23.5 C
ಪುತ್ತೂರು, ಬೆಳ್ತಂಗಡಿ
March 7, 2026
ತಾಲೂಕು ಸುದ್ದಿಪ್ರಮುಖ ಸುದ್ದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ ಸಿ.ಎ ವೃತ್ತಿಪರ ಶಿಕ್ಷಣದ ಅವಕಾಶಗಳ ಬಗ್ಗೆ ಕಾರ್ಯಾಗಾರ

ಬೆಳ್ತಂಗಡಿ : ವಾಣಿ ಪದವಿ ಪೂರ್ವ ಕಾಲೇಜು, ಬೆಳ್ತಂಗಡಿ ಆತಿಥ್ಯದಲ್ಲಿ The Institute of Chartered Accountants of India (ICAI) ಇದರ Committee on Career Counselling ವತಿಯಿಂದ CAFY & Super Mega Career Counselling Programme (CAFY 4.0) ಅನ್ನು ನ. 27 ರಂದು ಕಾಲೇಜಿನಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು.

ಅಖಿಲ ಭಾರತ ಮಟ್ಟದ ಸಿಎ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಿ ಸಿ.ಎ ಆಕಾಶದೀಪ್ ಪೈ (Counsellor) ಹಾಗೂ ಸಿ.ಎ ನಿತಿನ್ ಬಾಳಿಗ (SICASA Chairman, Mangaluru Branch of SIRC of ICAI)ಇವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ, ಸಿಎ ವೃತ್ತಿಪರ ಶಿಕ್ಷಣದ ಅವಕಾಶಗಳು, ಪರೀಕ್ಷಾ ಹಂತಗಳು ಹಾಗೂ ವಾಣಿಜ್ಯ ಕ್ಷೇತ್ರದಲ್ಲಿ ಇರುವ ಭವಿಷ್ಯದ ಸಾಧ್ಯತೆಗಳ ಕುರಿತು ಪ್ರೇರಣಾದಾಯಕ ಉಪನ್ಯಾಸ ನೀಡಿದರು. ಸಿಎ ಆಗಬೇಕೆಂಬ ಕನಸಿನ ಜೊತೆಗೆ ನಿರಂತರ ಪ್ರಯತ್ನ ಮತ್ತು ಅಧ್ಯಯನಶೀಲತೆಯನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕೆಂದು ಸಿಎ ಆಕಾಶದೀಪ ಪೈ ಕರೆ ನೀಡಿದರು.

ಕಾರ್ಯಕ್ರಮವನ್ನು ವಾಣಿ ಶಿಕ್ಷಣ ಸಂಸ್ಥೆಗಳ ಗೌರವಾಧ್ಯಕ್ಷರಾದ ಎಚ್. ಪದ್ಮಗೌಡ ಅವರು ಉದ್ಘಾಟನೆ ಮಾಡಿ, ವಿದ್ಯಾರ್ಥಿಗಳು ತಮ್ಮ ಗುರಿಗಳನ್ನು ಸ್ಪಷ್ಟಗೊಳಿಸಿಕೊಂಡು ಭವಿಷ್ಯ ನಿರ್ಮಾಣದಲ್ಲಿ ಇಂತಹ ಕಾರ್ಯಕ್ರಮಗಳ ಮಹತ್ವವನ್ನು ವಿವರಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ವಿಷ್ಣು ಪ್ರಕಾಶ್ ಅವರು ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶಂಕರ್ ರಾವ್ ಕಾರ್ಯಕ್ರಮವನ್ನು ನಿರ್ವಹಿಸಿದರು.

Related posts

ಶ್ರೀ ಕ್ಷೇತ್ರ ಗೆಜ್ಜೆಗಿರಿಯ ವಾರ್ಷಿಕ ಜಾತ್ರಾ ಮಹೋತ್ಸವ :ಪುದುವೆಟ್ಟು ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಮುಂಡಾಜೆ ಕಾಲೇಜಿನಲ್ಲಿ ನಶಾ ಮುಕ್ತ ಭಾರತ ಅಭಿಯಾನದಡಿ ಪ್ರತಿಜ್ಞಾವಿಧಿ ಬೋಧನೆ

Suddi Udaya

ಸೆ.17: ನಾರಾವಿ ಸಂತ ಅಂತೋನಿ ಪದವಿ ಕಾಲೇಜು ಎನ್ ಎಸ್ ಎಸ್ ವತಿಯಿಂದ ಉಚಿತ ಫಿಸಿಯೋಥೆರಪಿ ಹಾಗೂ ಹೊಮಿಯೋಪತಿಕ್ ತಪಾಸಣಾ ಶಿಬಿರ

Suddi Udaya

ಗುರುವಾಯನ ಕೆರೆ: ಶಕ್ತಿ ನಗರದ ನಿವಾಸಿ ಸುರೇಶ್ ಪೈ ಎಂ. ನಿಧನ

Suddi Udaya

ಓಡಿಲ್ನಾಳ: ಬಟ್ಟೆಮಾರ್ ನಲ್ಲಿ ಧರ್ಣಪ್ಪ ಪೂಜಾರಿ ಯವರ ಮನೆಗೆ ಗುಡ್ಡ ಕುಸಿತ

Suddi Udaya

ಇಲಂತಿಲ ಗ್ರಾ.ಪಂ. ನಲ್ಲಿ ವಿಕಲ ಚೇತನ ವಿಶೇಷ ಗ್ರಾಮ ಸಭೆ

Suddi Udaya
error: Content is protected !!