22.9 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿ

ಕುದ್ಯಾಡಿ ಸ.ಪ್ರಾ. ಶಾಲೆಯ ಅಗತ್ಯತೆಗೆ ಟೀಂ ಅಭಯಹಸ್ತ ಬೆಳ್ತಂಗಡಿ ವತಿಯಿಂದ ಆರ್ಥಿಕ ಸಹಕಾರ

ಬೆಳ್ತಂಗಡಿ: ಸೇವೆ ಸಂಘಟನೆ ಸಾಮರಸ್ಯದ ಧ್ಯೇಯದೊಂದಿಗೆ ಕಳೆದ ಒಂಭತ್ತು ವರ್ಷಗಳಿಂದ ಸಮಾಜಮುಖಿ ಸೇವಾಕಾರ್ಯಗಳಲ್ಲಿ ತೊಡಗಿರುವ ಸಂದೀಪ್ ಸುಂದರ್ ನೀರಲ್ಕೆರವರ ಸಾರಥ್ಯದ ಟೀಂ ಅಭಯಹಸ್ತ ಚ್ಯಾರಿಟೇಬಲ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ ಬೆಳ್ತಂಗಡಿ ಇದರ ವತಿಯಿಂದ ಸರ್ಕಾರಿ ಪ್ರಾಥಮಿಕ ಶಾಲೆ ಕುದ್ಯಾಡಿ ಇಲ್ಲಿ ಅಗತ್ಯವಿರುವ ಪ್ರಿಂಟರ್ ಖರೀದಿಗೆ ಆರ್ಥಿಕ ಸಹಕಾರವನ್ನು ಹಸ್ತಾಂತರ ಮಾಡಲಾಯಿತು.

ಸಂಘಟನೆಯ ಸಲಹೆಗಾರರಾದ ಸದಾಶಿವ ಶೆಟ್ಟಿ ಹೊಸಮನೆ ಅರುವ ಇವರು ಹಸ್ತಾಂತರಿಸಿದರು.
ಶಾಲೆಯ ಪ್ರಗತಿಗೆ ಅಹರ್ನಿಶಿ ಶ್ರಮಿಸುತ್ತಿರುವ ಶಿಕ್ಷಕರಾದ ನಾಗಭೂಷಣ್ ರವರನ್ನು ಅಳದಂಗಡಿ ಸತ್ಯದೇವತಾ ಕಲಾ ತಂಡದ ಪೂರ್ವಾಧ್ಯಕ್ಷ ಸುಂದರ ಪೂಜಾರಿ ನೀರಲ್ಕೆ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಸದಸ್ಯರಾದ ಮನೀತ್ ಅರ್ವ, ಅಭಿಷೇಕ್ ಎನ್, ಶ್ರೀನಾಥ್ ಶೆಟ್ಟಿ, ಇರ್ಷಾದ್ ಶಿರ್ಲಾಲು ರವರು ಉಪಸ್ಥಿತರಿದ್ದರು.

Related posts

ಚಾರ್ಮಾಡಿ ಗ್ರಾ.ಪಂ. ಗೆ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ರಘು ಎಇ ಭೇಟಿ

Suddi Udaya

ಎಲ್‌.ಸಿ.ಆರ್. ಇಂಡಿಯನ್ ಪದವಿ ಕಾಲೇಜಿನಲ್ಲಿ ವಾಣಿಜ್ಯ ಚಟುವಟಿಕೆ

Suddi Udaya

ದೇಲಂಪುರಿ ಶ್ರೀ ಮಹಾದೇವ ಮಹಾಗಣಪತಿ ದೇವಸ್ಥಾನದ ಸ್ವಾಗತ ಗೋಪುರ ಉದ್ಘಾಟನೆ

Suddi Udaya

ಬೆಳ್ತಂಗಡಿ ಕ್ಯಾಂಪ್ಕೋ ಶಾಖೆಯಿಂದ ನಿವೃತ್ತಿ ಹೊಂದಿದ ಶ್ರೀಧರ ಕೆ. ರವರಿಗೆ ಬೀಳ್ಕೊಡುಗೆ ಸಮಾರಂಭ

Suddi Udaya

ಫ್ರೆಂಡ್ಸ್ ಬದ್ಯಾರ್ ತಂಡದ ಸದಸ್ಯರಿಂದ ಶ್ರಮದಾನ

Suddi Udaya

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮದ್ದಡ್ಕ :12 ನೇ ವರ್ಷದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!