
ಬೆಳ್ತಂಗಡಿ: ವಿಶ್ವ ವಿಖ್ಯಾತ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು 78ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು ತಾಲೂಕಿನ ನಂಬರ್ 1 ಜನಪ್ರಿಯ ವಾರಪತ್ರಿಕೆ ಸುದ್ದಿ ಉದಯ ಬಳಗದ ವತಿಯಿಂದ ಅವರನ್ನು ನ 25ರಂದು ಶ್ರೀ ಕ್ಷೇತ್ರದಲ್ಲಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸುದ್ದಿ ಉದಯ ಪತ್ರಿಕೆಯ ಸಂಪಾದಕ ಬಿ.ಎಸ್ ಕುಲಾಲ್, ವ್ಯವಸ್ಥಾಪಕ ನಿರ್ದೆಶಕ ತುಕರಾಮ್ ಬಿ, ಉಪಸಂಪಾದಕ ಸಂತೋಷ್ ಪಿ ಕೋಟ್ಯಾನ್ ಬಳಂಜ, ಕಚೇರಿ ವ್ಯವಸ್ಥಾಪಕ ತಿಮ್ಮಪ್ಪ ಗೌಡ ಉಪಸ್ಥಿತರಿದ್ದರು.











