September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ಹುಟ್ಟು ಹಬ್ಬದ ಸಂಭ್ರಮ: ಭಾರತೀಯ ಜೀವ ವಿಮಾ ನಿಗಮ ದಿಂದ ಡಾ.ಹೆಗ್ಗಡೆಯವರಿಗೆ ಗೌರವಾರ್ಪಣೆ; ಡಾ. ಹೆಗ್ಗಡೆಯವರ ಭಾವಚಿತ್ರವಿರುವ ಅಂಚೆ ಚೀಟಿ ಬಿಡುಗಡೆ

ಧಮ೯ಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ 78ನೇ ವಷ೯ದ ಹುಟ್ಟು ಹಬ್ಬದ ಪ್ರಯುಕ್ತ, ಹೆಗ್ಗಡೆಯವರು ವಿವಿಧ ಕ್ಷೇತ್ರಗಳಲ್ಲಿ ಸಮಾಜಕ್ಕೆ ನೀಡಿದ ಅನನ್ಯ ಸೇವೆಗಾಗಿ ಭಾರತೀಯ ಜೀವ ವಿಮಾ ನಿಗಮ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಮಾ ಸೇವಾ ವಿಭಾಗದಿಂದ ಗೌರವ ಸಮರ್ಪಣೆ ಹಾಗೂ ಪೂಜ್ಯರ ಭಾವ ಚಿತ್ರ ಇರುವ ಅಂಚೆ ಚೀಟಿ ಬಿಡುಗಡೆ ಕಾರ್ಯಕ್ರಮ ನ.25 ರಂದು ಅಮೃತವರ್ಷಿಣಿ ಸಭಾಂಗಣದಲ್ಲಿ ಜರುಗಿತು.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ದೀಪ ಬೆಳಗಿಸಿ, ಆಶೀರ್ವಚನ ನೀಡಿದರು. ಮಾತೃಶ್ರೀ ಹೇಮಾವತಿ ವಿ.ಹೆಗ್ಗಡೆ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ, ಡಾ ಎಪಿಜೆ ಅಬ್ದುಲ್ ಕಲಾಂ ಇಂಟರ್ನ್ಯಾಷನಲ್ ಫೌಂಡೇಶನ್ ನ ಸಹ ಸ್ಥಾಪಕರಾದ ಎಪಿಜೆಎಂಜೆ ಶೇಯ್ಕ್ ಸಲೀಂ, ಪುನೀತ್ ಕುಮಾರ್, ಇಡಿ, ಎಸ್‌ಸಿಝಡ್, ಹೈದರಾಬಾದ್,
ರಮೇಶ್ ಪ್ರಭು, ಅಧೀಕ್ಷಕರು ಅಂಚೆ ಕಛೇರಿ ಉಡುಪಿ, ಸಂಜಯ್ ಕೊಚಾರ್, ಜನರಲ್ ಮ್ಯಾನೇಜರ್ -ಎಎಂಜಿ, ಮರ್ಸಿಡಿಸ್-ಬೆನ್ಜ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಡಿ. ಹರ್ಷೇಂದ್ರ ಕುಮಾರ್, ಧರ್ಮಸ್ಥಳ , ಚಂದ್ರಶೇಖರ ಪ್ರಸಾದ್, ಮಾರುಕಟ್ಟೆ ಸಿಇಒ, ಸುಂದರಂ ಮೋಟಾರ್ಸ್, ಗಣಪತಿ ಎನ್. ಭಟ್,ಎಲ್ಐಸಿ ರಮೇಶ್ ಪ್ರಭು, ಸೂಪರಿಂಟೆಂಡೆಂಟ್ ಪೋಸ್ಟ್ ಆಫೀಸ್ ಉಡುಪಿ
ಭಾಗವಹಿಸಿದ್ದರು.


