32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಪುನರ್ವಸತಿ ಹೋರಾಟ ಸಮಿತಿಯಿಂದ ಶಾಸಕ ಹರೀಶ್ ಪೂಂಜರ ಭೇಟಿ, ಮನವಿ ಸಲ್ಲಿಕೆ

ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಪುನರ್ವಸತಿ ಹೋರಾಟ ಸಮಿತಿಯ ವತಿಯಿಂದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರನ್ನು ಭೇಟಿ ಮಾಡಿ ಸಮಸ್ಯೆ ಬಗ್ಗೆ ಮನವಿ ಪತ್ರ ಸಲ್ಲಿಸಿದರು.

2005ರಲ್ಲಿ ಸರ್ಕಾರದಿಂದ ಅನುಮತಿ ಪಡೆಯುವಾಗ 2008ರ ವರೆಗೆ ಎಲ್ಲಾ ಕುಟುಂಬಗಳನ್ನು ಪುನ‌ರ್ ವಸತಿಗೊಳಿಸಿದಾಗ ಉಲ್ಲೇಖ ಮಾಡಿರುತ್ತಾರೆ ಆದರೆ 2025 ವರ್ಷ ಕಳೆದರೂ ಈವರೆಗೂ ಪುನರ್ವಸತಿ ಗೊಳಿಸುವ ಕಾರ್ಯ ಪೂರ್ಣಗೊಳಿಸುವುದಿಲ್ಲ. ಹಣದುಬ್ಬರದಿಂದ ಜಮೀನು ಮತ್ತು ಮನೆಗಳು ಸೇರಿದಂತೆ ಸರಕು ಸೇವೆಗಳ ಬೆಲೆಗಳು ಗಗನ ಕೇಳುತ್ತಿದ್ದ ಹಣದ ಮೌಲ್ಯಯು ಕಾಲಕಾಲಕ್ಕೆ ಏರಿಳಿತಕ್ಕೆ ಒಳಗಾಗುತ್ತಿದ್ದ ಶೇಕಡ ಐದರಿಂದ ಆರು ಪ್ರತಿಶತ ಹಣದ ಮೌಲ್ಯವು ಕಡಿಮೆಯಾಗಿರುತ್ತದೆ ಆದರೆ ಭೂಮಿಯ ಬೆಲೆಯು ನಾಲೈದು ಪಟ್ಟು ಹೆಚ್ಚಾಗಿರುತ್ತದೆ. ಈಗ ಕೊಡುತ್ತಿರುವ ಪುನರ್ವಸತಿ ಮೌಲ್ಯದಿಂದ ಅನೇಕ ಕುಟುಂಬಗಳು ಬೀದಿಯಲ್ಲಿ ಬೀಳುವ ಪರಿಸ್ಥಿತಿಯಲ್ಲಿದ್ದಾರೆ ಕಾರಣ ಸರ್ಕಾರ ಜಾಗವನ್ನು ಸಹ ನೀಡುತ್ತಿಲ್ಲ. ಹಾಗೂ ಸರ್ಕಾರ ನೀಡುತ್ತಿರುವ ಪುನರ್ವಸತಿ ಯೋಜನೆ ಅಡಿ ನೀರು ಹಣದಿಂದ ಬೇರೆ ಜಮೀನು ಮನೆಗಳನ್ನು ಕೊಳ್ಳಲು ಆಗುವುದಿಲ್ಲ ಆದ್ದರಿಂದ ಸರ್ಕಾರ ಯೋಜನೆಗಾಗಿ ಮೂಲ ನಿವಾಸಿಗಳು ತಾವು ಕಟ್ಟಿಕೊಂಡ ಬದುಕನ್ನು ಸರ್ಕಾರಕ್ಕೆ ಬಿಟ್ಟುಕೊಟ್ಟು ದಿಕ್ಕು ದೆಸೆ ಇಲ್ಲದೆ ಬಿಟ್ಟು ಹೋಗುವ ಪರಿಸ್ಥಿತಿ ಮತ್ತು ಸರ್ಕಾರ ಕೊಡುವ ಹಣ ನೆಲೆ ನಿಲ್ಲಲು ಸಾಕಾಗದೆ ಬೀದಿಯಲ್ಲಿ ಬೀಳುವ ಪರಿಸ್ಥಿತಿ ಒದಾಗಿ ಬಂದಿದೆ. ಆದ್ದರಿಂದ ಪುನ‌ರ್ ವಸತಿ ಪ್ಯಾಕೇಜ್ ನಲ್ಲಿ ಘೋಷಿಸಿರುವ ಎಲ್ಲಾ ಮೌಲ್ಯಗಳನ್ನು 2025 ಮಾರ್ಕೆಟ್ ದರಕ್ಕೆ ಹೋಲಿಕೆ ಮಾಡಿ ಮೇಲ್ಕಂಡ ಆದೇಶಗಳನ್ನು ಪುನ‌ರ್ ಪರಿಶೀಲಿಸಿ ಹೊಸ ಆದೇಶ ಮಾಡಿಸಿಕೊಡಬೇಕಾಗಿ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕೀರೂರು ಸುಧಾಕರ್, ಅಂಬರೀಶ್, ನಾಗೇಶ್ ನಾಯಕ್, ಸುಧಾಕರ್, ದಿನೇಶ್ ಕೂಳೆಗದ್ದೆ ಪ್ರದೀಪ್ ಮುಂತಾದವರು ಹಾಜರಿದ್ದರು.

Related posts

ಎಸ್.ಡಿ.ಪಿಐ ಕುವೆಟ್ಟು ಗ್ರಾಮ ಸಮಿತಿ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಮಾವಿನಕಟ್ಟೆ: ಸ್ವಾತಿ ಎಂ. ಶೆಟ್ಟಿರವರಿಗೆ ಬೆಸ್ಟ್ಔಟ್ ಗೋಯಿಂಗ್ ಸ್ಟೂಡೆಂಟ್ ಅವಾರ್ಡ್ ಪ್ರಶಸ್ತಿ

Suddi Udaya

ಶ್ರೀ. ಧಂ. ಮಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ತು ಉದ್ಘಾಟನೆ

Suddi Udaya

ಮಲವಂತಿಗೆ ಗ್ರಾ.ಪಂ. ನ ಪ್ರಥಮ ಸುತ್ತಿನ ಗ್ರಾಮ ಸಭೆ

Suddi Udaya

ಗುರುವಾಯನಕೆರೆ: ನಿಸರ್ಗ ಕರ್ಟನ್ & ವಾಲ್ ಪೇಪರ್ ಮಳಿಗೆಯಲ್ಲಿ ದೀಪಾವಳಿ ಪ್ರಯುಕ್ತ ಗ್ರಾಹಕರಿಗೆ ಸ್ಪೆಷಲ್ ಡಿಸ್ಕೌಂಟ್ ಸೇಲ್

Suddi Udaya

ಕುವೆಟ್ಟು ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ 12ನೇ ವರ್ಷದ ಗುರು ಪೂಜೆ ಹಾಗೂ ಸಾರ್ವಜನಿಕ ಶನೈಶ್ಚರ ಪೂಜೆಯ ಪೂರ್ವಭಾವಿ ಸಭೆ ಮತ್ತು ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!