ಬೆಳ್ತಂಗಡಿ: ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ 2026 ರ ಹೊಸ ಕ್ಯಾಲೆಂಡರ್ ಇದರ ಬಿಡುಗಡೆಯು ನ. 25ರಂದು ಸೊಸೈಟಿಯಲ್ಲೊ ನಡೆಯಿತು.
ಸೊಸೈಟಿ ಅಧ್ಯಕ್ಷ ರಾಕೇಶ್ ಹೆಗ್ಡೆಯವರು ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿ ನಮ್ಮ ಸೊಸೈಟಿಯು ಸಹಕಾರಿಗಳಿಗೆ ವಿವಿಧ ಸೌಲಭ್ಯಗಳನ್ನು ನೀಡುತ್ತಿದೆ. ಸಾಲ ಸೌಲಭ್ಯ, ತರಭೇತಿ ಕಾರ್ಯಗಾರ, ರೈತಾಪಿ ವರ್ಗದವರಿಗೆ ಗುಣಮಟ್ಟದ ಸೇವೆ, ಬೆಳೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದು ಕ್ಯಾಲೆಂಡರ್ ಕೂಡ ನೀಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸೊಸೈಟಿ ಉಪಾಧ್ಯಕ್ಷ ಜನಾರ್ಧನ ಪೂಜಾರಿ, ಸಿಇಓ ಮೀರಾ, ನಿರ್ದೇಶಕರಾದ ಗುರುಪ್ರಸಾದ್ ಹೆಗ್ಡೆ, ದೇಜಪ್ಪ ಪೂಜಾರಿ, ವಿಶ್ವನಾಥ ಹೊಳ್ಳ, ದಿನೇಶ್ ಪಿಕೆ, ಹೇಮಂತ್ ಪೂಜಾರಿ ,ಕೊರಗಪ್ಪ,ಸುಂದರಿ, ಧರ್ಣಪ್ಪ ,ಮಮತಾ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.











