September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಉಜಿರೆ ಅನುಗ್ರಹ ಕಾಲೇಜಿನಲ್ಲಿ ಅನುಖ -2025 ರ ಸಂಭ್ರಮಾಚರಣೆ

ಉಜಿರೆ: ಕಾಲೇಜಿನ ವಾಣಿಜ್ಯ ವಿಭಾಗದ ಅನುಖ-2025 ಸಂಭ್ರಮಾಚರಣೆಯು ನ.24ರಂದು ಕಾಲೇಜಿನ ಆಡಿಟೋರಿಯಂನಲ್ಲಿ ಜರುಗಿತು.

ಕಾರ್ಯಕ್ರಮವನ್ನು ಸಂಸ್ಥೆಯ ಸಂಚಾಲಕರಾದ ವಂ.ಫಾ.ಅಬೆಲ್ ಲೋಬೋ,ಟ್ರೋಫಿಗಳ ಅನಾವರಣಗೊಳಿಸಿ ಚಾಲನೆ ನೀಡಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭಹಾರೈಸಿದರು.


ಮುಖ್ಯ ಅಥಿತಿಗಳಾಗಿ ವಾಮದಪದವು ಪ್ರಥಮದರ್ಜೆ ಕಾಲೇಜಿನ ಸಹಾಯಕ ಪ್ರಾದ್ಯಾಪಕರಾದ ಡಾ.ವಿಶಾಲ್ ಪಿಂಟೋ ಮಾತನಾಡಿ ಶಿಕ್ಷಣದಲ್ಲಿ ಮೌಲ್ಯಧಾರಿತ ಶಿಕ್ಷಣವು ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತದೆ. ವಿದ್ಯಾರ್ಥಿ ಭವಿಷ್ಯ ರೂಪಿಸುತ್ತದೆ. ವಿದ್ಯಾರ್ಥಿಗಳು ಜ್ಞಾನ ಸಂಪಾದನೆಗೆ ಮಹತ್ವವನ್ನು ನೀಡಬೇಕು ಎಂದು ತಿಳಿಸಿದರು.ಕಾಲೇಜಿನ ಪ್ರಾಂಶುಪಾಲರಾದ ವಂ.ಫಾ. ವಿಜಯ್ ಲೋಬೋ ಮಾತನಾಡಿ ವಾಣಿಜ್ಯ ವಿಭಾಗದ ಅನುಖ -೨ಏ೨೫ ರ ಮಹತ್ವವನ್ನು ತಿಳಿಸಿದರು.ವೇದಿಕೆಯಲ್ಲಿ ವಾಣಿಜ್ಯ ವಿಭಾಗದ ನಿರ್ದೆಶಕರಾದ ಶ್ರೀಮತಿ ಕಾವ್ಯಶ್ರೀ ,ಅನುಗ್ರಹ ಪ್ರೌಢಶಾಲೆಯ ಹಿರಿಯ ಶಿಕ್ಷಕರಾದ ಶ್ರೀಮತಿ ಐರಿನ್ ರೋಡ್ರಿಗಸ್, ಶ್ರೀಮತಿ ವಿನಯಲತಾ ಹಾಗೂ ವಾಣಿಜ್ಯ ಸಂಘದ ಕಾರ್ಯದರ್ಶಿ ಮಾರ್ಕ್, ರಿ಼ಷಾನ್ ಹಾಗೂ ಅನುಖ- ೨ಏ೨೫ರ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಪ್ರಯುಕ್ತ ಅನುಗ್ರಹ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಿಗೆ ಬಿಸಿನೆಸ್ ಕ್ವಿಜ್,ಕೊಲೇಜ್ ಸ್ಪರ್ಧೆ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಬೆಸ್ಟ್ ಟೀಮ್ ಮ್ಯಾನೆಜ್‌ಮೆಂಟ್ ,ವ್ಯಾಪಾರೋದ್ಯಮ,ಬಿಸಿನೆಸ್‌ಕ್ವಿಜ್, ವ್ಯಾವಹಾರಿಕ ಮಾದರಿ ತಯಾರಿಕೆ ಸ್ಪರ್ಧೆ ಏರ್ಪಡಿಸಿ ಬಹುಮಾನವನ್ನು ನೀಡಲಾಯಿತು.ಇದೇ ಸಂದರ್ಭದಲ್ಲಿ ಕಾಲೇಜು ವಾರ್ಷಿಕೋತ್ಸವದ ಪ್ರಯುಕ್ತ ನಡೆದ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳ ಬಹುಮಾನವನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ವಾಣಿಜ್ಯ ಉಪನ್ಯಾಸಕಿ ಶ್ರೀಮತಿ ಕಾವ್ಯಶ್ರೀ ಸ್ವಾಗತಿಸಿ, ವಿದ್ಯಾರ್ಥಿ ನಾಯಕಿ ಹೆಝಲ್ ಜಿಶಾ ಪಿಂಟೋ ನಿರೂಪಿಸಿ, ಹಲೀಮಾ ನಜ್ಮೀನ್ ಧನ್ಯವಾದವಿತ್ತರು.

Related posts

ಉಜಿರೆ ಎಸ್.ಡಿ.ಎಮ್ ಆಂ.ಮಾ. (ಸಿ.ಬಿ.ಎಸ್.ಇ) ಶಾಲೆಯಲ್ಲಿ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ

Suddi Udaya

ಬೆಳ್ತಂಗಡಿ ದಾರುಸ್ಸಲಾಂ ದುಅ್’ವಾ ಕಾಲೇಜಿಗೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಭೇಟಿ

Suddi Udaya

ಉಜಿರೆ ರಬ್ಬರ್ ಸೊಸೈಟಿಗೆ ಅಪೋಲೋ ಗೋಲ್ಡ್ ಪಾರ್ಟ್ನರ್ ಅವಾರ್ಡ್

Suddi Udaya

ಪೋಟೋವನ್ನು ಆಶ್ಲೀಲವಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಆರೋಪ: ಮಹಿಳೆಯಿಂದ ಪೊಲೀಸ್ ದೂರು: ಆರೋಪಿ ಮೇಲೆ ಪ್ರಕರಣ ದಾಖಲು

Suddi Udaya

ಹೆಪಾಟೈಟಿಷ್ ಬಿ” ಎಂಬ ಲಿವರ್ ಸಮಸ್ಯೆಯಿಂದ ಬಳಲುತ್ತಿರುವ ತೆಂಕಕಾರಂದೂರಿನ ಯುವಕ ಪತ್ನಿ, ತಾಯಿ, 2 ಚಿಕ್ಕ ಮಕ್ಕಳೊಂದಿಗಿರುವ ಮನೆಯ ಆಧಾರಸ್ತಂಭ ಗುರುರಾಜ್ ಹೆಗ್ಡೆಯವರ ಚಿಕಿತ್ಸೆಗೆ ನೆರವಾಗಿ

Suddi Udaya

ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಅ.ಹಿ.ಪ್ರಾ. ಶಾಲಾ ವಾರ್ಷಿಕೋತ್ಸವ

Suddi Udaya
error: Content is protected !!