ್ಷೇತ್ರದಲ್ಲಿ ನಡೆಯುತ್ತಿದೆ ಎಂದು ಶ್ರೀಪಾದ ನಾಯ್ಕ ಅವರು ಹೇಳಿದರು.

ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಮಾತನಾಡಿ, ಬಿಲ್ಲವ ಸಮುದಾಯದಲ್ಲಿ 24 ಪಂಗಡಗಳಿವೆ. ಕೇರಳದಲ್ಲಿ 100 ಶೇ. ಸಾಕ್ಷರತೆಗೆ ಬ್ರಹಶ್ರೀ ನಾರಾಯಣ ಗುರುಗಳ ಪಾತ್ರವೂ ಇದೆ. ಸ್ವಾಭಿಮಾನಕ್ಕೆ ಪ್ರೇರಣೆಯಾದ ಕೋಟಿ-ಚೆನ್ನಯರು, ನಾರಾಯಣ ಗುರುಗಳು ನಮಗೆಲ್ಲರಿಗೂ ಮಾದರಿಯಾಗಬೇಕು ಎಂದರು. ಸಂಸದ ಕ್ಯಾ। ಬ್ರಿಜೇಶ್ ಚೌಟ ಮಾತನಾಡಿ, ಹಿಂದೂ ಸಮಾಜಕ್ಕೆ ಶಕ್ತಿ ಕೊಡುವ ಕೇಂದ್ರವಾಗಿ ಗೆಜ್ಜೆಗಿರಿ ಬೆಳಗಲಿ ಎಂದರು.

ಯಾತ್ರಿ ನಿವಾಸಕ್ಕೆ ಶಿಲಾನ್ಯಾಸ ನೆರವೇರಿಸಿದ ಉದ್ಯಮಿ ದಯಾನಂದ ಬೊಂಟ್ರ ಮಾತನಾಡಿ, ಐಕ್ಯತೆಯಿಂದ ಮಾಡುವ ಕೆಲಸಕ್ಕೆ ಯಶಸ್ಸು ಲಭಿಸುತ್ತದೆ. ಗೆಜ್ಜೆಗಿರಿ ಕ್ಷೇತ್ರದ ಅಭಿವೃದ್ಧಿಯೊಂದಿಗೆ ಸಮಾಜದ ಉನ್ನತಿ ಪಡೆಯಲಿದೆ ಎಂದು ಹಾರೈಸಿದರು. ಪೀಠಾಧಿಪತಿ ಸೋಲೂರು ಮಠ ಆರ್ಯಈಡಿಗ ಮಹಾಸಂಸ್ಥಾನದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಸ್ವಾಭಿಮಾನದ ಪ್ರವೃತ್ತಿ ನಮ್ಮಲ್ಲಿ ಬೆಳೆಯಬೇಕು. ಏರಿದ ಏಣಿಯನ್ನು ಮರೆಯುವ ಕೆಲಸ ಯಾರೂ ಮಾಡಬಾರದು ಎಂದರು. ದೇಯಿ ಬೈದೆತಿ ಕೋಟಿ-ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಸಂಜೀವ ಪೂಜಾರಿ ಬಿರ್ವ ಅಧ್ಯಕ್ಷತೆ ವಹಿಸಿದ್ದರು.

