ಗ್ರಾಮಾಂತರ ಸುದ್ದಿವರದಿ

ಪಂಚ ಗ್ಯಾರಂಟಿ: ತಾಲೂಕು ಮಟ್ಟದ ಅನುಷ್ಠಾನ ಸಮಿತಿ ಸಭೆ ಜನಸ್ಪಂದನ ಸಭೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುದಾನದ ಮಾಹಿತಿ ನೀಡಲು ಅಧಿಕಾರಿಗಳಿಗೆ ಸೂಚನೆ

ಬೆಳ್ತಂಗಡಿ: ಪಂಚ ಗ್ಯಾರಂಟಿ ಯೋಜನೆಯ ತಾಲೂಕು ಮಟ್ಟದ ಅನುಷ್ಟಾನ ಸಮಿತಿ ಸಭೆಯು ಸಮಿತಿಯ ಅಧ್ಯಕ್ಷರಾದ ಪದ್ಮನಾಭ ಸಾಲ್ಯಾನ್ ರವರ ಅಧ್ಯಕ್ಷತೆಯಲ್ಲಿ ಬೆಳ್ತಂಗಡಿ ತಾ.ಪಂ. ಸಮಿತಿಯ ಕಛೇರಿಯಲ್ಲಿ ನಡೆಯಿತು.

ಯೋಜನೆ ಸದಸ್ಯ ಕಾರ್ಯದರ್ಶಿ ಭವಾನಿಶಂಕರ್, ಮೆಸ್ಕಾಂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆಹಾರ ಇಲಾಖೆ, ರಾಜ್ಯ ರಸ್ತೆ ಸಾರಿಗೆ ನಿಗಮ ಮತ್ತು ಉದ್ಯೋಗ ವಿನಿಮಯ ಕಛೇರಿಗಳ ಮೂಲಕ ಗೃಹಜ್ಯೋತಿ, ಗೃಹಲಕ್ಷ್ಮೀ, ಅನ್ನಭಾಗ್ಯ, ಶಕ್ತಿ ಹಾಗೂ ಯುವನಿಧಿ ಯೋಜನೆಗಳಲ್ಲಿ ಸರ್ಕಾರದಿಂದ ಬಿಡುಗಡೆಯಾದ ಅನುದಾನ ಮತ್ತು ಸವಲತ್ತು ಪಡೆದ ಫಲಾನುಭವಿಗಳ ಸಂಖ್ಯೆಯನ್ನು ಪರಿಶೀಲಿಸಲಾಯಿತು.

ಸರ್ಕಾರದ ಪಂಚಯೋಜನೆಗಳ ಸವಲತ್ತುಗಳನ್ನು ಪಡೆಯಲು ಬಾಕಿ ಇರುವ ಫಲಾನುಭವಿಗಳ ಅರ್ಜಿಗಳನ್ನು ವಿಲೇವಾರಿಗೊಳಿಸುವ ಕುರಿತು, ಚರ್ಚಿಸಲಾಯಿತು. ಗೃಹಜ್ಯೋತಿ ಯೋಜನೆಯಡಿ ಉಜಿರೆ ಉಪವಿಭಾಗದಲ್ಲಿ ೨೦೨೫ರ ಅಕ್ಟೋಬರ್ ತಿಂಗಳವರೆಗೆ ೨೫,೭೨೪ ಕುಟುಂಬಗಳಿಗೆ ೩೫,೨೧,೮೮,೭೫೦ ರೂ, ಬೆಳ್ತಂಗಡಿ ಉಪವಿಭಾಗದಲ್ಲಿ ೪೪೮೬೧ ಕುಟುಂಬಗಳಿಗೆ ೧೦೪,೦೯,೮೪,೭೮೯ ರೂ ಸಹಾಯಧನ ದೊರತಿದ್ದು ತಾಲೂಕಿಗೆ ಈವರೆಗೆ ೧೩೯,೩೧,೭೩,೫೩೯ ರೂ ಸಹಾಯಧನ ದೊರೆತಿರುವುದಾಗಿ ಅಧಿಕಾರಿಗಳು ತಿಳಿಸಿದರು. ಗೃಹಲಕ್ಷ್ಮೀ ಯೋಜನೆಯಡಿ ಪ್ರಕೃತ ೫೮೮೩೩ ಫಲಾನುಭವಿಗಳಿದ್ದು, ಆಗಸ್ಟ್-೨೦೨೩ ರಿಂದ ಈವರೆಗೆ ೨೪೦,೯೧,೩೮,೦೦೦ ರೂ ಹಾಗೂ ಅನ್ನ ಭಾಗ್ಯ ಯೋಜನೆಯಡಿ ೪೫,೬೧೩ ಪಡಿತರ ಚೀಟಿದಾರರಿಗೆ ಪ್ರತೀ ಕೆ.ಜಿ.ಗೆ ರೂ. ೩೪ ರಂತೆ ರೂ. ೫೫,೪೯,೫೫,೫೪೦ ಆಗಸ್ಟ್-೨೦೨೩ ರಿಂದ ಆಗಸ್ಟ್-೨೦೨೫ರವರೆಗೆ ದೊರೆತಿರುವುದಾಗಿ ಅಧಿಕಾರಿಗಳು ಸಭೆಗೆ ವಿವರ ನೀಡಿದರು. ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು ೬೩೬೨ ಫಲಾನುಭವಿಗಳಿದ್ದು, ಬೆಳ್ತಂಗಡಿ ತಾಲೂಕಿನ ೮೮೩ ಅಭ್ಯರ್ಥಿಗಳಿಗೆ ಆಗಸ್ಟ್-೨೦೨೩ ರಿಂದ ಈ ತಿಂಗಳವರೆಗೆ ೨,೧೪,೫೯,೦೦೦ ರೂ.ಗಳನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ. ಶಕ್ತಿ ಯೋಜನೆಯಡಿ ಧರ್ಮಸ್ಥಳ ಘಟಕದ ಬಸ್ಸುಗಳ ಮೂಲಕ ೨೦೨೫ರ ಅಕ್ಟೋಬರ್ ತಿಂಗಳಲ್ಲಿ ೭೭೭೦೭೮ ಮಹಿಳಾ ಪ್ರಯಾಣಿಕರು ಯೋಜನೆಯ ಸವಲತ್ತನ್ನು ಪಡೆದಿದ್ದು, ಜೂನ್-೨೦೨೩ ರಿಂದ ಈವರೆಗೆ ೧೮೩೭೬೧೭೯ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು, ೮೩,೯೩,೨೧,೬೮೬ ರೂ. ಬಿಡುಗಡೆಯಾಗಿರುವುದಾಗಿ ಮಾಹಿತಿ ನೀಡಿದರು.

ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಜಿಲ್ಲಾ ಸಮಿತಿಯ ಉಪಾಧ್ಯಕ್ಷರಾದ ಶೇಖರ್ ಕುಕ್ಕೇಡಿ, ತಾಲೂಕು ಅನುಷ್ಠಾನ ಸಮಿತಿಯ ಸದಸ್ಯರಾದ ಶ್ರೀಮತಿ ವಂದನಾ ಕುಮಾರಿ,ಸೌಮ್ಯ ಲಾಯಿಲ,ಮೆರಿಟಾ ಪಿಂಟೋ, ವಾಸುದೇವ ರಾವ್, ವಿಜಯಗೌಡ ಬೆಳಾಲು, ಕೇಶವ ನಾಯ್ಕ, ಶರೀಫ್ ಸಬರಬೈಲ್, ಕೆ.ನೇಮಿರಾಜ್ ಕಿಲ್ಲೂರು, ಶ್ರೀಪತಿ ಉಪಾಧ್ಯಾಯ,ಅಬ್ದುಲ್ ಸಲಾಂ,ಹಕೀಂ ಕೊಕ್ಕಡ, ಸತೀಶ್ ಹೆಗ್ಡೆ ವೇಣೂರು, ವೀರಪ್ಪ ಮೊಯ್ಲಿ, ನೋಡೆಲ್ ಅಧಿಕಾರಿಯಾದ ಹೆರಾಲ್ಡ್ ಸ್ವಿಕ್ವೇರಾ ಹಾಗೂ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರಗತಿ ಪರಿಶೀಲನಾ ಸಭೆಗೆ ಕೆಎಸ್ಸಾರ್ಟಿಸಿ ಧರ್ಮಸ್ಥಳ ಘಟಕದ ಘಟಕ ವ್ಯವಸ್ಥಾಪಕರ ನಿರಂತರ ಗೈರು ಮತ್ತು ನಿರ್ಣಯ ಅನುಷ್ಠಾನದಲ್ಲಿ ನಿರ್ಲಕ್ಷ್ಯಕ್ಕೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲು ತೀರ್ಮಾನಿಸಲಾಯಿತು. ಜನಸ್ಪಂದನ ಸಭೆಗಳಲ್ಲಿ ಇನ್ನು ಮುಂದಿನ ದಿನಗಳಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಮಾಹಿತಿಯನ್ನು ಮತ್ತು ಈವರೆಗೆ ಸರ್ಕಾರದಿಂದ ತಾಲೂಕಿಗೆ ಬಿಡುಗಡೆಯಾದ ಅನುದಾನದ ವಿವರವನ್ನು ಕಡ್ಡಾಯವಾಗಿ ವಿವರಿಸುವಂತೆ ತಿಳಿಸಲಾಯಿತು.

Related posts

ಅ.22 ಬಳಂಜ ಶಾರದೋತ್ಸವ, ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಶುಭಹಾರೈಸಿದ ಸತೀಶ್ ರೈ ಬಾರ್ದಡ್ಕಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಹಾಗೂ ಊರ ಮಹನೀಯರ ಸಹಕಾರದೊಂದಿಗೆ ವಿಜೃಂಭಣೆಯ ಶಾರದೋತ್ಸವಕ್ಕೆ ತಯಾರಿವೈಭವದ ಮೆರವಣಿಗೆ, ಆಟೋಟ ಸ್ಪರ್ಧೆಗಳು,500 ಭಜಕರಿಂದ ಭಜನೆ,ಸಾಂಸ್ಕೃತಿಕ ವೈಭವ ಕಾರ್ಯಕ್ರಮ

Suddi Udaya

ಮೊಗ್ರು ಪರಿಸರದಲ್ಲಿ ಮಹಾಸಂಪರ್ಕ ಅಭಿಯಾನ ಮತ್ತು ಮತಯಾಚನೆ

Suddi Udaya

ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ: ವಾಣಿ ಕಾಲೇಜಿನ ಬಾಲಕರ ತಂಡವು ದ್ವಿತೀಯ ಪ್ರಶಸ್ತಿ

Suddi Udaya

ಬಳ್ಳಮಂಜದಲ್ಲಿ ಸದ್ಗುರು ಆಯಿಲ್ ಮಿಲ್ ಉದ್ಘಾಟನೆ

Suddi Udaya

ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ಅಮ್ಮನವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿ ಕೆ. ರಾಧಾಕೃಷ್ಣ ಆಯ್ಕೆ

Suddi Udaya

ಉಜಿರೆ : ಹಲಕ್ಕೆ ನಿವಾಸಿ ಫ್ಲೋರಿನ್ ರೆಬೆಲ್ಲೋ ನಿಧನ

Suddi Udaya
error: Content is protected !!