September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಕ್ಕಿಂಜೆ ಸರಕಾರಿ ಪ್ರೌಢಶಾಲೆಯಲ್ಲಿ ಹದಿಹರೆಯದ ಆರೋಗ್ಯ–ನೈರ್ಮಲ್ಯ ಕುರಿತು ತಜ್ಞರಿಂದ ಮಾಹಿತಿ ಕಾರ್ಯಾಗಾರ

ಕಕ್ಕಿಂಜೆ : ಸರಕಾರಿ ಪ್ರೌಢಶಾಲೆ ಕಕ್ಕಿಂಜೆಯ ವಿದ್ಯಾರ್ಥಿನಿಯರಿಗಾಗಿ ಹದಿಹರೆಯದ ಶಿಕ್ಷಣ, ಆರೋಗ್ಯ ಮತ್ತು ನೈರ್ಮಲ್ಯದ ಕುರಿತಾಗಿ ವಿಶೇಷ ಮಾಹಿತಿ ಕಾರ್ಯಾಗಾರವನ್ನು ನ.25 ರಂದು ಕಕ್ಕಿಂಜೆಯ ಶ್ರೀ ಕೃಷ್ಣ ಆಸ್ಪತ್ರೆಯ ಸಭಾಂಗಣದಲ್ಲಿ ಆಯೋಜಿಸಲಾಯಿತು. ಮಂಗಳೂರು ಕೆ.ಎಂ.ಸಿ.ಯ ತಜ್ಞ ವೈದ್ಯೆ ಡಾ. ಕಾರುಣ್ಯ ಅವರು ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಕಿಶೋರಿ ವಯಸ್ಸಿನಲ್ಲಿ ಕಾಣಿಸಿಕೊಳ್ಳುವ ಶಾರೀರಿಕ–ಮಾನಸಿಕ ಬದಲಾವಣೆಗಳು, ಆರೋಗ್ಯ ಸಮಸ್ಯೆಗಳು ಹಾಗೂ ಅವುಗಳ ಪರಿಹಾರ ಕ್ರಮಗಳ ಬಗ್ಗೆ ವಿದ್ಯಾರ್ಥಿನಿಯರಿಗೆ ಸ್ಪಷ್ಟ ಮತ್ತು ಪ್ರಾಯೋಗಿಕ ಮಾರ್ಗದರ್ಶನ ನೀಡಿದರು.

ಡಾ. ಕಾರುಣ್ಯ ಅವರು ತಿಂಗಳಿಗೆ ಒಮ್ಮೆ ಆಗುವ ಆರೋಗ್ಯ ಸಮಸ್ಯೆಗಳು, ಪೌಷ್ಠಿಕ ಆಹಾರದ ಅಗತ್ಯತೆ, ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳುವ ವಿಧಾನಗಳು ಮತ್ತು ಆತ್ಮರಕ್ಷಣೆ ಕುರಿತ ಮಾಹಿತಿಯನ್ನು ಉದಾಹರಣೆಗಳೊಂದಿಗೆ ವಿವರಿಸಿದರು. ವಿದ್ಯಾರ್ಥಿನಿಯರ ವಿವಿಧ ಪ್ರಶ್ನೆಗಳಿಗೆ ತಜ್ಞರು ಸಮರ್ಪಕ ಉತ್ತರ ನೀಡಿ ಜಾಗೃತಿ ಮೂಡಿಸಿದರು.

ಕಾರ್ಯಕ್ರಮವನ್ನು ಶ್ರೀಕೃಷ್ಣ ಆಸ್ಪತ್ರೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದು, ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ಶಾಲೆಯ ಶಿಕ್ಷಕ ವೃಂದ ಕಾರ್ಯಗತಗೊಳಿಸಲು ಸಹಕರಿಸಿದರು. ವಿದ್ಯಾರ್ಥಿನಿಯರಲ್ಲಿ ಆರೋಗ್ಯ ಜಾಗೃತಿ ಬೆಳೆಸುವ ಉದ್ದೇಶಕ್ಕೆ ಈ ಕಾರ್ಯಕ್ರಮ ನೆರವಾದಂತಾಗಿದೆ ಎಂದು ಆಯೋಜಕರು ತಿಳಿಸಿದರು.

Related posts

ಮಕ್ಕಾದಲ್ಲಿ ನಿಧನ ಹೊಂದಿದ ಉಮ್ರಾ ಯಾರ್ತಾರ್ಥಿಯ ಅಂತ್ಯಸಂಸ್ಕಾರ‌ಕ್ಕೆ ನೇತೃತ್ವ ವಹಿಸಿದ ಕಿಲ್ಲೂರಿನ ಅಬ್ದುಲ್ ಅಝೀಝ್ ಝುಹುರಿ

Suddi Udaya

ಉಜಿರೆ ರುಡ್‌ಸೆಟ್ ಸಂಸ್ಥೆಯಲ್ಲಿ ಉದ್ಯಮಶೀಲತಾಭಿವೃದ್ಧಿ ತರಬೇತಿಯ ಸಮಾರೋಪ

Suddi Udaya

ಕುಕ್ಕೇಡಿ ಗ್ರಾ.ಪಂ. ನಿಂದ ಗೃಹಲಕ್ಷ್ಮಿ ಯೋಜನೆಗೆ ಚಾಲನೆ

Suddi Udaya

ಹತ್ಯಡ್ಕ : ಶ್ರೀ ವಿಠೋಬ ರಕುಮಾಯಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶೃಂಗೇರಿಯ ಜಗದ್ಗುರು ಭಾರತೀತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಯವರಿಂದ ರೂ.5 ಲಕ್ಷ ದೇಣಿಗೆ

Suddi Udaya

ಬೆಳ್ತಂಗಡಿ ತಾಲೂಕು ಆದಿದ್ರಾವಿಡ ಸಮಾಜ ಸೇವಾ ಸಂಘದ ಕುಕ್ಕಳ – ಮಡಂತ್ಯಾರು ಗ್ರಾಮ ಸಮಿತಿ ರಚನೆ

Suddi Udaya

ಹೊಕ್ಕಾಡಿಗೋಳಿ: ಮಹಿಷಮರ್ಧಿನಿ ಕಂಬಳ ಸಮಿತಿ ವೀರ ವಿಕ್ರಮ ಜೋಡುಕರೆ ಬಯಲು ಕಂಬಳದ ಪೂರ್ವಾಭಾವಿ ಸಭೆ

Suddi Udaya
error: Content is protected !!