ಶಿವಗಿರಿ ಮಠದ ಶ್ರೀ ಜ್ಞಾನಾನಂದ ಸ್ವಾಮೀಜಿ, ಗಣ್ಯರಾದ ಹರೀಶ್ ಜಿ.ಅಮೀನ್, ಎನ್.ಟಿ. ಪೂಜಾರಿ, ಮಹೇಶ್ ಎನ್. ಅಂಚನ್, ನವೀನ್ ಚಂದ್ರ ಸುವರ್ಣ, ಸೂರ್ಯಕಾಂತ ಜೆ ಸುವರ್ಣ, ಸಂಜೀವ ಮಠಂದೂರು, ಪ್ರತಿಭಾ ಕುಳಾಯಿ, ಮಂಜುನಾಥ್ ಪೂಜಾರಿ ಮುದ್ರಾಡಿ, ಸತೀಶ್ ಕುಮಾರ್ ಕಡೆಂಜಿಗುತ್ತು, ಸತೀಶ್ ಕುಂಪಲ, ರಕ್ಷಿತ್ ಶಿವರಾಂ, ಹೇಮನಾಥ್ ಶೆಟ್ಟಿಕಾವು, ಲೋಕೇಶ್ ಕೋಟ್ಯಾನ್, ಸತೀಶ್ ರೈ ಕಟ್ಟಾವು, ಚಂದ್ರಶೇಖರ ಕುಮಾರ್, ಹರೀಶ್ಚಂದ್ರ ಅಮೀನ್, ಸದಾನಂದ ಪೆರ್ಲ, ಹರೀಶ್ ಪೂಜಾರಿ ಬರೋಡ ಸುಜಿತಾ ಬಂಗೇರ, ಸರಿತಾ ಕೋಟ್ಯಾನ್, ಪಿ.ವಿ. ಮೋಹನ್, ಅವಿನಾಶ್, ಹರೀಶ್ ಪೂಜಾರಿ ಮಸ್ಕತ್, ಪ್ರಮೋದ್ ಕುಮಾರ್, ಪದ್ಮರಾಜ್ ಆರ್. ಪೂಜಾರಿ, ಬಿ. ರಮಾನಾಥ ರೈ, ಶಕುಂತಳಾ ಶೆಟ್ಟಿ, ಕ್ಷೇತ್ರಾಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜಾರಾಮ್ ಕೆ.ಬಿ, ಬೆಳ್ತಂಗಡಿ ಗುರುನಾರಾಯಣ ಸ್ವಾಮಿ ಸೇವಾಸಂಘದ ಅಧ್ಯಕ್ಷ ಜಯವಿಕ್ರಮ ಕಲ್ಲಾಪು, ಶ್ರೀ ಕ್ಷೇತ್ರ ಗೆಜ್ಜೆಗಿರಿ ಜಾತ್ರೋತ್ಸವ ಸಮಿತಿ ಪ್ರಧಾನ ಸಂಚಾಲಕ ನಿತ್ಯಾನಂದ ನಾವರ ಉಪಸ್ಥಿತರಿದ್ದರು.

ಸಮಿತಿ ಗೌರವಾಧ್ಯಕ್ಷ ಪೀತಾಂಬರ ಹೆರಾಜೆ, ಜಯಂತ ನಡುಬೈಲು, ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ ಮುಂತಾದವರು ಅತಿಥಿಗಳನ್ನು ಗೌರವಿಸಿದರು. ಅಭಿವೃದ್ಧಿ ಟ್ರಸ್ಟ್ ಗೌರವಾಧ್ಯಕ್ಷ ಡಾ| ರಾಜಶೇಖರ ಕೋಟ್ಯಾನ್ ಸ್ವಾಗತಿಸಿದರು. ಪ್ರಜ್ಞಾ ಓಡಿಲ್ನಾಳ ಹಾಗೂ ದಿನೇಶ್ ಸುವರ್ಣ ಕಾರ್ಯಕ್ರಮ ನಿರ್ವಹಿಸಿದರು.

ಇದೇ ಸಂದರ್ಭ ಡಿ.3ರಂದು ವಿವಿ ಕ್ಯಾಂಪಸ್‌ನಲ್ಲಿ ನಡೆಯುವ ಬ್ರಹ್ಮಶ್ರೀ ನಾರಾಯಣ ಗುರು ಮತ್ತು ಮಹಾತ್ಮ ಗಾಂಧಿ ಸಂವಾದ ಶತಮಾನೋತ್ಸವ ಕಾರ್ಯಕ್ರಮದ ಲೋಗೋ ಬಿಡುಗಡೆ ಮಾಡಲಾಯಿತು.

Related posts

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ. ಬಿ.ಎಸ್.ಇ) ಶಾಲೆಯಲ್ಲಿ ಬೇಸಿಗೆ ಶಿಬಿರದ ಉದ್ಘಾಟನೆ

Suddi Udaya

ಓಡಿಲ್ನಾಳ: ಮೈರಲ್ಕೆ ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿಯ ವಿಶೇಷ ಪೂಜೆ

Suddi Udaya

ಅ.24 ಸೌತಡ್ಕದಲ್ಲಿ ಶ್ರೀ ಮಹಾಗಣಪತಿ ಆಂಗ್ಲ ಮಾಧ್ಯಮ ಶಾಲೆಗೆ ಶಿಲಾನ್ಯಾಸ: ಡಾ. ಕೆ ಪ್ರಭಾಕರ್ ಭಟ್ ಕಲ್ಲಡ್ಕ

Suddi Udaya

ನಡ: ಗೌಡರ ಯಾನೆ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಶ್ಯಾಮಸುಂದರ ಗೌಡ ಆಯ್ಕೆ

Suddi Udaya

ಕೊಕ್ರಾಡಿಯಲ್ಲಿ ಸರ್ಕಾರದ ನಡೆ ಕಾರ್ಯಕರ್ತರ ಕಡೆ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದ ಪೂರ್ವಭಾವಿ ಸಭೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್ ಮಡಂತ್ಯಾರು ವಲಯ ಭಜನಾ ಮಂಡಳಿಗಳ ಸಭೆ

Suddi Udaya
error: Content is protected !!