24.8 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ತಾಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯ ವೈಯಕ್ತಿಕ ಹಾಗೂ ಸಾಮೂಹಿಕ ವಿಭಾಗದಲ್ಲಿ ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಗೆ ಪ್ರಥಮ ಸ್ಥಾನ

ಉಜಿರೆ: ಶಾಲಾ ಸಾಕ್ಷರತೆ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೆಳ್ತಂಗಡಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಬೆಳ್ತಂಗಡಿ ಹಾಗೂ ಅನುಗ್ರಹ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆ ಉಜಿರೆ ಇದರ ಸಂಯುಕ್ತ ಆಶ್ರಯದಲ್ಲಿ  ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ವಿಜ್ಞಾನ ವಸ್ತುಪ್ರದರ್ಶನ ಸ್ಪರ್ಧೆಯು ಅನುಗ್ರಹ ಸಭಾಭವನದಲ್ಲಿ ನಡೆಯಿತು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಶಾಲಾ ಪ್ರಾಂಶುಪಾಲರಾದ ವಂ ಫಾ ವಿಜಯ್ ಲೋಬೊ ಇವರು ಮಾತನಾಡುತ್ತಾ ಇದು ವಿದ್ಯಾರ್ಥಿಗಳ ಬೆಳವಣಿಗೆಗೆ ಪೂರಕವಾಗಿದೆ ಇಲಾಖೆಯ ಪ್ರೋತ್ಸಾಹವನ್ನು ವಿದ್ಯಾರ್ಥಿಗಳು ಸದಪಯೋಗಪಡಿಸಿಕೊಂಡು ಸಾಧನೆ ಮಾಡಬೇಕಿದೆ ಎಂದು ಹೇಳಿದರು. ಸರ್ಕಾರಿ ಪ್ರೌಢಶಾಲೆ ಪುತ್ತಿಲ ಇಲ್ಲಿನ ಮುಖ್ಯಶಿಕ್ಷಕರಾದ ಶ್ರೀ ಮಹೇಂದ್ರ ಇವರು ವಿಜೇತ ವಿದ್ಯಾರ್ಥಿಗಳನ್ನು ಘೋಷಿಸಿದರು. ವೇದಿಕೆಯಲ್ಲಿ ಶಾಲಾ ಸಂಚಾಲಕರಾದ ವಂ ಫಾ ಅಬೆಲ್ ಲೋಬೊ, ಶಿಕ್ಷಣ ಸಂಯೋಜಕರಾದ ಶ್ರೀ ಸಿದ್ದಲಿಂಗಸ್ವಾಮಿ, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ರಾಧಾಕೃಷ್ಣ, ತೀರ್ಪುಗಾರರಾದ ಶ್ರೀ ಜೆರಾಲ್ಡ್ ,ಶ್ರೀ ಹರ್ಷಿತ್, ಶ್ರೀ ಶರತ್ ಕುಮಾರ್ ಉಪಸ್ಥಿತರಿದ್ದರು. ವೈಯಕ್ತಿಕ ಹಾಗೂ ಸಾಮೂಹಿಕ ವಿಭಾಗದಲ್ಲಿ ಒಟ್ಟು 63 ತಂಡಗಳು ಭಾಗವಹಿಸಿದ್ದವು. ವೈಯಕ್ತಿಕ ವಿಭಾಗದಲ್ಲಿ ಪಂಚಮ್ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆ ಉಜಿರೆ ಪ್ರಥಮ. ಸಮನ್ಯು ಎಸ್ ಡಿ ಎಮ್ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿ ದ್ವಿತೀಯ, ರಾಯಿಸ್ಟನ್ ಲೂಯಿಸ್ ಸರಕಾರಿ ಉನ್ನತೀಕರಿಸಿದ ಶಾಲೆ ಕೊರಂಜ ತೃತೀಯ, ಸಾಮೂಹಿಕ ವಿಭಾಗದಲ್ಲಿ ಶಿವಪ್ರಸಾದ್ ಮತ್ತು ಎಡ್ವಿನ್ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆ, ಉಜಿರೆ ಪ್ರಥಮ, ಸುಪ್ರಜಿತ್ ರಾವ್ ಮತ್ತು ಗ್ರಹೇಶ್ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆ ಲಾಯಿಲ, ಮಹಮ್ಮದ್ ಹಫೀಳ್ ಮತ್ತು ಮಹಮ್ಮದ್ ಆಫ್ರಿನ್ ಸರ್ಕಾರಿ ಉನ್ನತಿಕರಿಸಿದ ಶಾಲೆ ಕೊರಂಜ ತೃತೀಯ ಸ್ಥಾನ ಪಡೆದುಕೊಂಡವು. ಈ ತಂಡಗಳು 29.11.2025 ರಂದು ಪುತ್ತೂರಿನಲ್ಲಿ ನಡೆಯುವ ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿವೆ.

Related posts

ಜ.20: ಬೆಳ್ತಂಗಡಿ ತಾಲೂಕು 2ನೇ ಗಮಕ ಸಮ್ಮೇಳನ

Suddi Udaya

ಬೆಳ್ತಂಗಡಿ: ನಕ್ಸಲ್ ಬಿ.ಜಿ. ಕೃಷ್ಣಮೂರ್ತಿ ಮತ್ತು ಸಾವಿತ್ರಿ ಕಸ್ಟಡಿ ಅಂತ್ಯ ವಾಪಸ್ ಕೇರಳ ಜೈಲಿಗೆ ಕಳುಹಿಸಿದ ನ್ಯಾಯಾಲಯ

Suddi Udaya

ಪುದುವೆಟ್ಟು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೇಸಿಗೆ ಶಿಬಿರದ ಉದ್ಘಾಟನೆ

Suddi Udaya

ಮಡಂತ್ಯಾರು ಸಿಎ ಬ್ಯಾಂಕ್ ನೇತೃತ್ವದಲ್ಲಿ ದ.ಕ. ಜಿಲ್ಲಾ ಮಟ್ಟದ 72ನೇ ಸಹಕಾರ ಸಪ್ತಾಹಕ್ಕೆ ಚಾಲನೆ: ಮಡಂತ್ಯಾರು ನಗರದಲ್ಲಿ ಆದ್ದೂರಿಯ ಮೆರವಣಿಗೆ, ಸಾಧಕ 72 ಮಂದಿಗೆ ಕೃಷಿ ಸಿಂಧೂರ ಪ್ರಶಸ್ತಿ ಹಾಗೂ 86ಮಂದಿ ಸಾಧಕರಿಗೆ ಕ್ಷೀರ ರತ್ನ ಪ್ರಶಸ್ತಿ ಪ್ರದಾನ

Suddi Udaya

ಎ.28: ಬೆಳ್ತಂಗಡಿ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಸಭಾಂಗಣದ ಉದ್ಘಾಟನೆ

Suddi Udaya

ಕೊಯ್ಯೂರು- ಗೇರುಕಟ್ಟೆ ಮೂಲಕ ಬೆಳ್ತಂಗಡಿಗೆ ಬಸ್ಸು ಸೌಕರ್ಯಕ್ಕೆ ಮನವಿ

Suddi Udaya
error: Content is protected !!