23.1 C
ಪುತ್ತೂರು, ಬೆಳ್ತಂಗಡಿ
October 25, 2026
ಶಿಕ್ಷಣ ಸಂಸ್ಥೆ

ಉಜಿರೆಯ ಎಸ್.ಡಿ.ಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ : ನ. 28 ಮತ್ತು 29ಕ್ಕೆ ಅಂತಾರಾಷ್ಟ್ರೀಯ ವಿಚಾರ ಸಂಕಿರಣ

ಉಜಿರೆ : ಉಜಿರೆಯ ಎಸ್.ಡಿ.ಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ಹಾಗು ಬೆಂಗಳೂರು ವಿಭಾಗದ ಇನ್ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರ್ಸ್ ಸಹಯೋಗದಲ್ಲಿ ಇದೇ ಬರುವ ದಿನಾಂಕ ನವೆಂಬರ್ 28 ಮತ್ತು 29ರಂದು ಎಸ್.ಡಿ.ಎಂ ಐಟಿ ಕಾಲೇಜಿನಲ್ಲಿ ಎರುಡು ದಿನಗಳ (ETCOM- 2025) ಕಂಪ್ಯೂಟಿಂಗ್ ಮತ್ತು ಸಂವಹನದಲ್ಲಿ ಉದಯೋನ್ಮುಖ ಪ್ರವೃತ್ತಿಗಳ ಕುರಿತು ಅಂತರರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದೆ.

ವಿಚಾರ ಸಂಕಿರಣದ ಉದ್ಘಾಟನಾ ಕಾರ್ಯಕ್ರಮ ದಿನಾಂಕ ನ. 28 ರಂದು ಎಸ್.ಡಿ.ಎಂ ಐಟಿ ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ನಡೆಯಲಿದ್ದು, ಉದ್ಘಾಟಕರಾಗಿ ಕರ್ನಾಟಕ ಡಿಜಿಟಲ್ ಇಕಾನಮಿ ಮಿಷನ್ ನ ಕ್ಲಸ್ಟರ್ ಮುಖ್ಯಸ್ಥ ( ಕೆಡಿಇಎಮ್) ವೆಂಕಟೇಶ್ ದೇಶ್ಪಾಂಡೆ, ಗೌರವ ಉಪಸ್ಥಿತಿಯಲ್ಲಿ ಎಸ್.ಡಿ.ಎಂ ಐಟಿ ಮತ್ತು ಹಾಸ್ಟೆಲ್ ಆಡಳಿತ ವಿಭಾಗದ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ ಪೂರನ್ ವರ್ಮ, ಪುಣೆಯ ಸಿದ್ದಾಂತ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ನ ಯೋಜನಾ ಅಧಿಕಾರಿ ಡಾ. ಚಾಣಕ್ಯ ಕುಮಾರ್ ಜಹ ಮತ್ತು ಐಇಇಇ ಮಂಗಳೂರು ವಿಭಾಗದ ಉಪಾಧ್ಯಕ್ಷೆ ಡಾ. ಅಶ್ವಿನಿ ಬಿ. ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಅಶೋಕ್ ಕುಮಾರ್ ಟಿ ವಹಿಸಲಿದ್ದಾರೆ ಎಂದು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಹಾಗು ಕಾಲೇಜಿನ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

1680 ಸಂಶೋಧನಾ ಲೇಖನಗಳು ಸಲ್ಲಿಕೆ :

ಎರಡು ದಿನಗಳ ಕಾಲ ನಡೆಯಲಿರುವ ಅಂತಾರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಈಗಾಗಲೇ ಅಮೇರಿಕಾ,ಚೀನಾ, ಬಾಂಗ್ಲಾದೇಶ, ಶ್ರೀಲಂಕಾ, ಇಂಡೋನೇಷ್ಯಾ ಸೇರಿದಂತೆ ವಿವಿಧ ದೇಶಗಳ ಸಂಶೋಧಕರಿಂದ ಒಟ್ಟು 1680 ಸಂಶೋಧನಾ ಲೇಖನಗಳು ಸಲ್ಲಿಕೆಯಾಗಿವೆ, ಇದರಲ್ಲಿ ಅಂತಿಮವಾಗಿ 160 ಸಂಶೋಧಕರ ಲೇಖನಗಳು ಅಂತಾರಾಷ್ಟ್ರೀಯ ವಿಚಾರ ಗೋಷ್ಠಿಯಲ್ಲಿ ಮಂಡನೆಗೆ ನೋಂದಾವಣಿ ಮಾಡಿಕೊಂಡಿದೆ.

