23.7 C
ಪುತ್ತೂರು, ಬೆಳ್ತಂಗಡಿ
April 24, 2026
ವರದಿ

ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಬೆಳ್ತಂಗಡಿ ಶಾಖೆಯ ಉದ್ಘಾಟನೆ ಸಹಕಾರಿ ಕ್ಷೇತ್ರದಿಂದ ನಾಡಿನ ಅಭಿವೃದ್ಧಿ:ಡಾ.ಧರ್ಮಪಾಲನಾಥ ಸ್ವಾಮೀಜಿ : ಸಂಸ್ಥೆಗಳು ಬೆಳೆದಂತೆ ಆ ಪ್ರದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತದೆ: ರಂಜನ್ ಜಿ ಗೌಡ

ಬೆಳ್ತಂಗಡಿ:ಸಹಕಾರಿ ಸೊಸೈಟಿಗಳು ಸಾಮಾನ್ಯ ಜನರ ಕಣ್ಣೀರೊರೆಸುವ ಪುಣ್ಯದ ಕೆಲಸ ಮಾಡುತ್ತಿದೆ.ಮಾನವೀಯತೆ,ಮನುಷ್ಯತ್ವ,ಸಹಕಾರ,ಪ್ರೀತಿ,ಸೌಹಾರ್ದತೆ ಮೂಲಕ ಜನರ ಕಷ್ಟಗಳಿಗೆ ಸ್ಪಂದಿಸುವ ಸಹಕಾರಿ ರಂಗ ಬಡವರ ಬಂಧು” ಎಂದುಕಾವೂರು ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಡಾ. ಧರ್ಮಪಾಲನಾಥ ಸ್ವಾಮೀಜಿ ನುಡಿದರು.

ಅವರು ನ.26ರಂದು ಬೆಳ್ತಂಗಡಿಯ ಚರ್ಚ್ ರೋಡ್ ಬಳಿಯ ಟ್ರಿನಿಟಿ ಕಾಂಪ್ಲೆಕ್ಸ್ ನಲ್ಲಿ ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಬೆಳ್ತಂಗಡಿ ಶಾಖೆಯ ಉದ್ಘಾಟನೆಯನ್ನು ನೇರವೇರಿಸಿ ಆಶೀರ್ವಚನ ನೀಡಿದರು.

ಯಾವುದೇ ಪ್ರದೇಶದಲ್ಲಿ ಸಂಘ,ಸಂಸ್ಥೆಗಳು ಹೆಚ್ಚಾಗಿ ಹುಟ್ಟಿಕೊಂಡಾಗ ಅಲ್ಲಿನ ಮೌಲ್ಯ ಹೆಚ್ಚುತ್ತದೆ.ದೇಶದ ಪ್ರಗತಿಯ ಮೂಲ ಗ್ರಾಮೀಣ ಭಾಗ.ಗ್ರಾಮೀಣ ಜನರ ಹೃದಯ ಶ್ರೀಮಂತಿಕೆ,ಕೃಷಿ,ಹೈನುಗಾರಿಕೆ ಬೆನ್ನೆಲುಬಾಗಿದ್ದು, ಅಸ್ತಿತ್ವ ನಿರ್ಮಿಸುತ್ತದೆ.ಗುರಿ ಮುಟ್ಟುವ ಜೀವನ ಮೌಲ್ಯಗಳೊಂದಿಗೆ ಭಗವಂತ ನೀಡಿದ ಶರೀರವನ್ನು ಸಮಾಜದ ಪ್ರಗತಿಗೂ ಉಪಯೋಗಿಸಿಕೊಂಡು ಮುನ್ನಡೆಯಬೇಕು ಎಂದರು.

ಸಂಘದ ಅಧ್ಯಕ್ಷ ರಂಜನ್ ಜಿ. ಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ ಸಹಕಾರಿ ಸಂಸ್ಥೆಗಳು ಬೆಳೆದಂತೆ ಆ ಪ್ರದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತದೆ.ಇಗಾಗಲೇ ನಮ್ಮ ಸೊಸೈಟಿ ವತಿಯಿಂದ ವಿವಿಧ ಜನಪರ ಕೆಲಸ ಕಾರ್ಯಗಳನ್ನು ನಡೆಸಲಾಗುತ್ತಿದೆ ಎಂದರು.ಬೆಳ್ತಂಗಡಿ ನಗರ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ ಮಾತನಾಡಿ ಬೆಳ್ತಂಗಡಿಯ ಅಭಿವೃದ್ಧಿಯ ಹಿಂದೆ ಸಹಕಾರಿ ಸಂಸ್ಥೆಗಳ ಕೊಡುಗೆ ಅಪಾರವಾಗಿದೆ.ಚಿನ್ನದ ಅಂಗಡಿ ಮತ್ತು ಸೊಸೈಟಿ ಪ್ರಾರಂಭವಾಗುತ್ತಲೇ ಇದೆ. ಸಂಸ್ಥೆಯ ಬೆಳವಣಿಗೆಯಲ್ಲಿ ಆಡಳಿತ ಮಂಡಳಿಯಷ್ಟೇ ಸಿಇಓ ಮತ್ತು ಸಿಬ್ಬಂದಿಗಳ ಪಾತ್ರ ಬಹುಮುಖ್ಯವಾಗಿರುತ್ತದೆ ಎಂದರು.

