ಬೆಳ್ತಂಗಡಿ: ಉಜಿರೆ ಶ್ರೀ ಜನಾರ್ಧನ ದೇವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ. ವೈ. ವಿಜಯೇಂದ್ರರವರು ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಕ್ಷೇತ್ರಕ್ಕೆ ಆಗಮಿಸಿದ ವಿಜಯೇಂದ್ರ ಅವರನ್ನು ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಶರತ್ ಕೃಷ್ಣ ಪಡ್ವೆಟ್ನಾಯ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕ ಪ್ರತಾಪ ಸಿಂಹ ನಾಯಕ್, ಪ್ರಮುಖರಾದ ರವಿ ಕುಮಾರ್ ಬರೇಮೇಲು, ಡಾ.ಎಂ.ಎಂ. ದಯಾಕರ್, ಅನಂತ ಭಟ್ ಮಚ್ಚಿಮಲೆ,
ಜಯರಾಮ ಗೌಡ,ರವಿಂದ್ರ ಶೆಟ್ಟಿ ಬಳಂಜ, ಶಶಿಧರ ಕಲ್ಮಂಜ, ಶಶಿರಾಜ್ ಶೆಟ್ಟಿ, ಸೀತಾರಾಮ ಬೆಳಾಲ್, ಭರತ್ ಗೌಡ ಹಾಗೂ ಇತರರು ಇದ್ದರು.











