25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕನ್ಯಾಡಿ ಶ್ರೀರಾಮ ಸಂಸ್ಥಾನಮ್‌ನ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿಯವರ ಹರಿದ್ವಾರದ ಸಾಧನಾ ಕುಟೀರದ 9ನೇ ವಾರ್ಷಿಕೋತ್ಸವ

ಹರಿದ್ವಾರ: ದೇಶದ ಸುಭಿಕ್ಷತೆಗೆ ಸಂತ- ಮಹಂತರ ಪ್ರಯತ್ನವೂ ಅಗತ್ಯ. ಸ್ವಸ್ಥ ಸಮಾಜದ ಗುರಿಗೆ ನಾವೆಲ್ಲರೂ ಕಟೀ ಬದ್ಧರಾಗೋಣ ಎಂದು ೧೦೦೮ ಮಹಾಮಂಡಲೇಶ್ವರ ಕನ್ಯಾಡಿ ಶ್ರೀರಾಮ ಸಂಸ್ಥಾನಮ್‌ನ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ನುಡಿದರು.

ಅವರು ಹರಿದ್ವಾರದ ಭೂಪತ್‌ವಾಲಾದಲ್ಲಿರುವ ತಮ್ಮ ಸಾಧನಾ ಕುಟೀರ(ಮಠ)ದ ೯ನೇ ವಾರ್ಷಿಕೋತ್ಸವದಲ್ಲಿ ಆಶೀರ್ವಚನ ನೀಡಿದರು. ವೇದಿಕೆಯಲ್ಲಿ ಮಹಂತರಾದ ವಿದ್ಯಾನಂದ ಸರಸ್ವತೀ ಮಹಾರಾಜ್, ಮಹೇಶ್‌ಪುರಿಜೀ, ಲಲಿತಾನಂದ ಗಿರೀಜೀ ಮಹಾರಾಜ್, ಹರಿಚೇತನಾಂದಜೀ ಮಹಾರಾಜ್, ಇಂದ್ರಾನಂದ ಸರಸ್ವತೀ ಮಹಾರಾಜ್, ಗಗನದೇವ ಮಹಾರಾಜ್, ಸಹಜಾನಂದ ಸರಸ್ವತೀ ಮಹಾರಾಜ್, ಧೀರೇಂದ್ರ ಪುರಿ ಮಹಾರಾಜ್ ವಿರಾಜಮಾನರಾಗಿದ್ದರು.

ಮಹಂತ ದೇವಾನಂದ ಮಹಾರಾಜ್ ಅಧ್ಯಕ್ಷತೆ ವಹಿಸಿದ್ದರು.

ಉತ್ತರಾಖಂಡದ ಶಾಸಕ, ಬಿಜೆಪಿ ಮಾಜಿ ಅಧ್ಯಕ್ಷ ಮದನ್ ಕೌಶಿಕ್, ಶಾಸಕರಾದ ಹರೀಶ್ ಪೂಂಜ, ಭೀಮಣ್ಣ ನಾಯಿಕ, ಬೆಹರಿನ್ ಶ್ರೀರಾಮ ಕ್ಷೇತ್ರ ಸಮಿತಿ ಅಧ್ಯಕ್ಷ, ಜಯಶಂಕರ್ ವಿಶ್ವನಾಥ್, ಗಲ್ಫ್ ಫೌಂಡೇಶನ್ ಅಧ್ಯಕ್ಷ ಹರೀಶ್ ಪೂಜಾರಿ,ರಾಜ್ಯದ ಮೀನುಗಾರಿಕಾ ಸಚಿವ ಮಂಕಾಳ್ ವೈದ್ಯ ಉದ್ಯಮಿಗಳಾದ ಬಾಬು ಪೂಜಾರಿ, ಕಿರಣ್‌ಚಂದ್ರ ಪುಷ್ಪಗಿರಿ, ಕಿರಣ್‌ಕುಮಾರ್ ಕೊಡಿಕಲ್, ಅನಿರುದ್ಧ ಭಾಟಿಯಾ, ಬೆಳ್ತಂಗಡಿಯ ಸಂತೋಷ್ ಕುಮಾರ್ ಕಾಪಿನಡ್ಕ. ಸೀತಾರಾಮ ಬೆಳಾಲು, ರವೀಂದ್ರ ಪೂಜಾರಿ ಆರ್ಲ, ದ.ಕ.ಉಡುಪಿ, ಉ.ಕ.ದಿಂದ ೧೫೦ ಕ್ಕೂ ಹೆಚ್ಚು ಶ್ರೀಗಳ ಶಿಷ್ಯರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಗೌರೀಶಂಕರ್ ಕಾರ್ಯಕ್ರಮ ನಿರ್ವಹಿಸಿದರು.

Related posts

ಇಂದಬೆಟ್ಟು ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಇಬ್ರಾಹಿಂ ನಿಧನ

Suddi Udaya

ಕೊಕ್ಕಡ: ಪದ್ಮನಾಭ ಆಚಾರ್ಯ ಹೃದಯಾಘಾತದಿಂದ ನಿಧನ

Suddi Udaya

ಮೇ 24: ವೇಣೂರು ವಿದ್ಯುತ್ ನಿಲುಗಡೆ

Suddi Udaya

ಚಿಬಿದ್ರೆ: ಶತಾಯುಷಿ ಸೇಸು ನಿಧನ

Suddi Udaya

ಧರ್ಮಸ್ಥಳ ಸಹಕಾರ ಸಂಘದಲ್ಲಿ ವೃತ್ತಿ ಮಾರ್ಗದರ್ಶನ ಕಾರ್ಯಾಗಾರ

Suddi Udaya

ಎಸ್‌ಎಸ್‌ಎಲ್‌ಸಿ ಫಲಿತಾಂಶ: ಧರ್ಮಸ್ಥಳ ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆಗೆ ಶೇ. 100 ಫಲಿತಾಂಶ

Suddi Udaya
error: Content is protected !!