ಜಿಲ್ಲಾ ಒಕ್ಕಲಿಗ ಗೌಡರ ಸೇವಾ ಸಂಘದ ಅಧ್ಯಕ್ಷ ಡಿ.ಬಿ. ಬಾಲಕೃಷ್ಣ ಗೌಡ ಮಾತನಾಡಿ ಸಹಕಾರಿ ಸಂಘಗಳು ಅಭಿವೃದ್ಧಿಗೊಂಡಾಗ ನಾಡಿನ ಪ್ರಗತಿ ಸಾಧ್ಯವಾಗುತ್ತದೆ ಎಂದರು.ಮಾಜಿ ಸಚಿವರು,ಪ್ರಸನ್ನ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ಗಂಗಾಧರ ಗೌಡ, ಉಜಿರೆ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಬಾಲಕೃಷ್ಣ ಗೌಡ ಕೇರಿಮಾರು, ಬೆಳ್ತಂಗಡಿ ತಾಲೂಕು ಒಕ್ಕಲಿಕ ಗೌಡರ ಸೇವಾ ಟ್ರಸ್ಟ್ ಅಧ್ಯಕ್ಷ ಮೋಹನ್ ಗೌಡ ಕಲ್ಮಂಜ, ಕಾರ್ಯಾಧ್ಯಕ್ಷ,ವಕೀಲ ಶ್ರೀನಿವಾಸ ಗೌಡ ಬೆಳಾಲು, ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕ ಭಾರತಿ ಜಿ. ಭಟ್, ಸೌಹಾರ್ದ ಅಭಿವೃದ್ಧಿ ಅಧಿಕಾರಿ ನಂದನ್ ಬಿ.ಎಸ್., ಜಿಲ್ಲಾ ಒಕ್ಕಲಿಗ ಗೌಡ ಸೇವಾ ಸಂಘದ ನಿರ್ದೇಶಕರಾದ ವಿಜಯ ಗೌಡ ವೇಣೂರು, ಸೌಮ್ಯಲತಾ ಜಯಂತ್ ಗೌಡ, ಜತೆ ಕಾರ್ಯದರ್ಶಿ ದಾಮೋದರ ಗೌಡ ಸುರುಳಿ, ಜತೆ ಕೋಶಾಧಿಕಾರಿ ಸೂರಜ್ ಗೌಡ ವಳಂಬ್ರ, ವಕೀಲ ನವೀನ್ ಗೌಡ,ಸಂಘದ ಉಪಾಧ್ಯಕ್ಷ ಶಿವಕಾಂತ ಗೌಡ, ಮುಖ್ಯಕಾರ್ಯ ನಿರ್ವಹಣಾಧಿಕಾರಿ ದಿನೇಶ್ ಗೌಡ ಕಲ್ಲಾಜೆ, ನಿರ್ದೇಶಕರುಗಳಾದ ಲಕ್ಷ್ಮಣ ಗೌಡ, ಜಯಂತ ಗೌಡ ಗುರಿಪಳ್ಳ, ಸುಂದರ ಗೌಡ ಪುಡ್ಕೆತ್ತು, ಕೃಷ್ಣಪ್ಪ ಗೌಡ ಬೇಂಗಳ,ಧರ್ಮರಾಜ ಗೌಡ ಅಡ್ಕಾಡಿ,ಜಯಂತ ಗೌಡ ಓಣಿಯಾಲು, ಭರತ್ ಗೌಡ ಹಾನಿಬೆಟ್ಟು,ಕೆ.ಸಂಜೀವ ಗೌಡ ಪಾಂಚಜನ್ಯ, ಸರೋಜಿನಿ ವಿಜಯ ಕುಮಾರ್, ಡಿ. ಚೇತನಾ ಚಂದ್ರಶೇಖರ ಗೌಡ ಉಪಸ್ಥಿತರಿದ್ದರು.ಅನುಪಮ ಸತೀಶ್ ಗೌಡ ಪ್ರಾರ್ಥಿಸಿದರು.ಭವ್ಯಾ ಸುರೇಂದ್ರ ಗೌಡ ಹಾಗೂ ಹರಿಣಾಕ್ಷಿ ರತ್ನಾಕರ ಗೌಡ ಕಾರ್ಯಕ್ರಮ ನಿರೂಪಿಸಿದರು.

