24.8 C
ಪುತ್ತೂರು, ಬೆಳ್ತಂಗಡಿ
March 7, 2026
ಶಾಲಾ ಕಾಲೇಜು

ವಾಣಿ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ


ಬೆಳ್ತಂಗಡಿ :ಒಂದು ಉತ್ತಮ ಸಂವಿಧಾನದಿಂದ ಉತ್ತಮ ದೇಶವನ್ನು ನಿರ್ಮಿಸಬಹುದು ಎಂದು ವಾಣಿ ಪದವಿಪೂರ್ವ ಕಾಲೇಜಿನ ರಾಜ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಮೀನಾಕ್ಷಿ ಎನ್ ಹೇಳಿದರು.


‌ ಅವರು ವಾಣಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಪ್ರತಿಯೊಬ್ಬ ವಿದ್ಯಾರ್ಥಿಗಳು ಮತ್ತು ನಾಗರಿಕರು ಭಾರತದ ಶ್ರೀಮಂತ ಪ್ರಜಾಪ್ರಭುತ್ವವನ್ನು ಗೌರವಿಸಲು, ಸಂವಿಧಾನವನ್ನು ಅಧ್ಯಯನ ಮಾಡಲು, ರಾಷ್ಟ್ರವನ್ನು ಏಕೀಕರಿಸುವ ಮೌಲ್ಯಗಳನ್ನು ಬಲಪಡಿಸಲು ಸಂವಿಧಾನ ದಿನವನ್ನು ಆಚರಿಸುವುದು ಮಹತ್ವದ ಕಾರ್ಯವಾಗಿದೆ. ಪ್ರಪಂಚದಲ್ಲೇ ಅತೀ ದೊಡ್ಡ ಸಂವಿಧಾನ ಎಂಬ ಹೆಗ್ಗಳಿಕೆಗೆ ಪಾತ್ರವಾದ ಭಾರತದ ಸವಿಂಧಾನವನ್ನು ಕುರಿತಾದ ಜ್ಞಾನವನ್ನು ಪ್ರತಿಯೊಬ್ಬರು ಹೊಂದಬೇಕಾಗಿದೆ. ಡಾ.ಬಿ ಆರ್ ಅಂಬೇಡ್ಕರ್ ಕೇವಲ ಸಂವಿಧಾನವನ್ನು ಮಾತ್ರ ರಚಿಸಲಿಲ್ಲ. ಅದರೊಂದಿಗೆ ಭಾರತದ ಸುಂದರ ಭವಿಷ್ಯವನ್ನೇ ರಚಿಸಿದರು. ಸಂವಿಧಾನ ಕುರಿತು ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆ ಹಾಗೂ ಕಾರ್ಯಕ್ರಮಗಳನ್ನು ಏರ್ಪಡಿಸುವುದು ಅತ್ಯಗತ್ಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲರಾದ ವಿಷ್ಣು ಪ್ರಕಾಶ್ ಎಂ ಸಂವಿಧಾನ ಪೀಠಿಕೆಯನ್ನು ವಾಚಿಸಿದರು. ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿಗಳಾದ ದಿನೇಶ್ ಗೌಡ, ಕು ಶ್ರಾವ್ಯ ಘಟಕ ನಾಯಕರಾದ ತೀರ್ಥೇಶ್, ಸುಶ್ಮಿತಾ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಸುಶ್ಮಿತಾ ಸ್ವಾಗತಿಸಿದರು. ಅಬ್ದುಲ್ ಶಾಹಿದ್ ಧನ್ಯವಾದವಿತ್ತರು . ಮೌಲ್ಯ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Related posts

ನಿಡ್ಲೆ ಸರ್ಕಾರಿ ಪ್ರೌಢಶಾಲೆಗೆ ಶೇ. 88.2 ಫಲಿತಾಂಶ

Suddi Udaya

ಎನ್ನೆಸ್ಸೆಸ್ ವತಿಯಿಂದ ರಾಷ್ಟ್ರೀಯ ಏಕತಾ ದಿನಾಚರಣೆ

Suddi Udaya

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಲ್ಪಾಡಿಯಲ್ಲಿ 78ನೇ ಸ್ವಾತಂತ್ರ್ಯದಿನಾಚರಣೆ

Suddi Udaya

ತೆಕ್ಕಾರು: ಕುಟ್ಟಿಗಳ ಬಜಾರ್ ಸ.ಹಿ.ಪ್ರಾ. ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಕೊಯ್ಯೂರು ಸರ್ಕಾರಿ ಪದವಿಪೂರ್ವ ಕಾಲೇಜು :ಕಾಲೇಜು ಪ್ರಾರಂಭೋತ್ಸವ

Suddi Udaya

ಉಜಿರೆಯ ಎಸ್‌ಡಿಎಂ ಸ್ವಾಯತ್ತ ಕಾಲೇಜಿಗೆ ಅಂತಾರಾಷ್ಟ್ರೀಯ ಗಣ್ಯರ ಭೇಟಿ: ಜಪಾನ್ ದೇಶದ ಪ್ರೋ. ಮಾಸ ಕಟೋಕ, ಕಾಂಬೋಡಿಯಾ ಸಚಿವ ಇಕೆ ಬುಂತ  ಭೇಟಿ

Suddi Udaya
error: Content is protected !!