ಪೂಜ್ಯರು ಡಾ .ಡಿ ವೀರೇಂದ್ರ ಹೆಗ್ಗಡೆ ಅವರ ಜೀವನ ಮತ್ತು ಸಾಧನೆಯ ಕುರಿತು ವೀಡಿಯೊ ಪ್ರದಶ೯ನ ಹಾಗೂ ಅಂಚೆ ಇಲಾಖೆ ಹೊರತಂದ ಖಾವಂದರ ಭಾವಚಿತ್ರ ಇರುವ ಅಂಚೆ ಚೀಟಿ ಬಿಡುಗಡೆ ನಡೆಯಿತು. ಡಾ.ಎಪಿಜೆ ಅಬ್ದುಲ್ ಕಲಾಂ ಇಂಟರ್ನ್ಯಾಷನಲ್ ಫೌಂಡೇಶನ್ ನ ವತಿಯಿಂದ ಡಾ.ಹೆಗ್ಗಡೆಯವರನ್ನು ಗೌರವಿಸಲಾಯಿತು.

ನಿನಾದ ಶಾಸ್ತ್ರೀಯ, ಧರ್ಮಸ್ಥಳ ಮಕ್ಕಳ ಪ್ರಾರ್ಥನೆ ಬಳಿಕ ಗಣಪತಿ ಎನ್. ಭಟ್, ಎಸ್ ಡಿ ಎಂ ಎಲ್ಲೈಸಿ-ಉಡುಪಿ ಡಿ.ಒ ಸ್ವಾಗತಿಸಿದರು.ದಿನೇಶ್ ಪ್ರಭು, ಮೈಕ್ರೋ ಇನ್ಶುರೆನ್ಸ್ ಮ್ಯಾನೇಜರ್, ಎಲ್ಐಸಿ ಉಡುಪಿ ಧನ್ಯವಾದವಿತ್ತರು

Related posts

ಕಿರಣ್ ಚಂದ್ರ ಪುಷ್ಪಗಿರಿ ರವರಿಗೆ ಶಬರಿಮಲೆ ಸ್ವಾಮಿ ಅಯ್ಯಪ್ಪ ಯಕ್ಷಗಾನ ಬಯಲಾಟ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನ

Suddi Udaya

ಉಜಿರೆ: ಮಾಚಾರು ನಿವಾಸಿ ನಿವೃತ್ತ ಮೆಸ್ಕಾಂ ಉದ್ಯೋಗಿ ಆನಂದ ಗೌಡ ನಿಧನ

Suddi Udaya

ಬೆಳ್ತಂಗಡಿ ಡಿ.ಕೆ.ಆರ್.ಡಿ.ಎಸ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

Suddi Udaya

ಗುರುವಾಯನಕೆರೆ–ವೇಣೂರು ಮುಖ್ಯರಸ್ತೆಯ ಪಡಂಗಡಿ ಭಾಗದಲ್ಲಿ ತಾತ್ಕಲಿಕ ರಸ್ತೆ ದುರಸ್ತಿ ಕಾಮಗಾರಿ

Suddi Udaya

ಮುಂಡಾಜೆ ಪ.ಪೂ. ಕಾಲೇಜಿನಲ್ಲಿ ವಿಶ್ವ ಯೋಗ ದಿನಾಚರಣೆ

Suddi Udaya

ಕಲ್ಮಂಜ : ಗುಂಡ ಶ್ರೀ ಉಳ್ಳಾಯ ಉಳ್ಳಾಲ್ತಿ ದೈವಸ್ಥಾನದಲ್ಲಿ ಪವಾಡ: ಹೋಮದ ಅಗ್ನಿಯಲ್ಲಿ ಕುದುರೆ ಮೇಲೇರಿ ಕುಳಿತಂತೆ ಮೂಡಿ ಬಂದ ದೃಶ್ಯ – ದೈವಗಳ ಕಾರ್ಣಿಕ ಭಕ್ತರ ನಂಬಿಕೆ

Suddi Udaya
error: Content is protected !!