ವ್ಯವಹಾರದೊಂದಿಗೆ ಇತರ ಚಟುವಟಿಕೆಗಳು:ಉಜಿರೆ, ಅರಸಿನಮಕ್ಕಿ, ಇಂದಬೆಟ್ಟು, ಬೆಳ್ತಂಗಡಿಯಲ್ಲಿ ಶಾಖೆಗಳನ್ನು ಹೊಂದಿರುವ ಸಂಘವು ಪ್ರತಿವರ್ಷ ರಕ್ತದಾನ ಶಿಬಿರ, ಕ್ರೀಡಾಕೂಟ, ಕೆಂಪೇಗೌಡ ಜಯಂತಿ ಆಚರಣೆ, ಆದಿಚುಂಚನಗಿರಿ ಶಾಖಾ ಮಠಕ್ಕೆ ಸಹಕಾರ, ಬೆಳ್ತಂಗಡಿ ತಾಲೂಕು ಒಕ್ಕಲಿಗರ ಗೌಡರ ಸಂಘದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಸಹಕಾರ ನೀಡುತ್ತಾ ಬರುತ್ತಿದೆ.ಸೊಸೈಟಿಯಲ್ಲಿ ಒಟ್ಟು ೧೨ ಕ್ಕಿಂತ ಹೆಚ್ಚು ಸಿಬ್ಬಂದಿಗಳಿದ್ದಾರೆ. ಕಳೆದ ವರ್ಷ ೧೫೦ ಕೋಟಿ ರೂ.ಗೂ ಅಧಿಕ ವ್ಯವಹಾರ ನಡೆಸಿ ಸುಮಾರು ೫೪ ಲಕ್ಷ ರೂ.ಗಿಂತ ಹೆಚ್ಚು ಲಾಭ ಗಳಿಸಿದೆ. ಸಂಘದ ಕೆಲಸ ಕಾರ್ಯಗಳಿಗೆ ಹಲವಾರು ಪ್ರಶಸ್ತಿ ಮನ್ನಣೆ ದೊರಕಿದೆ.

ಗ್ರಾಮೀಣ ಭಾಗದ ರೈತಾಪಿವರ್ಗದವರಿಗೂ ಬ್ಯಾಂಕಿನ ಸೌಲ ಸಿಗಬೇಕು: ಗ್ರಾಮೀಣ ಭಾಗದ ಬಡವರ,ರೈತಾಪಿ ವರ್ಗದವರಿಗೆ ಬ್ಯಾಂಕಿನ ಸಕಲ ಸೌಲಭ್ಯಗಳು ದೊರೆಯುವಂತಾಗಬೇಕು ಎಂಬ ಉದ್ದೇಶದಿಂದ ಪ್ರಾರಂಭಿಸಿದ ಉಜಿರೆ ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘವು ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವುದು ಸಂತಸ ತಂದಿದೆ”ಎಂದು ಕಾಲಬೈರವೇಶ್ವರ ಸೊಸ ಅಧ್ಯಕ್ಷ ರಂಜನ್ ಜಿ ಗೌಡ ಹೇಳಿದರು.

Related posts

ದ..ಕ. ಜಿಲ್ಲಾ ಕ.ಸಾ.ಪ. ವತಿಯಿಂದ ಸಂಸ್ಥಾಪಕ ನಾಲ್ವಡಿ ಕೃಷ್ಣರಾಜ ಅರಸ್ ಜನ್ಮದಿನಾಚರಣೆ

Suddi Udaya

ಉಜಿರೆ ಗ್ರಾಮ ಪಂಚಾಯತ್ ನಲ್ಲಿ ಆರ್ ಪಿಎಲ್ ತರಬೇತಿಯ ಕಿಟ್ ಮತ್ತು ಸರ್ಟಿಫಿಕೇಟ್ ವಿತರಣೆ

Suddi Udaya

ಗರ್ಡಾಡಿ: ಕುಂಡದಬೆಟ್ಟು ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು: ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರು

Suddi Udaya

ಪಡಂಗಡಿ ಗ್ರಾ.ಪಂ. ನಲ್ಲಿ ಮಹಿಳಾ ಗ್ರಾಮ ಸಭೆ ಮತ್ತು ಸಿರಿ ಸಂಜೀವಿನಿ ಗ್ರಾಮ ಪಂಚಾಯತ್ ಮಹಿಳಾ ಒಕ್ಕೂಟದ ಮಹಾಸಭೆ

Suddi Udaya

ರೈತರ, ಯುವಜನರ, ಬಡವರ, ಮಧ್ಯಮ ವರ್ಗದವರ ವಿರೋಧಿ ಬಜೆಟ್: ರಕ್ಷಿತ್ ಶಿವರಾಂ

Suddi Udaya

ಬೆಳ್ತಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಶೇ.94% ಫಲಿತಾಂಶ

Suddi Udaya
error: Content is protected !!