ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಹುಟ್ಟುಹಬ್ಬದ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಾಲಡ್ಕ ಮತ್ತು ಕುದ್ರಡ್ಕ ಒಕ್ಕೂಟದ ವತಿಯಿಂದ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಮತ್ತು ಪಾಲೆದು ಶಾಲೆಯ ಮಕ್ಕಳಿಗೆ ಹಣ್ಣು ಹಂಪಲು ವಿತರಿಸಲಾಯಿತು.

ಗುರುವಾಯನಕೆರೆಯ ಬಿ.ಸಿ.ಟ್ರಸ್ಟ್ ನ ಯೋಜನಾಧಿಕಾರಿ ಅಶೋಕ್ ಮತ್ತು ಕೃಷಿ ಅಧಿಕಾರಿ ಕೃಷ್ಣ, ಕುದ್ರಡ್ಕ ಒಕ್ಕೂಟದ ಅಧ್ಯಕ್ಷ ವಿಜಯ್ ಮಡಕ್ಕಿಲ, ಪಾಲಡ್ಕ ಒಕ್ಕೂಟದ ಅಧ್ಯಕ್ಷೆ ಕುಸುಮಾವತಿ, ತಣ್ಣೀರುಪಂತ ಗ್ರಾಮ ಪಂಚಾಯತ್ ಸದಸ್ಯ ಅನಿಲ್ ಪಾಲೆದು, ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ಸೇವಾ ಪ್ರತಿನಿಧಿ ನಂದಿನಿ ಉಪಸ್ಥಿತರಿದ್ದರು.











