ಬೆಳ್ತಂಗಡಿ : ಶ್ರೀ ಧರ್ಮಸ್ಥಳ ಮಂಜುನಾಥ ಶಾಲೆ ಬೆಳ್ತಂಗಡಿಯಲ್ಲಿ ಡಾ. ಡಿ ವೀರೇಂದ್ರ ಹೆಗ್ಗಡೆ ಯವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಮುಖ್ಯ ಅಭ್ಯಂಗತರಾಗಿ ಜೀವನ್ ಕುಮಾರ್ ಶೆಟ್ಟಿ ಜನರಲ್ ಮ್ಯಾನೇಜರ್ ಸಿರಿ ಗ್ರಾಮೋದ್ಯೋಗ ಇವರು ಆಗಮಿಸಿ, ಹೆಗ್ಗಡೆಯವರ ಗುರಿ ಅಭಿವೃದ್ಧಿ , ಏಳಿಗೆ ಬಗ್ಗೆ ತಿಳಿಯಪಡಿಸಿದರು.
ಈ ಸಂದರ್ಭದಲ್ಲಿ ಭಾಷಣ, ಡ್ರಾಯಿಂಗ್, ಗ್ರೀಟಿಂಗ್ ಕಾರ್ಡ್ ತಯಾರಿ ಸ್ಪರ್ಧೆ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಯಿತು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಲಾಯಿತು.
ವೇದಿಕೆಯಲ್ಲಿ ಮುಖ್ಯ ಶಿಕ್ಷಕಿ ಶ್ರೀಮತಿ ಹೇಮಲತಾ ಎಂ ಆರ್ ಉಪಸ್ಥಿತರಿದ್ದರು
ಶಿಕ್ಷಕರುಗಳಾದ ಸೌಮ್ಯ ಪಿ, ಸಹನಾ ಅಮಿತಾ, ಪ್ರವೀಣ್ ಎನ್ ,ನೀತಾ ಶ್ರೇಯಾಂಸ ಜೈನ್ ಆಯೋಜಿಸಿದ ಕಾರ್ಯಕ್ರಮದಲ್ಲಿ ಎಲ್ಲಾ ಶಿಕ್ಷಕರ ಸಹಕರಿಸಿದರು. ಶ್ರೀಮತಿ ನೀತಾ ಸ್ವಾಗತಿಸಿ, ಅಮಿತಾ ಧನ್ಯವಾದವಿತ್ತರು. ಶಿಕ್ಷಕ ಶ್ರೇಯಾಂಸ ಜೈನ್ ಕಾರ್ಯಕ್ರಮ ನಿರೂಪಿಸಿದರು.