ಖ್ಯಾತ ತಜ್ಞರಿಂದ ಉಪನ್ಯಾಸ:

ವಿಚಾರ ಸಂಕಿರಣದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅಪಾರ ಅನುಭವ ಮತ್ತು ಪ್ರಸಿದ್ಧಿಯನ್ನು ಪಡೆದಿರುವ ಸಂಶೋಧಕರಾದ ಸಾಯಿ ಕೃಷ್ಣ, ಶ್ರೀಕಾಂತ್ ರೆಡ್ಡಿ ಗುಡಿ, ವೇಂಕಟೇಶ್ ದೇಶ್ಪಾಂಡೆ ಮತ್ತು ಸತ್ಯ ಮಹೇಶ್ ವೀರ ಪನೇನಿಯವರಿಂದ ಎರಡು ದಿನಗಳ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.

Box- ETCOM- 2025 :

ಕಂಪ್ಯೂಟಿಂಗ್ ಮತ್ತು ಸಂವಹನದಲ್ಲಿ ಉದಯೋನ್ಮುಖ ಪ್ರವೃತ್ತಿಗಳ ಕುರಿತಾದ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಮುಖ ಸಂಶೋಧಕರು, ಶಿಕ್ಷಣ ತಜ್ಞರು, ಉದ್ಯಮ ತಜ್ಞರು ಮತ್ತು ವೃತ್ತಿಪರರನ್ನು ಒಟ್ಟುಗೂಡಿಸಿ ಆಧುನಿಕ ತಂತ್ರಜ್ಞಾನಗಳ ಕ್ಷೇತ್ರದಲ್ಲಿ ತಮ್ಮ ಅನುಭವಗಳು, ನಾವೀನ್ಯತೆಗಳು ಮತ್ತು ಸಂಶೋಧನಾ ಫಲಿತಾಂಶಗಳನ್ನು ವಿನಿಮಯ, ವಿಮರ್ಶೆ ಮತ್ತು ವಿಚಾರ ಮಂಡನೆಯ ಉದ್ದೇಶವನ್ನು ಹೊಂದಿದೆ.

ಈ ವಿಚಾರ ಸಂಕಿರಣದಲ್ಲಿ ವಿದ್ಯುತ್, ಎಲೆಕ್ಟ್ರಾನಿಕ್, ಮಾಹಿತಿ ತಂತ್ರಜ್ಞಾನ, ಕಂಪ್ಯೂಟರ್ ಅಪ್ಲಿಕೇಶನ್, ನೆಟ್‌ವರ್ಕಿಂಗ್, ಇಂಟೆಲಿಜೆನ್ಸ್ ತಂತ್ರಜ್ಞಾನಗಳು, ವೈರ್‌ಲೆಸ್, ಮೊಬೈಲ್ ಮತ್ತು ಮಲ್ಟಿಮೀಡಿಯಾ ನೆಟ್‌ವರ್ಕಿಂಗ್ ಇತರೆ ವಿಚಾರಗಳ ತಂತ್ರಜ್ಞಾನಗಳ ಕ್ಷೇತ್ರಗಳಲ್ಲಿನ ಸಂಶೋಧನಾ ಸವಾಲುಗಳು ಮತ್ತು ಪ್ರಗತಿಯನ್ನು ತಿಳಿಸುವುದರ ಜೊತೆಗೆ ಇವಿಷ್ಟು ವಿಚಾರಗಳ ಕುರಿತಾಗಿ ಈ ಹಿಂದೆ ಪ್ರಕಟವಾಗದ ಪ್ರಬಂಧಗಳನ್ನು ಮಂಡಿಸಲು ETCOM – 2025 ಬಹುದೊಡ್ಡ ವೇದಿಕೆಯಾಗಿದೆ.

Related posts

ಪ್ರತಿಭಾ ಕಾರಂಜಿ ಸ್ಪರ್ಧೆ: ಬೆಳ್ತಂಗಡಿ ಎಸ್.ಡಿ.ಎಂ ಶಾಲಾ ವಿದ್ಯಾರ್ಥಿಗಳು ಕವಾಲಿಯಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆ

Suddi Udaya

ಎಕ್ಸೆಲ್ ವಿದ್ಯಾರ್ಥಿನಿ ವರ್ಣಿಕ ಎಚ್. ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆ

Suddi Udaya

ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಸರಕಾರಿ ಶಾಲಾ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ

Suddi Udaya

ಮೂಡುಬಿದಿರೆ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆ

Suddi Udaya

ಎಸ್ಸೆಸ್ಸೆಲ್ಸಿ ಫಲಿತಾಂಶ: ಸೇಕ್ರೆಡ್‌ ಹಾರ್ಟ್ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಶೇ.100 ಫಲಿತಾಂಶ

Suddi Udaya

ಉಜಿರೆ: ಶ್ರೀ. ಧ.ಮಂ.ಆಂಗ್ಲ ಮಾಧ್ಯಮ ಶಾಲಾ ಪ್ರಾರಂಭೋತ್ಸವದ ಸಂಭ್ರಮ -ಮಕ್ಕಳಿಗೆ ಅದ್ದೂರಿಯ ಸ್ವಾಗತ

Suddi Udaya
error: Content is protected !!