23.5 C
ಪುತ್ತೂರು, ಬೆಳ್ತಂಗಡಿ
March 7, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಪೊಲೀಸ್ವರದಿ

ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ನಾಳ ದಿನೇಶ್ ಶೆಟ್ಟಿ ಯಾನೆ ದಿನ್ನು ಬಂಧನ

ಬೆಳ್ತಂಗಡಿ: ಕಾವೂರು ಠಾಣೆಯಲ್ಲಿ 2019ರಲ್ಲಿ ದಾಖಲಾಗಿದ್ದ ಅಪಹರಣ ಪ್ರಕರಣ, 2022 ರಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ, ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ 2023 ರಲ್ಲಿ ದಾಖಲಾಗಿದ್ದ ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿ ಕಳೆದ ಒಂದೂವರೆ ವರ್ಷದಿಂದ ಕೋರ್ಟ್ ಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಮುಗುಳಿ ಹೊಸಮನೆ ನಿವಾಸಿ ತಿಮ್ಮಪ್ಪ ಶೆಟ್ಟಿ ಮಗ ದಿನೇಶ್ ಶೆಟ್ಟಿ @ ದಿನ್ನು ನನ್ನು ಮಂಗಳೂರು ಎಸಿಪಿ ಉತ್ತರ ಉಪವಿಭಾಗ ಹಾಗೂ ಅವರ ತಂಡ ನ.25 ರಂದು ಬಂಧಿಸಿದ್ದಾರೆ.

ಇನ್ನು ಭೂಗತ ಲೋಕದ ಪಾತಕಿ ರವಿ ಪೂಜಾರಿ ಮತ್ತು ಕಲಿ ಯೊಗೀಶ್ ರವರಿಂದ ಸುಪಾರಿ ಪಡೆದು ನ್ಯಾಯವಾದಿ ಖಾಸೀಂ ನೌಷಾದ್ ನನ್ನು ಕೊಲೆ ಮಾಡಿದ ಆರೋಪದ ಮೇರೆಗೆ ಈತನಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿತ್ತು. ಅದರಲ್ಲಿ 11 ವರ್ಷ ಕಾರಾಗೃಹ ಶಿಕ್ಷೆ ಅನುಭವಿಸಿ ನಂತರ ಉಚ್ಛ ನ್ಯಾಯಾಲಯಕ್ಕೆ ಅಫೀಲು ಸಲ್ಲಿಸಿ ಡಿಸೆಂಬರ್ 2019 ರಲ್ಲಿ ಬಿಡುಗಡೆಗೊಂಡಿದ್ದ. ಇದೀಗ ಕೋರ್ಟ್ ಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ ದಿನೇಶ್ ಶೆಟ್ಟಿ ಮತ್ತೆ ಜೈಲು ಸೇರಿದ್ದಾನೆ.

Related posts

ಸಿಯೋನ್ ಆಶ್ರಮ ಟ್ರಸ್ಟ್ ಗೆ “ಅತ್ಯುತ್ತಮ ಎನ್‌.ಜಿ.ಒ” ಪ್ರಶಸ್ತಿ

Suddi Udaya

ವಾಣಿ ಶಿಕ್ಷಣ ಸಂಸ್ಥೆಯಲ್ಲಿ ಬೆಳ್ತಂಗಡಿ ಟೀಮ್ ನವಭಾರತ್ ವತಿಯಿಂದ ದಿ. ತುಷಾರ್. ಕೆ ಸ್ಮರಣಾರ್ಥ ರಕ್ತದಾನ ಶಿಬಿರ

Suddi Udaya

ವಿಜ್ಞಾನ ಮಾದರಿ ತಯಾರಿ ಸ್ಪರ್ಧೆ: ವಾಣಿ ಆಂ. ಮಾ. ಶಾಲಾ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಗೇರುಕಟ್ಟೆ: ಇರೋಲು ವ್ಯಾಪಾರಿ ನೇಣುಬಿಗಿದು ಆತ್ಮಹತ್ಯೆ

Suddi Udaya

ಸೌಭಾಗ್ಯ ವಿಕಲಚೇತನರ ಪತ್ತಿನ‌ ಸಹಕಾರಿ ಸಂಘದ ನಿರ್ದೇಶಕರಾಗಿ ಅಶ್ರಫ್ ಆಲಿಕುಂಞಿ ಆಯ್ಕೆ

Suddi Udaya

ಕುತ್ಲೂರು ಶಿವಶಕ್ತಿ ಫ್ರೆಂಡ್ಸ್ ಕ್ಲಬ್ ನಿಂದ ನಾರಾವಿ ವಾಲ್ಮೀಕಿ ಆಶ್ರಮ ಶಾಲಾ ಮಕ್ಕಳಿಗೆ ಕ್ರೀಡಾ ಸಮವಸ್ತ್ರ ವಿತರಣೆ

Suddi Udaya
error: Content is protected !!